ಲಂಡನ್ ನಲ್ಲಿ ಗೆಳೆಯನ ಜೊತೆ ಕಾಲಕಳೆಯುತ್ತಿರುವ ಅನುಶ್ರೀ
Mar 14, 2025, 12:35 IST

ಮಾತಿನ ಮಲ್ಲಿ,ಕರಾವಳಿ ಚೆಲುವೆ. ಕನ್ನಡದ ಖ್ಯಾತ ನಿರೂಪಕಿಯಾಗಿರುವ ಅನುಶ್ರೀ ಅವರು ಮಾತಿನಲ್ಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಸದ್ಯ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಸುದ್ದಿ ವೈರಲ್ ಆಗುತ್ತಿದ್ದು, ಹಲವು ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಈ ತಿಂಗಳಲ್ಲಿಮಾರ್ಚ್ ಗುಡ್ ನ್ಯೂಸ್ ನೀಡಿದ್ದಾರೆ. ಮಾರ್ಚ್ ತಿಂಗಳಲ್ಲಿ ಗುಡ್ ನ್ಯೂಸ್ ನೀಡುವುದಾಗಿ ಹೇಳಿದ್ದ ಅನುಶ್ರೀ ಅವರು ಮದುವೆ ಬಗ್ಗೆ ಅಪ್‌ಡೇಟ್ ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾದುಕುಳಿತಿದ್ದಾರೆ.
ಮಾತಿನ ಮಲ್ಲಿ ಅನುಶ್ರೀ ಅವರನ್ನ ಕೈ ಹಿಡಿಯುವ ಹುಡುಗ ಯಾರು? ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅನುಶ್ರೀ ಅವರು ನಟ ಪುನೀತ್‌ರಾಜ್ ಕುಮಾರ್ ಅವರ ಅಪ್ಪಟ್ಟ ಅಭಿಮಾನಿ ಹೀಗಾಗಿ ಅಪ್ಪು ಅವರ ಬರ್ತಡೆಯಂತೆ ಅನುಶ್ರೀ ಅವರು ಗುಡ್ ನ್ಯೂಸ್ ನೀಡಲಿದ್ದಾರೆ ಎಂದು ಅಭಿಮಾನಿ ಕಾದುಕುಳಿತ್ತಿದ್ದಾರೆ. ಆಂಕರ್ ಅನುಶ್ರೀ ಲಂಡನ್ ಟೂರ್‌ನಲ್ಲಿದ್ದಾರೆ. ಲಂಡನ್ ಬ್ರಿಡ್ಜ್ ಮೇಲೆ ನಿಂತು ಒಂದು ಕನ್ನಡ ಹಾಡನ್ನ ಹಾಡಿದ್ದಾರೆ.
ಅದರಲ್ಲಿ ಹೃದಯ ಅರಳಿ ನಲಿದಿದೆ ಅನ್ನೋ ಸಾಲೂ ಇದೆ. ಇನ್ನೂ ಆಂಕರ್ ಅನುಶ್ರೀ ಜೊತೆಗೆ ಪಕ್ಕದಲ್ಲಿರೋರು ಯಾರವ್ವಾ ಅಂತಲೂ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು
ಲಂಡನ್ ಪ್ರವಾಸದಲ್ಲಿರುವ ಆಂಕರ್ ಅನುಶ್ರೀ ಅವರು, ಅಲ್ಲಿನ ಫೋಟೋ, ವೀಡಿಯೋಗಳನ್ನು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅನೇಕ ರೀಲ್ಸ್‌ಗಳನ್ನೂ ಮಾಡುತ್ತಿದ್ದಾರೆ. ಅದರಲ್ಲೊಂದು ರೀಲ್ಸ್‌ನಲ್ಲಿ ಹೃದಯ ಅರಳಿ ಹಾಡಿದೆ..ಎಂಬ ಸಾಲು ವೀಕ್ಷಕರ ಹುಬ್ಬೇರುವ ಹಾಗೆ ಮಾಡಿದೆ. ಆದರೆ ಅನುಶ್ರೀ ಈ ಹಾಡು ಹಾಡಿದ್ದು ಲಂಡನ್ ಸೇತುವೆ ಬಗೆಗೆ.
ಇನ್ನೂ . ಲವ್ಲೀ ಲಂಡನ್ ಮೋಡಿಗೆ ಹೃದಯ ಅರಳಿ ನಲಿದಿದೆ. ಮೋಹಕ ಚುಂಬಕ ನಾಡಿಗೆ ಮನಸು ಜಿಗಿದು ಹಾರಿದೆ ಎಂಬ ಸುಪ್ರಸಿದ್ಧ ಗೀತೆಗೆ ಅವರು ಲಂಡನ್ ಬ್ರಿಡ್ಜ್ ಮೇಲಿಂದಲೇ ರೀಲ್ಸ್ ಮಾಡಿ ಹಾಕಿದ್ದಾರೆ. ಗಾಯಕಿ ಐಶ್ವರ್ಯಾ ರಂಗರಾಜ್ ಕೂಡ ಜೊತೆಗಿದ್ದಾರೆ.ಇನ್ನೂ ಆಂಕರ್ ಅನುಶ್ರೀ ಅವರು ಲಂಡನ್‌ಗೆ ಹೋಗಿದ್ದು ಯಾಕೆ ಎಂದರೇ.. ಅನುಶ್ರೀ ಲಂಡನ್‌ಗೆ ಹೋಗಿದ್ದು ಗಾಯಕ ವಿಜಯ ಪ್ರಕಾಶ್ ತಂಡದೊಂದಿಗೆ.
ಕಾರ್ಯಕ್ರಮ ನಿರೂಪಣೆಗಾಗಿ. ಸೋ ಇದಕ್ಕೆ ಬೇರೇನೂ ಅರ್ಥ ಕಲ್ಪಿಸೋ ಹಾಗಿಲ್ಲ. ಸದ್ಯ ಮದುವೆ ಬಗ್ಗೆ ಲವ್ಲೀ ಲಂಡನ್‌ನಲ್ಲಾದರೂ ಅನುಶ್ರೀ ತನ್ನ ಹುಡುಗನ ಹೆಸರನ್ನು ಗಾಳಿಯಲ್ಲಿ ಕೂಗಿ ಹೇಳ್ತಾರ ಅಂತ ಕಾದುನೋಡಬೇಕಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.