ದರ್ಶನ್ ಬಿಡುಗಡೆ ಬೆನ್ನಲ್ಲೇ ಉಲ್ಟಾ ಹೊಡೆದ ಲಾಯರ್ ಜಗದೀಶ್;

 

 ಲಾಯರ್ ಜಗದೀಶ್ ವಾದಗಳಿಗಿಂತಾ ವಿವಾದಗಳಿಗೆ ಫೇಮಸ್. ಬಿಗ್ಬಾಸ್ ಮನೆಯನ್ನು ಪ್ರವೇಶಿಸಿ ಅಲ್ಲಿಂದ ಹೊರಬಿದ್ದಾಯ್ತು ಇದೀಗ ನಟ ದರ್ಶನ್ ತೂಗುದೀಪ ವಿಚಾರವಾಗಿ ಮಾತನಾಡಿ, ಪ್ರತಿಭಟನೆಗೂ ಕರೆ ನೀಡಿದ್ದ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮತ್ತಷ್ಟು ವಿಚಾರಗಳಿಗಾಗಿ ಸುದ್ದಿಯಾಗಿದ್ದಾರೆ. 

ಅಷ್ಟಕ್ಕೂ ಈಗ ಲಾಯರ್ ಜಗದೀಶ್ ಯಾರು ಅಂತ ಗೊತ್ತಿರದ ಕನ್ನಡಿಗರು ಕಡಿಮೆ ಎಂದೇ ಹೇಳಬಹುದು. ತಮ್ಮ ವಿಶಿಷ್ಟ ಶೈಲಿಯ ಮಾತು, ಹಾವ-ಭಾವಗಳಿಂದ ಸಖತ್ ವೈರಲ್ ಆಗಿರುವ ಲಾಯರ್ ಜಗದೀಶ್ ಅವರು ಅನಿರೀಕ್ಷಿತ ಎಂಬಂತೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮತ್ತೊಬ್ಬ ಸ್ಪರ್ಧಿ ರಂಜಿತ್ ಜೊತೆ ಕಿರಿಕ್ ಮಾಡಿಕೊಂಡು ಬಿಗ್ ಬಾಸ್ ಮನೆಯಿಂದ ಹೊರದೂಡಲ್ಪಟ್ಟಿರುವ ಲಾಯರ್ ಜಗದೀಶ್, ಈಗ ಹೊರಗಡೆ ಕೂ ಅಷ್ಟೇ ಸೌಂಡ್ ಮಾಡುತ್ತಿದ್ದಾರೆ.  <a href=https://youtube.com/embed/SJ2XIYLHHHc?autoplay=1&mute=1><img src=https://img.youtube.com/vi/SJ2XIYLHHHc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸದ್ಯ ಅದೊಂದು ವಿಡಿಯೋ ವೈರಲ್ ಆಗುತ್ತಿದೆ..! ಅದು ಎಂದರೆ ಯಾವುದು ಇರಬಹುದು ಎಂದು ನೀವು ತಲೆ ಕೆಡಿಸಿಕೊಳ್ಳುವುದು ಬೇಡ. ಏಕೆಂದರೆ, ಅದು ಬೇರಾವುದೂ ಅಲ್ಲ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಿಕೆಡಿ ಶೋ, ಹಾಗೂ ಅದರಲ್ಲಿ ಭಾಗಿಯಾಗಿದ್ದ ಲಾಯರ್ ಜಗದೀಶ್! ಹೌದು, ಲಾಯರ್ ಜಗ್ಗು ಅಲ್ಲಿ ಬಂದು ಸ್ಪರ್ಧಿಗಳ ಜೊತೆ ಡಾನ್ಸ್‌ಗೆ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲ, ಆ ಹಾಡು ಬೇರೆ ನಟ ದರ್ಶನ್‌ ಅಭಿನಯದ 'ಜಗ್ಗುದಾದಾ' ಚಿತ್ರದ್ದು.

ಸದ್ಯ ನಟ ದರ್ಶನ್‌ ಅವರು ಮಧ್ಯಂತರ ಬೇಲ್‌ ಮೇಲೆ ಆಚೆ ಬಂದಿದ್ದು ಗೊತ್ತೇ ಇದೆ. ಅನಾರೋಗ್ಯದ ಕಾರಣಕ್ಕೆ ಬೇಲ್‌ ಪಡೆದು ಆಚೆ ಬಂದಿರೋ ನಟ ದರ್ಶನ್‌ ಈಗ 'ಟಾಕ್ ಆಫ್‌ ದ ನ್ಯೂಸ್' ಆಗಿದ್ದಾರೆ. ಇದೇ ಸಮಯದಲ್ಲಿ, ದರ್ಶನ್ ನಟನೆಯ ಸಿನಿಮಾದ ಹಾಡಿನಲ್ಲಿ ಲಾಯರ್ ಕಾಣಿಸಿಕೊಂಡು ಧೂಳೆಬ್ಬಿಸಿದ್ದಾರೆ. ಜೀ ಕನ್ನಡದಲ್ಲಿ ನಡೆಯುತ್ತಿರೋ ಡಾನ್ಸ್ ರಿಯಾಲಿಟಿ ಶೋ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಹೆಜ್ಜೆ ಹಾಕಿ ಭಾರಿ ಹವಾ ಎಬ್ಬಿಸಿದ್ದಾರೆ ಲಾಯರ್ ಜಗದೀಶ್. 

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.