ಕೋಟ್ಯಾಂತರ ರೂಪಾಯಿ ಬಿಟ್ಟು ಗದ್ದೆಯಲ್ಲಿ ಉಳುಮೆ ಮಾಡುತ್ತಿರುವ ಡ್ರೋನ್, ಇವನೇ ನಿಜವಾದ ಮಣ್ಣಿನ ಮಗ ಎಂದ ಜನ
Sep 27, 2024, 15:52 IST
ಅವನೊಬ್ಬ ಮೋಸಗಾರ . ಡ್ರೋನ್ ಹಾರಿಸುವೆ ಎಂದೆಲ್ಲ ಹೇಳಿ ಹಲವರಿಗೆ ಕಾಗೆ ಹಾರಿಸಿದ್ದಾನೆ ಎಂಬೆಲ್ಲ ಮಾತು ಆಗಾಗ ಕೇಳಿ ಬರುತ್ತಿತ್ತು.ಡ್ರೋನ್ ವಿಚಾರಕ್ಕೆ ಇಡೀ ದೇಶದಾದ್ಯಂತ ಸುದ್ದಿ ಮಾಡಿ ಕನ್ನಡಿಗರ ಕಣ್ಣಲ್ಲಿ ಬ್ಯಾಡ್ ಬಾಯ್ ಎನ್ನಿಸಿಕೊಂಡಿದ್ದ ಡ್ರೋನ್ ಪ್ರತಾಪ್ ವರ್ಚಸ್ಸು ಬದಲಾಗಿದ್ದು ಬಿಗ್ ಬಾಸ್ ಗೆ ಹೋಗಿ ಬಂದ್ಮೇಲೆ.
ಬಿಗ್ ಬಾಸ್ ಸೀಸನ್ 10ರಲ್ಲಿ ಕಾಣಿಸಿಕೊಂಡಿದ್ದ ಡ್ರೋನ್ ಪ್ರತಾಪ್, ಕರ್ನಾಟಕದ ಜನರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದರು. ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಡ್ರೋನ್ ಪ್ರತಾಪ್, ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೂ ಆಗಾಗ ಸುದ್ದಿ ಮಾಡ್ತಿರುತ್ತಾರೆ. ಬಡ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಣ ಸಹಾಯ ಮಾಡ್ತಿರುವ ಪ್ರತಾಪ್, ಅಪ್ಪ – ಅಮ್ಮನ ಜೊತೆ ಹಳ್ಳಿಯಲ್ಲಿ ಕೆಲಸ ಮಾಡ್ತಿದ್ದಾರೆ.
https://www.instagram.com/reel/DAVeorBo7iB/?igsh=MWMwcW4wNzR2cDhuZw==
ಅಪ್ಪನಿಗೆ ಗದ್ದೆ ಕೆಲಸದಲ್ಲಿ ಸಹಾಯ ಮಾಡ್ತಿರುವ ಡ್ರೋನ್, ಸೋಶಿಯಲ್ ಮೀಡಿಯಾ ದಲ್ಲಿ ಇದ್ರ ಫೋಟೋಗಳನ್ನು ಹಂಚಿಕೊಳ್ತಿರುತ್ತಾರೆ. ಈ ಹಿಂದೆ ಗದ್ದೆ ನಾಟಿ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದರು. ಈಗ ಅಪ್ಪನ ಜೊತೆಗಿರುವ ಸುಂದರ, ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಡ್ರೋನ್ ಪ್ರತಾಪ್ ತಮ್ಮ ತಂದೆ ಮರಿಮಾದಯ್ಯ ಅವರ ಜೊತೆ ಗದ್ದೆಯಲ್ಲಿ ಕೆಲಸ ಮಾಡ್ತಿದ್ದಾರೆ. ಗದ್ದೆ ಕಂಟದ ಮೇಲೆ ಕುಳಿತ ಮಗನಿಗೆ ಅಪ್ಪ, ಎಲೆಯಲ್ಲಿ ಅನ್ನ, ಸಾಂಬಾರ್ ಹಾಕಿಕೊಡ್ತಾರೆ. ಅಪ್ಪನ ಜೊತೆ ಖುಷಿಯಾಗಿ ಊಟ ಮುಗಿಸುವ ಡ್ರೋನ್ ಪ್ರತಾಪ್, ಅದೇ ನೀರಿನಲ್ಲಿ ಕೈ ತೊಳೆದುಕೊಳ್ತಾರೆ. ಅವರ ಬಟ್ಟೆ ಕೊಳಕಾಗಿದ್ದು, ಕೈ ಕೆಸರಾದ್ರೆ ಬಾಯಿ ಮೊಸರು ಎಂಬುದನ್ನು ಪ್ರತಾಪ್ ಅರಿತಂತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.