ವೇದಿಕೆ ಮೇಲೆಯೇ ಮದುವೆ ಆಗುವ ಹುಡುಗನನ್ನು ಅಪ್ಪಿಕೊಂಡ ಅನುಪಮ ಗೌಡ;
Aug 4, 2024, 18:26 IST
ಹಿರಿತೆರೆ, ಕಿರುತೆರೆ ಎರಡರಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ನಟಿ ಅನುಪಮಾ ಗೌಡ. ನಟನೆಗೂ ಸೈ, ನಿರೂಪಣೆಗೂ ಸೈ ಎನ್ನುವುದನ್ನು ನಟಿ ಇದಾಗಲೇ ತೋರಿಸಿಕೊಡುತ್ತಿದ್ದಾರೆ. ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ.
ಈ ಮೂಲಕ ನಟಿ ಕಮ್ ನಿರೂಪಕಿ ಎಂದೇ ಫೇಮಸ್ ಆಗಿದ್ದಾರೆ. ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಟಿ, ಕೊನೆಗೆ ಮನೆ ಮನೆ ಮಾತಾಗಿದ್ದು, ಅಕ್ಕ ಸೀರಿಯಲ್ ಮೂಲಕ. ಈ ಸೀರಿಯಲ್ನಲ್ಲಿ ಎರಡು ಪಾತ್ರ ನಿರ್ವಹಿಸಿ, ನಾಯಕಿ, ವಿಲನ್ ಯಾವುದಕ್ಕೂ ಸೈ ಎನಿಸಿಕೊಂಡರು.
ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದರು. ಇದಕ್ಕೂ ಮುನ್ನ ಅವರು ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ನಂತರ ಸಕತ್ ಫೇಮಸ್ ಆಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ ನಂತರ ಒಂದಿಷ್ಟು ರಿಯಾಲಿಟಿ ಶೋ ನಡೆಸಿಕೊಡ್ತಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಆಪ್ತ ಸ್ನೇಹಿತ, ಪ್ರಾಣ ಗೆಳೆಯ ಜೊತೆಗೆ ನನ್ನ ಮಗು ಕೂಡ ಆತನೇ ಎಂದು ಬೆಸ್ಟ್ ಫ್ರೆಂಡ್ ಎಂದು ಪರಿಚಯ ಮಾಡಿಸಿದ್ದಾರೆ ಅನುಪಮಾ. ‘ಗಿಚ್ಚಿ ಗಿಲಿಗಿಲಿ 3’ ವೇದಿಕೆ ಮೇಲೆ ಬೆಸ್ಟ್ ಫ್ರೆಂಡ್ನ ಪರಿಚಯಿಸಿದ್ದಾರೆ. ಅದು ಅವರ ಮುದ್ದು ನಾಯಿ. ಇವನೇ ನನ್ನ ಪ್ರಪಂಚ. ತಂದೆ ತೀರಿಕೊಂಡಾಗ ಮಗು ರೂಪದಲ್ಲಿ ಬರ್ತಾರೆ ಎಂಬ ಮಾತಿದೆ. ನನ್ನ ಜೀವನದಲ್ಲಿ ಇವನು ಬಂದಿದ್ದಾನೆ. ನಾನು ಈತನಿಗೆ ತಾಯಿ ಆಗಿದೀನಿ. ನನಗೆ ಈತನೇ ಎಲ್ಲವೂ ಎಂದು ಅನುಪಮಾ ಗೌಡ ನಾಯಿ ಮರಿಯನ್ನು ಅಪ್ಪಿ ಮುದ್ದಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.