ಡ್ರೋನ್ ಪ್ರತಾಪ್ ಬಗ್ಗೆ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ನಟಿ ತಾರಾಮ್ಮ, ಪಕ್ಕಾ ಬೆಚ್ಚಿಬೀಳ್ತೀರಾ

 

ಯಾರೇ ನೇರಪ್ರಸಾರದ ಕಾರ್ಯಕ್ರಮದಲ್ಲಿ ಯಾವುದೇ ವಿಷಯದ ಬಗ್ಗೆ ಪ್ರಶ್ನೋತ್ತರ ಮಾಲಿಕೆಯಲ್ಲಿ ಕಾಣಿಸಿಕೊಂಡರೂ, ಹಲವರ ಪ್ರಶ್ನೆ ಆ ವಿಷಯ ಬಿಟ್ಟು ಬಿಗ್​ಬಾಸ್​ ಬಗ್ಗೆ ಕೇಳುವುದು ಇದೆ.  ಬಿಗ್​ಬಾಸ್​ ಜನರನ್ನು ಆ ಪರಿಯಲ್ಲಿ ಆವರಿಸಿಕೊಂಡು ಬಿಟ್ಟಿದೆ. ಅದೇ ರೀತಿ ಇದೀಗ ತಾರಾ ಅವರಿಗೂ ಬಿಗ್​ಬಾಸ್​ ಬಗ್ಗೆ ಪ್ರಶ್ನೆ ಕೇಳಲಾಯಿತು. ಅಷ್ಟಕ್ಕೂ ತಾರಾ ಅವರು ಬಿಗ್​ಬಾಸ್​ನಲ್ಲಿ ಗೆಸ್ಟ್​ ಆಗಿ ಹೋಗಿದ್ದರು.

<a href=https://youtube.com/embed/XLFhiwWSuBw?autoplay=1&mute=1><img src=https://img.youtube.com/vi/XLFhiwWSuBw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
 ಆ ಸಂದರ್ಭದಲ್ಲಿ ಡೈಲಾಗ್​ಗಳಿಂದಲೇ ಎಲ್ಲರನ್ನೂ ಮರಳು ಮಾಡುವಲ್ಲಿ ನಿಸ್ಸೀಮರಾಗಿರುವ ಡ್ರೋನ್​ ಪ್ರತಾಪ್​ ತುಂಬಾ ಡಿಪ್ರೆಷನ್​ನಲ್ಲಿ ಇದ್ದರು. ಆಗ ಡ್ರೊನ್​ ಪ್ರತಾಪ್​ ಅವರಿಗೆ ತಾರಾ ಅವರು ಧೈರ್ಯ ತುಂಬಿದ್ದರು. ಆ ಬಗ್ಗೆ ತಾರಾ ಅವರಿಗೆ ನೇರಪ್ರಸಾರದಲ್ಲಿ ಪ್ರಶ್ನೆ ಕೇಳಲಾಗಿದೆ. ಅವರು ನಿಮಗೆ ಮೊದಲೇ ಗೊತ್ತಿತ್ತಾ ಎಂದು ಫ್ಯಾನ್​ ಒಬ್ಬರು ಪ್ರಶ್ನೆ ಕೇಳಿದ್ದಾರೆ. 

ಅದಕ್ಕೆ ತಾರಾ ಅವರು, ಇಲ್ಲ. ತುಂಬಾ ಮಂದಿ ಹಾಗೆ ಅಂದುಕೊಂಡಿದ್ದಾರೆ. ಡ್ರೋನ್​ ಪ್ರತಾಪ್​ ಒಮ್ಮೆ ವಿಮಾನದಲ್ಲಿ ಸಿಕ್ಕಿದ್ದು ಬಿಟ್ಟರೆ ಬಿಗ್​ಬಾಸ್​ನಲ್ಲಿಯೇ ನೋಡಿದ್ದು, ಮೊನ್ನೆ ಸೆಟ್​ಗೆ ಬಂದು ಒಂದು ಫೋಟೋ ತಗೊಂಡು ಹೋದ. ಅಷ್ಟು ಬಿಟ್ಟರೆ ಅವನ ಪರಿಚಯವೇ ನನಗೆ ಇಲ್ಲ. ನಾನು ಹೋದಾಗ ತುಂಬಾ ಬೇಸರದಲ್ಲಿ ಇದ್ದ ಎಂದು ಮಾತನಾಡಿಸಿದೆ ಅಷ್ಟೇ. 

