'ಅವಳಿ ಜವಳಿ ಮಕ್ಕಳಿಗೆ ಅ, ಆ, ಇ, ಈ, ಹೇಳಿಕೊಡುತ್ತಿರುವ ಅಮೂಲ್ಯ' ಇದಲ್ಲವೆ ಕನ್ನಡ ಪ್ರೇಮ
Feb 20, 2024, 20:39 IST
ಸ್ಯಾಂಡಲ್‌ವುಡ್‌ನಲ್ಲಿ ನಟ-ನಟಿಯಂದಿರ ಮಕ್ಕಳು ಹುಟ್ಟುತ್ತಲೇ ಸುದ್ದಿ ಮಾಡುತ್ತವೆ. ಈಗ ಇವರ ಬಗೆಗೆ ಅಪ್‌ಡೇಟ್ಸ್ ನೀಡಲು ಪಾಲಕರು ಅವರ ಹೆಸರಿನಲ್ಲಿ ಇನ್ಸ್ಟಾ ಖಾತೆಯನ್ನು ಮಾಡುವ ಪರಿಪಾಠ ಶುರುವಾಗಿದೆ. ಅಲ್ಲಿ ತಮ್ಮ ಮಕ್ಕಳ ಫೋಟೋ, ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಆ ಸುಂದರ, ಮುದ್ದಾದ ಕ್ಷಣಗಳನ್ನು ಕಂಡು ಪ್ರೇಕ್ಷಕರು ಕೂಡ ಇಷ್ಟಪಡುತ್ತಾರೆ. ಆ ಸ್ಟಾರ್ ಕಿಡ್‌ಗಳಲ್ಲಿಲ್ಲಿ ಮೊದಲ ಸ್ಥಾನ ಪಡೆಯೋದು ಅಮೂಲ್ಯ ಅವರ ಅವಳಿ ಜವಳಿ ಮಕ್ಕಳು.
ಇನ್ನು ಕಳೆದ ವರ್ಷ ಅಮೂಲ್ಯ ಹುಟ್ಟು ಹಬ್ಬದ ದಿನ ಅಮೂಲ್ಯ ಅವರ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಜಗದೀಶ್ ಆರ್ ಚಂದ್ರ ದೊಡ್ಡ ಸರ್‌ಪ್ರೈಸ್ ಕೊಟ್ಟಿದ್ದಾರೆ. ಆದಷ್ಟು ಬೇಗ ನಿಮ್ಮನ್ನ ಬಿಗ್ ಸ್ಕ್ರೀನ್ ಮೇಲೆ ನೋಡೋಕೆ ಆಶಿಸುತ್ತೇವೆ ಎಂದು ಜಗದೀಶ್ ಆರ್ ಚಂದ್ರ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅಲ್ಲಿಗೆ, ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಕಮ್ ಬ್ಯಾಕ್ ಮಾಡ್ತಿದ್ದಾರಾ? ಎಂಬ ಪ್ರಶ್ನೆ ಮೂಡಿತ್ತು ಆದರೆ ಈದೀಗ ಆ ಪ್ರಶ್ನೆಗೆ ಉತ್ತರ ದೊರಕಿದೆ.
ಇತ್ತೀಚಿಗಷ್ಟೇ ಅಮೂಲ್ಯ ಅವರ ಮಕ್ಕಳು ಜೊತೆಯಾಗಿ ಊಟ ಮಾಡುತ್ತಿರುವ ಫೋಟೊ ಎಲ್ಲೆಡೆ ಹರಿದಾಡಿತ್ತು. ಹೌದು. ಹೊಟೇಲ್ ಒಂದರ ದೃಶ್ಯವಿದು. ಮುದ್ದಾದ ಮಕ್ಕಳೊಂದಿಗೆ ಊಟ ಸವಿದಿದ್ದಾರೆ ಅಮೂಲ್ಯ ಅವರು. ಇನ್ನು ಸ್ಯಾಂಡಲ್‌ವುಡ್‌ನ ಚೆಲುವೆ ನಟಿ ಅಮೂಲ್ಯ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ. ಕೊನೆಯದಾಗಿ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಏಳು ವರ್ಷಗಳ ಬಳಿಕ ಮತ್ತೆ ಬೆಳ್ಳಿಪರದೆ ಮೇಲೆ ಮಿಂಚಲಿದ್ದಾರೆ.
ಚೆಲುವಿನ ಚಿತ್ತಾರ ಮತ್ತು ಗಜಕೇಸರಿ ಖ್ಯಾತಿಯ ಅಮೂಲ್ಯ ಮದುವೆಯಾದ ನಂತರ ಮತ್ತು ಅವಳ ಅವಳಿ ಗಂಡು ಮಕ್ಕಳ ಆರೈಕೆಯ ನಂತರ ನಟನೆಯಿಂದ ದೂರ ಉಳಿದಿದ್ದರು. ಏಳು ವರ್ಷಗಳ ನಂತರ ಮತ್ತೆ ಕ್ಯಾಮರಾ ಎದುರಿಸಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಅಮೂಲ್ಯ ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಸಿನಿಮಾದಲ್ಲಿ ನಟಿಸಲಿದ್ದಾರೆ.