'ಎರಡನೇ ಮದುವೆ ಬಳಿಕ ನನ್ನ ಕೈಯಲ್ಲಿ ಹಣವಿಲ್ಲ; ನನಗೆ ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕಣ್ಣೀರಿಟ್ಟ ನ.ಟ

 

ಆಶಿಶ್ ವಿದ್ಯಾರ್ಥಿ ಗೊತ್ತಿಲ್ಲದವರಿಲ್ಲ. ಹೌದು ಇವರು ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಅತ್ಯುತ್ತಮ ವಿಲನ್ ಪಾತ್ರ ಮಾಡುವವರಲ್ಲಿ ಒಬ್ಬರು. ಬಹುತೇಕ ಸೂಪರ್‌ಸ್ಟಾರ್‌ಗಳಿಗೆ ಆಶಿಶ್ ವಿದ್ಯಾರ್ಥಿ ತಮ್ಮ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲೇ ಬೇಕಿತ್ತು. ಈ ನಟ ಇದ್ದರೆ ಹೀರೊಗಳಿಗೂ ಅಷ್ಟೇ ಪವರ್ ಬಂದು ಬಿಡುತ್ತಿತ್ತು. ಥಿಯೇಟರ್‌ಗಳಲ್ಲಿ ಶಿಳ್ಳೆಗಳ ಸದ್ದು ಜೋರಾಗುತ್ತಿತ್ತು.

ಆಶಿಶ್ ವಿದ್ಯಾರ್ಥಿ ಕಳೆದ ಹಲವು ವರ್ಷಗಳಿಂದ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಕ್ಕಿಂತ ಹೆಚ್ಚಾಗಿ ದಕ್ಷಿಣ ಭಾರತದ ಸಿನಿಮಾ ನಟಿಸಿದ್ದೇ ಹೆಚ್ಚು. ಒಂದು ಕಾಲದ ಈ ಬಹುಬೇಡಿಕೆಯ ನಟನೀಗ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆಫರ್ ಕೊಡಿ ಎಂದು ಕೇಳುವಂತಹ ಸ್ಥಿತಿ ನಿರ್ಮಾಣ ಆಗಿದೆ. ಅಸಲಿಗೆ ಆಶಿಶ್ ವಿದ್ಯಾರ್ಥಿಗೆ ಆಫರ್‌ಗಳೇ ಸಿಗುತ್ತಿಲ್ಲವೇ..? ಎಂಬ ಪ್ರಶ್ನೆ ಮೂಡಿದೆ.

ಈ ಹಿರಿಯ ನಟ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. 'ಎಕೆ 47', 'ಕೋಟಿಗೊಬ್ಬ' ಅಂತಹ ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೋಟಿ ನಿರ್ಮಾಪಕ ರಾಮು ನಿರ್ಮಿಸುತ್ತಿದ್ದ ಸಿನಿಮಾಗಳಲ್ಲಿ ಆಶಿಶ್ ವಿದ್ಯಾರ್ಥಿ ಇದ್ದೇ ಇರುತ್ತಿದ್ದರು. ಇವರೊಂದಿಗೆ ಪಾತ್ರ ಫಿಕ್ಸ್ ಆಗಿರುತ್ತಿತ್ತು. ಇಂತಹ ನಟ ಇವತ್ತು ನಾನಿನ್ನು ಬದುಕಿದ್ದೇನೆ ಅವಕಾಶ ಎಂದು ಕೇಳಿಕೊಂಡಿದ್ದಾರೆ.

ಆಶಿಶ್ ವಿದ್ಯಾರ್ಥಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಬಹುತೇಕ ಪ್ರಮುಖ ಭಾಷೆಯ ಸಿನಿಮಾಗಳಲ್ಲೂ ಆಶಿಶ್ ವಿದ್ಯಾರ್ಥಿ ಹೆಚ್ಚು ಕಡಿಮೆ ಖಳನಾಯಕ ನಟಿಸಿದ್ದಾರೆ. ಇತ್ತೀಚೆಗೆ ನೆಟ್‌ಫಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ರಾಣಾ ನಾಯ್ಡು' ವೆಬ್‌ ಸೀರಿಸ್‌ನಲ್ಲೂ ಉತ್ತಮ ಪಾತ್ರವನ್ನು ನಿಭಾಯಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ, ಒಡಿಯಾ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.