ಪವಾಡ ಎಂಬಂತೆ ಅರ್ಜುನನ ಸಮಾಧಿ ಬಳಿ ಬಂದ ಆ.ರೋಪಿ ಕಾಡನೇ, ಮಾವುತನ ಕುಟುಂಬಸ್ಥರು ಫಿದಾ

 

ಅತ್ಯಂತ ಪ್ರೀತಿ ಪಾತ್ರರು ಇಲ್ಲವೇ ಪರಿಚಯದವರು ತೀರಿ ಹೋದರೆ ಮನುಷ್ಯರಲ್ಲಿ ಹೋಗಿ ನೋಡಿ ಬರುವ ವಾಡಿಕೆ ಇದೆ. ಅದೇ ರೀತಿ ಆನೆಗಳಲ್ಲಿ ಸಹ ಯಾವುದೇ ಆನೆ ಸತ್ತರೆ ಆ ಆನೆಯ ಸಮಾಧಿಯನ್ನು ಹೋಗಿ ನೋಡುವ ಪದ್ಧತಿ ಇದೆಯೆಂದು ಹಲವಾರು ಜನ ಹೇಳುತ್ತಾರೆ.ಆದರೆ ಅದು ಈಗ ನಿಜವೆನಿಸಿದೆ.

ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಡಿಸೆಂಬರ್‌ 4 ರಂದು ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮೃತಪಟ್ಟ ಸ್ಥಳದಲ್ಲೇ ಅರ್ಜುನನ್ನು ಸಮಾಧಿ ಮಾಡಲಾಗಿದೆ. ತಾತ್ಕಾಲಿಕವಾಗಿ ಅರ್ಜುನನ ಸಮಾ ಸುತ್ತ ತಂತಿಬೇಲಿ ಹಾಕಲಾಗಿತ್ತು. ಡಿಸೆಂಬರ್‌ 14 ರಾತ್ರಿ ಕಾಡಾನೆಗಳ ಹಿಂಡು ಅರ್ಜುನನ ಆನೆ ಸಮಾಧಿ ಬಳಿ ಬಂದು ಹೋಗಿವೆ. <a href=https://youtube.com/embed/XtbkcdhZYts?autoplay=1&mute=1><img src=https://img.youtube.com/vi/XtbkcdhZYts/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸಮಾಧಿ ಶುಚಿಗೊಳಿಸಿ, ಹೂಗಳಿಂದ ಸಿಂಗರಿಸಿ, ಅರ್ಜುನನ ಭಾವಚಿತ್ರವಿಟ್ಟು ಪೂಜಿಸಲಾಯಿತು. ಬಳಿಕ ಅರ್ಚಕರು ಹಾಲು-ತುಪ್ಪ ಸಮರ್ಪಣೆ ಮಾಡಿದರು. ಮಾವುತ ವಿನು ಕುಟುಂಬದ ಸದಸ್ಯರು ಸಮಾಧಿ ಬಳಿ ಬಿಕ್ಕಿ ಬಿಕ್ಕಿ ಅಳುತ್ತಲೇ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆ ಸಮಾಧಿಯ ಬಳಿ ಬಂದು ಹೋಗಿರುವ ಕಾಡಾನೆಗಳು ತೆಂಗಿನಕಾಯಿ ಸಹ ಮುಟ್ಟಿಲ್ಲ.

ಇನ್ನೂ ತಡ ರಾತ್ರಿ ಅರ್ಜುನ ಸಮಾಧಿ ಸ್ಥಳಕ್ಕೆ ಕಾಡಾನೆ ಬಂದು, ಸುತ್ತಲೂ ಹಾಕಿದ್ದ ತಂತಿಬೇಲಿಯನ್ನು ದ್ವಂಸ ಮಾಡಿದೆ. ಕಂಬ ಹಾಗೂ ತಂತಿಯನ್ನು ತುಳಿದು ಹಾಕಿ, ಸಮಾಧಿಯ ಹತ್ತಿರಕ್ಕೂ ಬಂದು ಓಡಾಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಕಾಡಾನೆಗಳು ಬಂದು ಅರ್ಜುನ ಸಮಾಧಿಗೆ ನಮಿಸಿ ಹೋಗಿವೆ ಆನೆಗಳಲ್ಲಿ ಆ ಪದ್ದತಿ ಇದೆ ಎಂದು ಸ್ಥಳೀಯ ಜನ ಹೇಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarundu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.