ಕಾಟೇರ ಸಿನಿಮಾ ಬಳಿಕ ಕನ್ನಡದಲ್ಲಿ ಮೊದಲನೇ ಪಟ್ಟಿಯಲ್ಲಿ ನಟ ದರ್ಶನ್, ಎರಡನೇ ಪಟ್ಟಿಗಿಲಿದ ಯಶ್
ಕಾಟೇರ ಸಿನಿಮಾ ಅಬ್ಬರಿಸಿದ್ದು, ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಜೊತೆಗೆ ಗಲ್ಲಾಪೆಟ್ಟಿಗೆಯ ತುಂಬಾ ಕಾಸು ಕೂಡ ಮಾಡುತ್ತಿದೆ. ಈ ಗೆಲುವು ಕಂಡು 'ಕಾಟೇರ' ಸಿನಿಮಾ ಟೀಂ ಮತ್ತು ಡಿ-ಬಾಸ್ ದರ್ಶನ್‌ರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಹೀಗಿದ್ದಾಗ ಹೊಸ ಚರ್ಚೆ ಕೂಡ ಶುರುವಾಗಿದ್ದು, ಸಂಚಲನ ಸೃಷ್ಟಿಯಾಗಿದೆ. ಹಾಗಾದರೆ ಏನದು ಚರ್ಚೆ? ಯಾಕೆ ಈ ರೀತಿ ಚರ್ಚೆ ಶುರುವಾಗಿದೆ ನೋಡೋಣ ಬನ್ನಿ.
ನಟ ದರ್ಶನ್ ಅವರು ಜೀರೋ ಟು ಹೀರೋ ಆದವರು. ಬರಿಗೈಯಲ್ಲಿ ಇಂಡಸ್ಟ್ರಿಗೆ ಬಂದು ಕೋಟ್ಯಂತರ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ. ನಟ ದರ್ಶನ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಮತ್ತೊಂದು ಕಡೆ ನಟ ಯಶ್ ಕೂಡ ಬರಿಗೈಯಲ್ಲೇ ಕನ್ನಡ ಇಂಡಸ್ಟ್ರಿಗೆ ಬಂದು ಈಗ ಎಲ್ಲರ ಮನಸ್ಸು ಗೆದ್ದಿದ್ದಾರೆ. ಹೀಗಿದ್ದಾಗ ಹೊಸ ಚರ್ಚೆಯು ಕೂಡ ಶುರುವಾಗಿದೆ. ನಟ ಯಶ್ ಅವರಿಗಿಂತ ದರ್ಶನ್ ದೊಡ್ಡ ಮನುಷ್ಯ ಅಂತಿದ್ದಾರೆ ಜನ, ಅರೆರೆ ಈ ಚರ್ಚೆ ಹುಟ್ಟಿದ್ದು ಯಾಕೆ ಅಂತ ನೋಡೋದಾದ್ರೆ
ಹೌದು, ಕನ್ನಡಿಗರ 'ಕಾಟೇರ' ಎಲ್ಲೆಲ್ಲೂ ಸೌಂಡ್ ಮಾಡುತ್ತಿದೆ. ಕಾಟೇರ ಅಬ್ಬರಕ್ಕೆ ಈಗ ದಾಖಲೆಗಳು ಕೂಡ ಧೂಳ್ ಧೂಳ್ ಆಗಿವೆ. ಇನ್ನೇನು 100 ಕೋಟಿ ಕ್ಲಬ್ ಸೇರುವ ಸನಿಹ ಸಾಗಿದೆ ಕಾಟೇರ ಸಿನಿಮಾ. ಇದೇ ಸಮಯದಲ್ಲಿ ನಟ ಯಶ್ ಅವರಿಗಿಂತ ದರ್ಶನ್ ದೊಡ್ಡ ಮನುಷ್ಯ ಅಂತಿದ್ದಾರೆ ಸೋಷಿಯಲ್ ಮೀಡಿಯಾ ಜನರು. ಯಾಕಂದ್ರೆ ಇದಕ್ಕೆಲ್ಲಾ ಕಾಟೇರ ಕಾರಣ ಅಂತಲೂ ಮಾತನಾಡುತ್ತಿದ್ದಾರೆ.
ಅದು ಹೇಗಂದ್ರೆ ಕಾಟೇರ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟರಿಗೆ ಗೌರವ ನೀಡಲಾಗಿದೆ. ಹಾಗೇ ಅವಕಾಶಕ್ಕೆ ಕಾದಿದ್ದ ಹಿರಿಯ ನಟರನ್ನು ಮತ್ತೆ ತೆರೆ ಮೇಲೆ ರಾರಾಜಿಸುವಂತೆ ಮಾಡಲಾಗಿದೆ ಎಂಬುದೇ ಈ ಹೊಗಳಿಕೆಗು ಮತ್ತು ಚರ್ಚೆಗೂ ಕಾರಣ. ಹೀಗಿದ್ದಾಗ ಕೆಜಿಎಫ್-1 ಮತ್ತು ಕೆಜಿಎಫ್-2 ಸ್ಟಾರ್ ಯಶ್ ಅವರು ಮತ್ತು ಕಾಟೇರ ಸ್ಟಾರ್ ದರ್ಶನ್ ಅವರ ಮಧ್ಯೆ ಹೋಲಿಕೆ ಮಾಡಿ ಜನ ಮಾತನಾಡುತ್ತಿದ್ದಾರೆ.
ಕಾಟೇರ ರೀತಿಯಲ್ಲೇ ಇತರ ಸಿನಿಮಾ ನಟರು ಕೂಡ ಹಿರಿಯ ನಟರಿಗೆ ಅವಕಾಶ ನೀಡಬೇಕು ಎಂಬ ಡಿಮ್ಯಾಂಡ್ ಕೂಡ ಈಗ ಕೇಳಿಬರುತ್ತಿದೆ. ಈ ಮೂಲಕ ಚರ್ಚೆ ಕೂಡ ಜೋರಾಗಿದೆ. ಮತ್ತೊಂದು ಕಡೆ, ಈ ಚರ್ಚೆಗಳಿಗೆ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗ ಒಗ್ಗಟ್ಟಾಗಿ ಇರಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.