ಬಿಗ್ ಬಾಸ್ ಗೆ ಸೆಡ್ ಹೊಡೆಯಲು ಹೊಸ ರಿಯಾಲಿಟಿ ಶೋ ಆರಂಭ;

 
 ಗೆಲ್ಲುವ ಹುಚ್ಚು ಹಂಬಲ. ಟಿಆರ್ಪಿ ಹೆಚ್ಚಿಸಿಕೊಂಡು ಸೈ ಅನಿಸಿಕೊಳ್ಳೋ ಆಸೆ.ಈಗ ಎಲ್ಲೆಲ್ಲೂ ಪೈಪೋಟಿಯೇ ಪೈಪೋಟಿ. ಅದರಲ್ಲಿಯೂ ಸೀರಿಯಲ್​, ರಿಯಾಲಿಟಿ ಷೋಗಳಲ್ಲಿ ವಾಹಿನಿಗಳ ನಡುವೆ ಈಗ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಪ್ರೇಕ್ಷಕರನ್ನು ತಮ್ಮತ್ತ ಸೆಳೆದುಕೊಳ್ಳಲು ವಾಹಿನಿಗಳು ಇನ್ನಿಲ್ಲದ ತಂತ್ರಗಳನ್ನು ನಡೆಸುತ್ತಿವೆ. ದಂಪತಿ ಷೋ, ಡಾನ್ಸ್​ ಷೋ, ಹಾಸ್ಯ ಕಾರ್ಯಕ್ರಮ, ಮಕ್ಕಳ ನಾಟಕ, ದೊಡ್ಡವರ ನಾಟಕ.
 ಹೀಗೆ ರಿಯಾಲಿಟಿ ಷೋಗಳ ಭರ್ಜರಿ ಪ್ರದರ್ಶನ ವಾರಾಂತ್ಯದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಎಲ್ಲರನ್ನೂ ಮೀರಿಸಿ ಕಲರ್ಸ್​ ಕನ್ನಡ ವಾಹಿನಿಯ ಬಿಗ್​ಬಾಸ್​ ಸೀಸನ್​ 11 ಶುರುವಾಗಿದೆ. ಸಾಮಾನ್ಯವಾಗಿ ಉಳಿದೆಲ್ಲಾ ರಿಯಾಲಿಟಿ ಷೋಗಳಿಗಿಂತಲೂ ಬಿಗ್​ಬಾಸ್​ ಪ್ರತಿಬಾರಿಯೂ, ಎಲ್ಲಾ ಭಾಷೆಗಳಲ್ಲಿಯೂ ಅದರದ್ದೇ ಪಾರುಪತ್ಯ. ಅದೇ ಹೈಯೆಸ್ಟ್​ ಟಿಆರ್​ಪಿ ಪಡೆದುಕೊಳ್ಳುವುದು. ಪ್ರತಿನಿತ್ಯ ಬೈಯುತ್ತಲೇ ಸೀರಿಯಲ್​ ನೋಡುವಂತೆ, ಅದಕ್ಕಿಂತಲೂ ಹೆಚ್ಚು ಮಂದಿ ಬಿಗ್​ಬಾಸ್ ನೋಡುತ್ತಾರೆ.
ಬಿಗ್​ಬಾಸ್​​ಗೆ ಪ್ರತಿಯಾಗಿ ಯಾವ ರಿಯಾಲಿಟಿ ಷೋಗಳು, ಯಾವ ಭಾಷೆಯಲ್ಲಿಯೂ ಮೇಲೆ ಬರಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಆದರೆ ಇದೀಗ ಕನ್ನಡದ ಬಿಗ್​ಬಾಸ್​ಗೆ ಪೈಪೋಟಿ ಕೊಡಲೋ ಎಂಬಂತೆ ಜೀ ಕನ್ನಡ ವಾಹಿನಿಯ ಪ್ರೊಮೋ ಒಂದು ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ. ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ಶೀಘ್ರದಲ್ಲಿ ಎನ್ನುವ ಪ್ರೊಮೋ ಒಂದನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. 
ಅಷ್ಟಕ್ಕೂ ಇದು ಮನರಂಜನೆಯ ಹೊಸ ಚಾಪ್ಟರ್​ ಎಂದು ಶೀರ್ಷಿಕೆ ಕೊಡಲಾಗಿದೆ. ಇದು ಏನಿರಬಹುದು? ಬಿಗ್​ಬಾಸ್​ ಅನ್ನು ಮೀರಿ ಇದು ಅತಿದೊಡ್ಡ ರಿಯಾಲಿಟಿ ಷೋ ಆಗುವುದಾದರೆ ಅದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ ಅಭಿಮಾನಿಗಳು.ಎತ್ತ ಎನ್ನುವುದನ್ನು ಇನ್ನೂ ಅದರಲ್ಲಿ ತೋರಿಸಿಲ್ಲ. ಈ ಹಿಂದೆ ಇದೇ ರೀತಿಯ ಪ್ರೊಮೋ ತೋರಿಸಲಾಗಿತ್ತು, ಅದರ ಕಥೆಯೇನು ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ. ಉತ್ತರ ದೊರೆತಿಲ್ಲ ಹಾಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.