ಗೊಂಬೆಯಂತಿರುವ ಕನ್ನಡದ ನ ಟಿ ಆ.ತ್ಮಹತ್ಯೆಗೆ ಯತ್ನ

 

ಇತ್ತಿಚಿನ ದಿನಗಳಲ್ಲಿ ಹಲವಾರು ಕಲಾವಿದರು ಇಹಲೋಕ ತ್ಯಜಿಸಿದ್ದಾರೆ. ಅವರಲ್ಲಿ ಹಲವಾರು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಅವರ ಸಾಲಿನಲ್ಲಿ ಭೋಜಪುರಿ ಇನ್ನೊಬ್ಬ ನಟಿ ಸೇರಿದ್ದಾಳೆ. ಹೌದು ಭೋಜ್​ಪುರಿ ನಟಿ ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಮೃತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅದಾಮ್​ಪುರದ ದಿವ್ಯಾಧರ್ಮ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ.


ಅಮೃತಾ ಅವರಿಗೆ 27 ವರ್ಷ ವಯಸ್ಸಾಗಿತ್ತು. ಸಾಯುವುದಕ್ಕೂ ಮೊದಲು ಅವರು ನಿಗೂಢಾರ್ಥದಲ್ಲಿ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿದ್ದರು. ಅದಾಮ್​ಪುರದ ದಿವ್ಯಾಧರ್ಮ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ನಡೆದಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಅವರು ಬಂದು ನೋಡಿದಾಗ ಬಾಡಿ ಹಾಸಿಗೆ ಮೇಲಿತ್ತು.


ಅಮೃತಾ ಸಹೋದರಿ ಮೊದಲು ರೂಂ ಒಳಗೆ ಬಂದಿದ್ದರು. ಈ ವೇಳೆ ಅಕ್ಕನನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿ ಶಾಕ್ ಆದರು. ಜೊತೆಗೆ ಅವರನ್ನು ಕೆಳಕ್ಕೆ ಇಳಿಸೋ ಪ್ರಯತ್ನ ಮಾಡಿದರು. ಆದರೆ, ಆಗಲೇ ಸಮಯ ಮೀರಿತ್ತು.ಅಮೃತಾ ಪಾಂಡೆ ಅವರು ಸಾಯುವುದಕ್ಕೂ ಮೊದಲು ಸ್ಟೇಟಸ್ ಒಂದನ್ನು ಹಾಕಿದ್ದರು.  <a href=https://youtube.com/embed/QNGUUqJOrfk?autoplay=1&mute=1><img src=https://img.youtube.com/vi/QNGUUqJOrfk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅವರ ಜೀವನ ಎರಡು ದೋಣಿಗಳ ಮೇಲಿದೆ. ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವರ ಮಾರ್ಗವನ್ನು ಸುಲಭಗೊಳಿಸಿದ್ದೇವೆ ಎಂದು ಸ್ಟೇಟಸ್ ಹಾಕಿದ್ದರು. ಇದರಿಂದ ಅವರ ಪತಿ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದರೇ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

2022ರಲ್ಲಿ ಅಮೃತಾ ಅವರು ಚಂದ್ರಮಣಿ ಎಂಬುವವರನ್ನು ವಿವಾಹವಾದರು. ಅವರ ಪತಿ ವೃತ್ತಿಯಲ್ಲಿ ಇಂಜಿನಿಯರ್. ಅಮೃತಾ ಅವರು ನಟನೆಯಲ್ಲಿ ಸರಿಯಾಗಿ ಚಾನ್ಸ್ ಸಿಗದೆ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ಹೇಳಿಕೆ ನೀಡಿದ್ದಾರೆ.