ರೈಲ್ವೆ ನಿಲ್ದಾಣದಲ್ಲಿ 500 ರೂಪಾಯಿ ಕೂಲಿ ಮಾಡಿ ಇವತ್ತು IAS ಅಧಿಕಾರಿಯಾಗಿ ಬೆಳೆದು ನಿಂತ ವ್ಯಕ್ತಿ
Jan 31, 2025, 09:14 IST

ಎಲ್ಲರಿಗೂ ಅವಕಾಶಗಳು ಸಿಗುತ್ತದೆ ಆದರೆ ಹೇಗೆ ಬಳಸಿಕೊಳ್ಳುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಈ ವೈಫೈ ಬಳಸಿ ಕೆಲವರು ಬ್ಲೂಫಿಲಂ ವೀಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಇದೇ ಉಚಿತ ವೈ-ಫೈ ಬಳಸಿ ಕೂಲಿ ಕಾರ್ಮಿಕರೊಬ್ಬರು ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಸಾಧನೆ ಮಾಡಿದ್ದಾರೆ.
ಐಎಎಸ್ ಪರೀಕ್ಷೆ ದೇಶದ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಸತತ ಪರಿಶ್ರಮ ಮತ್ತು ಶ್ರದ್ಧೆಯಿದ್ರೆ ಖಂಡಿತವಾಗಿ ಸರಸ್ವತಿ ಕೃಪೆ ಸಿಗುತ್ತೆ ಎಂಬ ಮಾತಿದೆ. ಇದು ಬಹುತೇಕ ಎಲ್ಲರ ಜೀವನದಲ್ಲಿ ಸಾಬೀತಾಗಿದೆ. ಐಎಎಸ್ ಅಧಿಕಾರಿ ಶ್ರೀನಾಥ್ ಕೆ. ಅವರ ಜೀವನ ಮೇಲಿನ ಮಾತಿಗೆ ಸಾಕ್ಷಿ. ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡ್ಕೊಂಡಿದ್ದ ಶ್ರೀನಾಥ್ ಇಂದು ಐಎಎಸ್ ಅಧಿಕಾರಿಯಾಗಿದ್ದಾರೆ.
ಐಎಎಸ್ ಪರೀಕ್ಷೆ ತೇರ್ಗಡೆಯಾಗಲು ಅಭ್ಯರ್ಥಿಗಳು ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದುಕೊಂಡು, ಹಲವು ಪುಸ್ತಕಗಳಳನ್ನು ಖರೀದಿಸಿ ಅಭ್ಯಾಸ ಮಾಡುತ್ತಾರೆ. ಆದ್ರೆ ಶ್ರೀನಾಥ್ ವೈಫೈ ಕನೆಕ್ಷನ್‌ನಲ್ಲಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀನಾಥ್ ಕೇರಳದ ಮುನ್ನಾರ ಮೂಲದವರು. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಶ್ರೀನಾಥ್ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಶ್ರೀನಾಥ್ ತುಂಬಾ ಶ್ರದ್ಧೆಯಿಂದಲೇ ಕೂಲಿ ಕೆಲಸ ಮಾಡುತ್ತಿದ್ದರು. ಪ್ರಯಾಣಿಕರ ಬ್ಯಾಗ್‌ಗಳನ್ನು ತಲೆ ಮೇಲೆ ಹೊತ್ತು ಪ್ಲಾಟ್‌ಫಾರಂನಲ್ಲಿ ಓಡಾಡುತ್ತಿದ್ದರು. ಕಾರಣ, ಶ್ರೀನಾಥ್ ಸಂಬಳವೇ ಅವರ ಕುಟುಂದ ಆದಾಯದ ಮೂಲವಾಗಿತ್ತು. ಎರಡು ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಾಥ್ ಪ್ರತಿದಿನ 400 ರಿಂದ 500 ರೂಪಾಯಿವರೆಗೂ ಸಂಪಾದಿಸುತ್ತಿದ್ದರು.
ಇದೇ ಹಣದಲ್ಲಿ ಜೀವನ ನಡೆಸುತ್ತಿದ್ದ ಶ್ರೀನಾಥ್ ಅವರಿಗೆ ಏನಾದ್ರೂ ಸಾಧಿಸಬೇಕು ಎಂಬ ಉದ್ದೇಶದಿಂದ ಕೆಲಸದ ಜೊತೆ ಸಿವಿಲ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ಮೊಬೈಲ್‌ನಲ್ಲಿಯೇ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡು ಕೆಪಿಎಸ್‌ಸಿ ಪಾಸ್ ಮಾಡ್ತಾರೆ. ಒಂದು ನಿಶ್ಚಿತ ಉದ್ಯೋಗ ಪಡೆದುಕೊಂಡ ಮೇಲೆ ಶ್ರೀನಾಥ್ ಓದುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಕೆಲಸದ ಜೊತೆ ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಆರಂಭಿಸಿದರು. ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.