ಸರಿಗಮಪ ಫಿನಾಲೆ ಯಲ್ಲಿ ನಡೀತಾ ಮೋಸ, ವೇದಿಕೆ ಮೇಲಿದ್ದ ಅನುಶ್ರೀನೆ ಶಾ,ಕ್
ಸರಿಗಮಪ ಇದು ಜೀ ಕನ್ನಡದಲ್ಲಿ ಪ್ರಸಾರವಾಗುವ ಒಂದು ರಿಯಾಲಿಟಿ ಶೋ ಆಗಿದ್ದು ಈ ರಿಯಾಲಿಟಿ ಶೋ ಹೆಚ್ಚು ಜನಪ್ರಿಯವಾಗಿದೆ. ಆ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯ ವೀಕ್ಷಕರು ಫಿನಾಲೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಂದು ಯಾರಾಗ್ತಾರೆ ವಿನ್ನರ್ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ. ಸರಿಗಮಪ ಶೋ ವಿನ್ನರ್ ದರ್ಶನ್ ನಾರಾಯಣ್ ಆಗಿದ್ದಾರೆ.
ಗೆಲುವಿನ ಪಟ್ಟವನ್ನು ಇವರು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಈ ಸಲವೂ ಮೋಸ ಆಗಿದೆ ಎಂಬ ಮಾತು ಕೇಳಿ ಬರ್ತಿದೆ. ಹೌದು ರಮೇಶ್ ಲಮಾಣಿಗೆ ಸಿಗಬೇಕಿದ್ದ ಪಟ್ಟ ಇವರಿಗೆ ಸಿಕ್ಕಿದೆ ಎಂದು ಅನುಶ್ರೀ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.ವಿನ್ನರ್ ಎಂದು ಅನೌನ್ಸ್ ಆಗಿ ಆನಂದ ಪಡಬೇಕಿದ್ದ ರಮೇಶ್ ಲಮಾಣಿ ಫಸ್ಟ್ ರನರ್ ಅಪ್ ಆಗಿದ್ದಾರೆ. ಡಾ.ಶ್ರಾವ್ಯಾ ರಾವ್ ಅವರು 2nd ರನ್ನರ್ ಅಪ್ ಆಗಿದ್ದಾರೆ. ಬಹಳ ಜನರ ನಿರೀಕ್ಷೆಗೆ ಇಂದು ಉತ್ತರ ಲಭಿಸಿದೆ. ಅದ್ಭುತ ಪ್ರತಿಭೆಯಿಂದ ಎಲ್ಲರ ಮನಗೆದ್ದು ಸರಿಗಮಪ ಸೀಸನ್ 20ರ ಗೆಲುವಿನ ಕಿರೀಟ ತೊಟ್ಟವರು ದರ್ಶನ್ ನಾರಾಯಣ್ ಅವರಾಗಿದ್ದಾರೆ.
ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಅರ್ಜುನ್ ಜನ್ಯ, ಹಂಸಲೇಖಾ ಹಾಗೂ ವಿಜಯ್ ಪ್ರಕಾಶ್ ಅವರು ಇದ್ದರು. ಅನುಶ್ರೀ ಅವರು ಈ ಕಾರ್ಯಕ್ರಮ ನಿರ್ವಹಣೆ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ನಗದು ಬಹುಮಾನವನ್ನು ನೀಡಲಾಗಿದೆ. ಫಿನಾಲೆ ಸಡಗರಕ್ಕೆ ಮೆರುಗು ಕೊಟ್ಟ ಅಪ್ಪು ಬರ್ತ್‌ಡೇ ಸಂಭ್ರಮ ಹೆಚ್ಚು ಜನರನ್ನು ಮುಟ್ಟಿತ್ತು. ಈ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಪುನೀತ್ ರಾಜ್ಕುಮಾರ್ ಅವರ ಕಟೌಟ್ ನಿಲ್ಲಿಸಲಾಗಿತ್ತು.
ಸರಿಗಮಪ ಅಲ್ಲಿ ಈ ರೀತಿ ಮೋಸ ಆಗ್ತಿರೋದು ಇದೆ ಮೊದಲಲ್ಲ. ಸಂಚಿತ್ ಹೆಗ್ಡೆ , ಐಶ್ವರ್ಯ ಹೀಗೆ ಒಳ್ಳೆಯ ಗಾಯಕರು ಗೆದ್ದಿಲ್ಲ ಆದರೆ ಒಳ್ಳೆಯ ಹೆಸರು ಮಾಡಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.ಈ ಹಿಂದೆ ಯಾದಗಿರಿಯಲ್ಲಿ ಸರಿಗಮಪ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಕಾರ್ಯಕ್ರಮ ಆರಂಭವಾಗಲು ಇನ್ನೇನೂ ಅರ್ಧಗಂಟೆ ಇದೆ ಎಂದಾಗ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಸಂಜೆ ಆರು ಗಂಟೆಗೆ ಈ ಕಾರ್ಯಕ್ರಮ ನಡೆಯಲು ಸಜ್ಜಾಗಿತ್ತು. ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ಇದೀಗ ಬೆಂಗಳೂರಿನಲ್ಲಿ ಅದ್ಧೂರಿ ಗ್ರ್ಯಾಂಡ್ ಫಿನಾಲೆ ನಡೆಸಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.