ಡಿ ವೋರ್ಸ್ ವಂದತಿ ಬೆನ್ನಲ್ಲೇ ಐಶ್ವರ್ಯ ರೈ ಗೆ ಮರೆಯಲಾಗದ ಗಿಫ್ಟ್ ಕೊಟ್ಟ ಅಭಿಷೇಕ್

 
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯ ವಿಚಾರ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಿದೆ. ಇವರು ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡರು ಎಂದು ಇತ್ತೀಚೆಗೆ ವರದಿ ಆಗಿತ್ತು. ಈ ಗುಮಾನಿ ಹುಟ್ಟಲು ಕಾರಣ ಆಗಿದ್ದು ಅನಂತ್ ಅಂಬಾನಿ ಮದುವೆ ದಿನ ನಡೆದ ಘಟನೆ. ಈ ವಿವಾಹ ಸಮಾರಂಬಕ್ಕೆ ಐಶ್ವರ್ಯಾ ಹಾಗೂ ಮಗಳು ಆರಾಧ್ಯಾ ಒಟ್ಟಾಗಿ ಬಂದರೆ, ಅಮಿತಾಭ್, ಅಭಿಷೇಕ್, ಜಯಾ ಪ್ರತ್ಯೇಕವಾಗಿ ಬಂದಿದ್ದರು. 
ಈ ಕಾರಣದಿಂದ ಇವರ ವಿಚ್ಛೇದನ ಸುದ್ದಿ ಹರಿದಾಡಿತ್ತು. ಈಗ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ಕಾರು ಗಿಫ್ಟ್ ನೀಡಿದರೇ ಎನ್ನುವ ಪ್ರಶ್ನೆ ಮೂಡಿದೆ. ವರದಿಗಳ ಪ್ರಕಾರ ಅಭಿಷೇಕ್ ಬಚ್ಚನ್ ಅವರು ಹೊಸ ಕಾರು ಖರೀದಿ ಮಾಡಿದ್ದಾರೆ. ಸೋದರಳಿಯ ಅಗಸ್ತ್ಯ ನಂದಾ, ಸೊಸೆ ನವ್ಯಾ ನವೇಲಿ ನಂದಾ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರನ್ನು ಅಭಿಷೇಕ್ ಹೊಸ ಕಾರಿನಲ್ಲಿ ಡಿನ್ನರ್​ಗೆ ಕರೆದುಕೊಂಡು ಹೋಗಿದ್ದಾರೆ.  <a href=https://youtube.com/embed/6stK0iSJY5Y?autoplay=1&mute=1><img src=https://img.youtube.com/vi/6stK0iSJY5Y/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆಗ ಹಲವರ ಗಮನ ಅಭಿಷೇಕ್ ಬಚ್ಚನ್ ಅವರ ಹೊಸ ಕಾರಿನ ನಂಬರ್ ಪ್ಲೇಟ್ ಕಡೆಗೆ ಹೋಗಿದೆ. ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನೇ ಅಭಿಷೇಕ್ ತಮ್ಮ ಕಾರಿನ ನಂಬರ್ ಪ್ಲೇಟ್ ಮಾಡಿಕೊಂಡಿದ್ದಾರೆ. ಐಶ್ವರ್ಯಾ ರೈ ಬಳಿ Mercedes-Benz S-Class ಕಾರು ಇತ್ತು. ಅದನ್ನು ಈಗ ಮಾರಾಟ ಮಾಡಲಾಗಿದೆ. ಈ ಕಾರಿನ ಸಂಖ್ಯೆ 5050 ಆಗಿತ್ತು. ಈಗ ಅಭಿಷೇಕ್ ಬಚ್ಚನ್ ಅವರ ಹೊಸ ಕಾರಿನ ಸಂಖ್ಯೆ ಕೂಡ 5050 ಆಗಿದೆ. ಹೀಗಾಗಿ, ಕೆಲವರು ಅಭಿಷೇಕ್ ಅವರು ಐಶ್ವರ್ಯಾಗೆ ಕಾರು ಗಿಫ್ಟ್ ಮಾಡಿದ್ದಾರೆ ಎಂದಿದ್ದಾರೆ.
ಇನ್ನೂ ಕೆಲವರು ಅಭಿಷೇಕ್ ಅವರು ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನು ತಮ್ಮ ಕಾರಿನ ಸಂಖ್ಯೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾತನಾಡಿದ್ದಾರೆ.ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಐಶ್ವರ್ಯಾ ಹಾಗೂ ಅಭಿಷೇಕ್ ಮದುವೆಯಾಗಲು ನಿರ್ಧರಿಸಿದರು. 2007ರಲ್ಲಿ ಐಶ್ವರ್ಯಾ-ಅಭಿಷೇಕ್ ಮದುವೆಯಾದರು. ಮದುವೆಯ ನಂತರ ಐಶ್ವರ್ಯಾ 2011 ರಲ್ಲಿ ಮಗಳು ಆರಾಧ್ಯಾಗೆ ಜನ್ಮ ನೀಡಿದರು. ಈಗ ಕಾರಿನ ಉಡುಗೊರೆ ವಿಚಾರದಿಂದ ಇವರ ವಿಚ್ಛೇದನ ವಿಚಾರಕ್ಕೆ ಬ್ರೇಕ್ ಬಿದ್ದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು‌ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.