ಸಿಹಿಸುದ್ದಿ ಕೊಟ್ಟ ಅನುಷ್ಕಾ ಶೆಟ್ಟಿ, ಹಳೆ ಪ್ರೀತಿಗೆ ಜೀವ ತುಂಬಿದ ಜೋಡಿಗಳು

 
ಕನ್ನಡಿಗರ ಹೆಮ್ಮೆಯ ನಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ನವಜೋಡಿಯ ಫೋಟೋವೊಂದನ್ನು ಶೇರ್‌ ಮಾಡಿಕೊಂಡು ಶುಭಕೋರಿದ್ದಾರೆ. ಅಷ್ಟಕ್ಕೂ ಈ ವಿಚಾರ ಹೆಚ್ಚು ಸುದ್ದಿಯಾಗಲು ಕಾರಣವೊಂದಿದೆ. ಅದೇನೆಂದರೆ ಈ ಫೋಟೋದಲ್ಲಿರುವ ವರ ಪ್ರಖ್ಯಾತ ನಿರ್ದೇಶಕ ಜಗರ್ಲಮುಡಿ ಕ್ರಿಶ್.‌
ಅಷ್ಟಕ್ಕೂ ಕ್ರಿಶ್ ಅವರು ತಮ್ಮ 45ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ. ಡಾ.ಪ್ರೀತಿ ಚಲ್ಲಾ ಎಂಬಾಕೆಯನ್ನು ಕ್ರಿಶ್‌ ವರಿಸಿದ್ದಾರೆ. ಇನ್ನು ಈ ಸರಳ ಮದುವೆಗೆ ಕೆಲವೇ ಕೆಲವು ಅತಿಥಿಗಳನ್ನು ಕ್ರಿಶ್‌ ಕುಟುಂಬ ಆಹ್ವಾನಿಸಿದೆ. ಸದ್ಯ ಇವರ ಮದುವೆಯ ಫೋಟೋಗಳು ವೈರಲ್ ಆಗಿದ್ದು, ಹೈದರಾಬಾದಿನ ಡಾ.ಪ್ರೀತಿ, ಸ್ತ್ರೀರೋಗ ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಲಿವುಡ್‌ನಲ್ಲಿ ಸಖತ್‌ ಖ್ಯಾತಿ ಪಡೆದಿರುವ ಕ್ರಿಶ್‌ ವಿವಾಹಕ್ಕೆ ಇಡೀ ಸಿನಿರಂಗವೇ ವಿಶ್‌ ಮಾಡಿದೆ. ಅಂತೆಯೇ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿ ಕೂಡ ತಮ್ಮ ನೆಚ್ಚಿನ ನಿರ್ದೇಶಕನಿಗೆ ಶುಭಕೋರಿದ್ದು ಫೋಟೋ ಶೇರ್‌ ಮಾಡಿದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ʼಘಾಟಿʼಯನ್ನು ನಿರ್ದೇಶಿಸುತ್ತಿರುವುದು ಕೂಡ ಇದೇ ಕ್ರಿಶ್‌.
ಹೌದು, ಈ ಹಿಂದೆ ವೈದ್ಯೆ ರಮ್ಯಾ ಎಂಬುವವರ ಜೊತೆಗೆ ಕ್ರಿಶ್ ಮದುವೆ ಆಗಿದ್ದರು. ಆದರೆ ಆ ಮದುವೆ ಬಹಳ ದಿನ ಉಳಿಯಲಿಲ್ಲ. 2018ಲ್ಲಿ ರಮ್ಯಾ ಮತ್ತು ಕ್ರಿಶ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಆನಂತರ ಒಂಟಿಯಾಗಿದ್ದ ಕ್ರಿಶ್, ಇದೀಗ ಪ್ರೀತಿ ಚಲ್ಲಾ ಜೊತೆಗೆ ಹೊಸ ಜೀವನ ಆರಂಭಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.