ಶೂಟಿಂಗ್ ಆದ್ಮೇಲೆ ಅನುಶ್ರೀ ಬಾಯ್ ಅಂತನೂ ಹೇಳಲ್ಲ; ಅಜು೯ನ್ ಜನ್ಯಾ ಬೇಸರ
Nov 6, 2024, 17:52 IST
ಕನ್ನಡ ಚಿತ್ರರಂಗದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಖ್ಯಾತ ನಿರೂಪಕಿ ಅನುಶ್ರೀ ಕಾಂಬಿನೇಷನ್ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಅನುಶ್ರೀ ಇದ್ದಲಿ ಅರ್ಜುನ್ ಜನ್ಯ ಇರಬೇಕು ಇಲ್ಲವಾದರೆ ಅರ್ಜುನ್ ಇದ್ದಲ್ಲಿ ಅನುಶ್ರೀ ಇರಬೇಕು ಅನ್ನೋ ಮಟ್ಟಕ್ಕೆ ಹೆಸರು ಮಾಡಿದೆ ಈ ಕಾಂಬಿನೇಷನ್. ತಮಾಷೆಗೆಂದು ಆರಂಭವಾದ ಇವರಿಬ್ಬರು ಕಾಮಿಡಿ ಕೊನೆ ಕೊನೆಯಲ್ಲಿ ಎಷ್ಟು ಸೀರಿಯಸ್ ಅಯ್ತು ಅಂದ್ರೆ ಇವರು ಎಲ್ಲೇ ಹೋದರು ಮತ್ತೊಬ್ಬರು ಎಲ್ಲಿ ಎಂದು ಪ್ರಶ್ನೆ ಮಾಡುವ ಹಂತಕ್ಕಿತ್ತು.
ಹೌದು ಈ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಜನರು ಇಷ್ಟ ಪಡುತ್ತಿದ್ದಾರೆ ಅದರೆ ಅರ್ಜುನ್ ಜನ್ಯ ಮನೆಯಲ್ಲಿ ರಿಯಾಕ್ಷನ್ ಹೇಗಿತ್ತು, ಇದನ್ನು ಯಾವಾಗ ಸೀರಿಯಸ್ ಆಗಿ ಪರಿಗಣಿಸಿದ್ದರು ಎಂದು ರಿವೀಲ್ ಮಾಡಿದ್ದಾರೆ.ಜೀ ಸರಿಗಮಪ ಕಾರ್ಯಕ್ರಮಕ್ಕೆ ವಿಜಯ್ ಪ್ರಕಾಶ್ ಸರ್ ಹೇಳಿದ್ದರು ಎಂದು ನಾನು ಹೋದಾಗ ನನಗೆ ಏನೂ ಗೊತ್ತಿರಲಿಲ್ಲ.
ಅಲ್ಲಿ ಒಬ್ಬರು ಕಾಮಿಡಿ ಮಾಡುತ್ತಾರೆ ಕೌಂಟರ್ ಕೊಡುತ್ತಾರೆ ನಾನು ಮಾತನಾಡಬೇಕು ಅಲ್ಲದೆ ಅನುಶ್ರೀ ಅವರು ನಿಮ್ಮ ಕಾಲೆಳೆಯುತ್ತಾರೆ ಅಂದ್ರು ಅಯ್ಯೋ ನನ್ನ ಕಾಲು ಯಾಕೆ ಎಳೆಯುತ್ತಾರೆ ಎಂದು ಪ್ರಶ್ನೆ ಮಾಡಿದಾಗ ಸುಮ್ಮನೆ ಫನ್ ಮಾಡಲು ಎಂದರು. ಅಷ್ಟೇ ನನಗೆ ಗೊತ್ತಿರುವುದು...ಅವರು ಏನು ಕೇಳಿದ್ದರು ಅದಕ್ಕೆ ನಾನು ಏನು ಉತ್ತರ ಕೊಟ್ಟೆ ಅದು ಯಾಕೆ ಇಷ್ಟು ವೈರಲ್ ಆಯ್ತು ಅನ್ನೋದು ಏನೂ ಗೊತ್ತಿಲ್ಲ.
ಶೂಟಿಂಗ್ ದಿನ ನಾನು ಮತ್ತು ಅನುಶ್ರೀ ಚೆನ್ನಾಗಿ ಮಾತನಾಡುತ್ತೀವಿ ಒಂದೊಂದು ಸಲ ಹೋಗುವಾಗ ಬಾಯ್ ಕೂಡ ಹೇಳಿರುವುದಿಲ್ಲ ನೆಕ್ಸಟ್ ಸಿಗುವುದು ಮುಂದಿನ ವಾರದ ಶೂಟಿಂಗ್‌ನಲ್ಲೇ. ತೆರೆ ಮೇಲೆ ನಡೆಯುವ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಅರ್ಜುನ್ ಜನ್ಯ ಮಾತನಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.