ಮಂಡ್ಯದ ಗಂಡು ಅಂಬರೀಶ್ ಸೊಸೆಯ ಸೀಮಂತ, ಸಿನಿ ಗಣ್ಯರ ದಂಡು ಆಗಮನ

 
 ಕೆಲ ದಿನಗಳ ಹಿಂದಷ್ಟೇ ನಟ ಅಂಬರೀಶ್ ಮನೆಗೆ ಮಗು ಬರಲಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು.ಹೌದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೊಡಿ ಸದ್ಯದಲ್ಲಿಯೇ ತಂದೆ- ತಾಯಿ ಆಗಲಿದ್ದಾರೆ. ಅವರ ಮನೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುವ ಮುದ್ದಾದ ಮಗು ಬರಲಿದೆ. ಅದೇ ಸಂಭ್ರಮದಲ್ಲಿರುವ ಅಭಿಷೇಕ್ ಅಂಬರೀಶ್ ಕುಟುಂಬ ಈಗ ಅವಿವಾ ಬಿದ್ದಪ್ಪಗೆ ಸೀಮಂತ ಶಾಸ್ತ್ರ ಮಾಡಿದ್ದಾರೆ.
ತುಂಬು ಗರ್ಭಿಣಿಯಾಗಿರುವ ಅವಿವಾ ಬಿದ್ದಪ್ಪರಿಗೆ ಸೀಮಂತ ಶಾಸ್ತ್ರ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಅಂಬಿ ಕುಟುಂಬದ ಆಪ್ತರು, ನಟ ನಟಿಯರು ಭಾಗಿಯಾಗಿದ್ದರು. ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಲನಚಿತ್ರದ ಹಲವು ಗಣ್ಯರು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರಕ್ಕೆ ಸಾಕ್ಷಿಯಾಗಿದ್ದರು.ಸ್ವನಿವಾಸದಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಹಸಿರು ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ಅವಿವಾ ಮಿಂಚುತ್ತಿದ್ದರು.  <a href=https://youtube.com/embed/ISE65XAoX08?autoplay=1&mute=1><img src=https://img.youtube.com/vi/ISE65XAoX08/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕೆಲವೇ ಕೆಲವು ಅತಿಥಿಗಳು ಕಾರ್ಯಕ್ರಮದಲ್ಲಿ ಹಾಜರಾಗಿದ್ದು ಸದ್ಯ ಕೆಲವು ಫೋಟೋಗಳು ವೈರಲ್ ಆಗಿವೆ. ಅಕ್ಟೋಬರ್ ವೇಳೆಗೆ ಅಭಿ ಹಾಗೂ ಅವಿವಾ ಬಾಳಿನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಲಿದ್ದು. ಅಂಬಿ ನಿವಾಸದಲ್ಲಿ ಪುಟ್ಟ ಮಗುವಿನ ಕಿಲಕಿಲ ಸೌಂಡ್ ಕೇಳಿ ಬರಲಿದೆ.2023ರ ಜೂನ್ 7ರದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಜೊತೆಗೆ ಅಭಿಷೇಕ್ ಮದುವೆ ಆಗಿತ್ತು. 
ತುಂಬ ಗ್ರ್ಯಾಂಡ್ ಆಗಿ ಈ ಮದುವೆ ಸಮಾರಂಭ ನಡೆದಿತ್ತು. ಹಲವು ಚಿತ್ರರಂಗಗಳ ಗಣ್ಯರು ಈ ಮದುವೆಗೆ ಆಗಮಿಸಿದ್ದರು. ಇದೀಗ ಅವಿವಾ ತಾಯಿ ಆಗುತ್ತಿದ್ದು, 'ರೆಬೆಲ್ ಸ್ಟಾರ್' ಕುಟುಂಬದಲ್ಲಿ ಸಂತಸ ತುಂಬಿಕೊಂಡಿದೆ. ಇನ್ನು, ಅವಿವಾ ಸೀಮಂತ ಸಮಾರಂಭಕ್ಕೆ ಪ್ರಿಯಾಕಾ ಉಪೇಂದ್ರ ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕರು ಮತ್ತು ಅಂಬರೀಶ್ ಮತ್ತು ಸುಮಲತಾ ಅವರ ಆಪ್ತರು ಆಗಮಿಸಿದ್ದರು. ಇದೀಗ ಅವಿವಾ ಬಿದ್ದಪ್ಪ ಅವರ ಸೀಮಂತ ಸಮಾರಂಭಕ್ಕೆ ಪ್ರಿಯಾಂಕಾ ಉಪೇಂದ್ರ ಆಗಮಿಸಿ, ಶುಭ ಕೋರಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.