Toxic ಶೂಟಿಂಗ್ ಮುಗಿದ ಬಳಿಕ ತನ್ನ ಇಬ್ಬರು ಮಕ್ಕಳಿಗೆ ಐಸ್ ಕ್ರೀಂ ತಿನ್ನಿಸಿದ ಯಶ್, ಮೆಚ್ಚಿಕೊಂಡ ಕರುನಾಡು
ವಿಶೇಷ ದಿನಗಳಲ್ಲಿ ಪತಿ ಯಶ್ ಜೊತೆ ಇರೋಕೆ ಬಯಸುತ್ತಾರೆ ರಾಧಿಕಾ ಪಂಡಿತ್. ಅದೇ ರೀತಿ ಅವರು ವ್ಯಾಲೆಂಟೈನ್ಸ್ ಡೇ ದಿನ ಪತಿ ಹಾಗೂ ಮಕ್ಕಳ ಜೊತೆ ಮಧ್ಯಾಹ್ನದ ಊಟಕ್ಕೆ ತೆರಳಿದ್ದಾರೆ. ಈ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ರಾತ್ರಿಯೂ ಸೆಲೆಬ್ರೇಷನ್ ನಡೆದಿದೆ.
ಫೆಬ್ರವರಿ 14ರಂದು ಅನೇಕ ಜೋಡಿಗಳು ಖುಷಿ ಖುಷಿಯಿಂದ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಪತಿ ಯಶ್ ಹಾಗೂ ಮಕ್ಕಳ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದಾರೆ. ಪತಿ ಹಾಗೂ ಮಕ್ಕಳನ್ನು ಅವರು ವ್ಯಾಲೆಂಟೈನ್ಗಳು ಎಂದು ಕರೆದಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಈ ಫೋಟೋಗೆ ಪ್ರೀತಿಯಿಂದ ಲೈಕ್ಸ್ ಒತ್ತಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ಮದುವೆ ಆಗಿದ್ದು 2016ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಇವರು ಹಾಯಾಗಿ ಸಂಸಾರ ನಡೆಸಿಕೊಂಡು ಬರುತ್ತಿದ್ದಾರೆ. ವಿವಾದಗಳಿಂದ ಇವರು ಸದಾ ದೂರವೇ ಇದ್ದಾರೆ. ಈ ಕಾರಣಕ್ಕೆ ಇವರು ಅನೇಕರಿಗೆ ಇಷ್ಟ ಆಗುತ್ತಾರೆ. ವಿಶೇಷ ದಿನಗಳಲ್ಲಿ ಪತಿಯ ಜೊತೆ ಇರೋಕೆ ಬಯಸುತ್ತಾರೆ ರಾಧಿಕಾ. ಅದೇ ರೀತಿ ಅವರು ವ್ಯಾಲೆಂಟೈನ್ಸ್ ಡೇ ದಿನ ಮಧ್ಯಾಹ್ನದ ಊಟಕ್ಕೆ ತೆರಳಿದ್ದಾರೆ. ಈ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ.
ವ್ಯಾಲೆಂಟೈನ್ಸ್ ಲಂಚ್ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಎಲ್ಲರ ಮುಖದಲ್ಲೂ ಸಂತಸ ಇದೆ. ಯಶ್ ಅವರ ಲುಕ್ ಗಮನ ಸೆಳೆದಿದೆ. ಐಸ್ಕ್ರೀಮ್ ತಿಂದು ಇವರು ಸಂಭ್ರಮಿಸಿದ್ದಾರೆ. ಹಿಂಭಾಗದಲ್ಲಿ ಹಾರ್ಟ್ ಮಾರ್ಕ್ನ ಬಲೂನ್ಗಳನ್ನು ಕಟ್ಟಲಾಗಿದೆ. ಈ ಕುಟುಂಬ ಹೀಗೆಯೇ ಖುಷಿಯಿಂದ ಇರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.