ಅವನೊಬ್ಬನನ್ನೇ ಅಲ್ಲ, ಎಲ್ಲಾ ಸ್ಪರ್ಧಿಗಳನ್ನೂ ಮಾತನಾಡಿಸಿದ್ದೇನೆ ಎಂದರು. ಹಾಗೆನೇ ಡ್ರೋನ್​ ಪ್ರತಾಪ್​, ಫಿನಾಲೆಯವರೆಗೂ ಹೋಗಿದ್ದು, ಹಾಗೂ ರನ್ನರ್​ ಅಪ್​ ಆಗಿದ್ದು ಆಶ್ಚರ್ಯದ ಜೊತೆ ಖುಷಿಯೂ ತಂದಿದೆ ಎಂದರು. ಇದೇ ವೇಳೆ ಇನ್ನೊಬ್ಬರು ಈಗ ಇಷ್ಟೊಂದು ಸಿಂಪಲ್​  ಆಗಿದ್ದೀರಿ. ರಿಯಾಲಿಟಿ ಷೋನಲ್ಲಿ ಮೇಕಪ್​ ಜಾಸ್ತಿ ಮಾಡಿಕೊಳ್ಳುವುದು ಏಕೆ ಎಂದು ಪ್ರಶ್ನಿಸಿದರು. ಅದಕ್ಕೆ ತಾರಾ ನನಗೆ ಸಿಂಪಲ್​ ಆಗಿರುವುದು ಇಷ್ಟ. ಆದರೆ  ಪಾತ್ರಕ್ಕೆ ಬೇಕು ಅನ್ನಿಸಿದ್ದಾಗ ಮೇಕಪ್​ ಅನಿವಾರ್ಯ.

  ರಿಯಾಲಿಟಿ ಷೋಗಳಲ್ಲಿ ನಮ್ಮನ್ನು ಪ್ರೆಸೆಂಟೇಷನ್​ ಮುಖ್ಯವಾಗಿರುತ್ತದೆ. ನಾವು ಹೇಗೆ ಕಾಣಿಸಬೇಕು ಎಂದು  ನಿರ್ದೇಶಕರು ಹೇಳುತ್ತಾರೆ.  ಅವರಂತೆಯೇ ನೋಡಿಕೊಳ್ಳಬೇಕಾಗುತ್ತದೆ ಎಂದರು. ರಿಯಾಲಿಟಿ ಷೋಗಳು ಜನರಿಗೆ ಯಾಕೆ ಹತ್ತಿರವಾಗುತ್ತದೆ ಎಂದರೆ, ನಾವು ಅಲ್ಲಿ ಒಂದು ಪಾತ್ರ ಆಗಿರುವುದಿಲ್ಲ, ಬದಲಿಗೆ ನಾನು ನಾವಾಗಿರುತ್ತೇವೆ. ಅದಕ್ಕಾಗಿ ಎಂದರು. ಇದೇ ವೇಳೆ ತಮ್ಮ ಮಗನ ಬಗ್ಗೆಯೂ ಮಾತನಾಡಿದ ತಾರಾ, ಮಗ ಶ್ರೀಕೃಷ್ಣ ದೇವರು ಕೊಟ್ಟ ಮಗ. ಆತ ಮುದ್ದು ಮಗ. ತುಂಬಾ ಕೇರಿಂಗ್​ ಮಗ. ತುಂಬಾ ಬುದ್ಧಿವಂತ. ಸ್ನೇಹಿತರು ಎಂದ್ರೆ ಅವನಿಗೆ ಇಷ್ಟ ಎಂದರು. ಹೀಗೆ ಹಲವರ ಪ್ರಶ್ನೆಗಳಿಗೆ ನಟಿ ಉತ್ತರಿಸಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.