ಬಿಗ್ ಬಾಸ್ ಮನೆಯಲ್ಲಿ ಆಂಟಿ ಅಂಕಲ್ ಲವ್ ಸ್ಟೋರಿ, ಮುಂಗಾರು ಮಳೆ ಗಣೇಶ್ ಆದ ಲಾಯರ್ ಜಗದೀಶ್
Oct 11, 2024, 10:28 IST
ಬಿಗ್‌ಬಾಸ್ ಸೀಸನ್ 11 ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಕಾಂಟ್ರವರ್ಸಿ ಸೃಷ್ಟಿಸುತ್ತಲೇ ಇದೆ. ಲಾಯರ್ ಜಗದೀಶ್ ಅಂತೂ ಸುಮ್ಮನೆ ಇರದೆ ಒಂದಲ್ಲ ಒಂದು ವಿಚಾರಕ್ಕೆ ಕೋಲಾಹಲ ಸೃಷ್ಟಿಸುತ್ತಿದ್ದು, ಇದೀಗ ಸಡನ್ ಆಗಿ ಬದಲಾಗಿ ಹೋಗಿದ್ದಾರೆ. ಸದ್ಯ ಮನೆಯ ಕ್ಯಾಪ್ಟನ್ ಆಗಿರುವ ಹಂಸ ಅವರ ಜೊತೆ ಲಾಯರಪ್ಪ ಫ್ಲರ್ಟ್ ಮಾಡೋಕೆ ಶುರು ಮಾಡಿದ್ದಾರೆ.
ಹೌದು, ಲಾಯರ್ ಜಗದೀಶ್ ಮೊದಲ ವಾರ ರೆಬೆಲ್ ಸ್ಟಾರ್ ಆಗಿದ್ದರು. ಆದರೆ, ಈ ವಾರ ಗೋಲ್ಡನ್ ಸ್ಟಾರ್ ಆಗಿ ಬದಲಾಗಿದ್ದಾರೆ. ಕಿರುತೆರೆ ವೀಕ್ಷಕರಿಗೆ ಎರಡನೇ ವಾರ ದಿನದಿಂದ ದಿನಕ್ಕೆ ಮಜಾ ಸಿಗುತ್ತಿದೆ. ಅದರಲ್ಲೂ ಲಾಯರ್ ಜಗದೀಶ್ ಹಾಗೂ ಹಂಸ ಜೋಡಿ ಮಸ್ತ್ ಮನರಂಜನೆ ನೀಡುತ್ತಿದ್ದಾರೆ. ಇವರಿಬ್ಬರ ನಡುವಿನ ಮಾತುಕತೆ ಕಿರುತೆರೆ ವೀಕ್ಷಕರಿಗೆ ನಗಿಸುವುದಕ್ಕೆ ಶುರು ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿ ಹೆಣ್ಮಕ್ಕಳು ಇದ್ದಾರೆ ಎನ್ನುವ ಅರಿವು ಇಲ್ಲದೆ ಅಸಭ್ಯವಾಗಿ ಮಾತಾಡಿದ್ರು. ಕೆಟ್ಟ ಪದ ಬಳಸಿ ಬೈಯ್ದಾಡಿದ್ರು. ಇದೇ ವಿಚಾರಕ್ಕೆ ಕಿಚ್ಚ ಸುದೀಪ್ ಕೂಡ ಜಗದೀಶ್ ಅವರಿಗೆ ವಾರ್ನಿಂಗ್ ಕೊಟ್ಟಿದ್ರು. ಮನೆ ಮಂದಿಯನ್ನು ಎಳೆದು ತರಬೇಡಿ ಎಂದಿದ್ರು. ಇದೀಗ ಲವರ್ ಬಾಯ್ ರೀತಿ ಆಡ್ತಿರೋ ಜಗದೀಶ್ ಹಂಸ ಹಿಂದೆ ಬಿದ್ದಿದ್ದಾರೆ.
ಐ ಲವ್ ಯೂ ಕ್ಯಾಪ್ಟನ್ ಎಂದ ಜಗದೀಶ್, ಲವರ್ ಬಾಯ್ ರೀತಿ ಹಂಸ ಅವರ ಹಿಂದೆ-ಮುಂದೆ ಓಡ್ತಿದ್ದಾರೆ. ಅಷ್ಟೇ ಅಲ್ಲದೇ ಡ್ಯಾನ್ಸ್ ಮಾಡುತ್ತಾ ಹಂಸ ಜೊತೆಯೂ ಕುಣಿದಿದ್ದಾರೆ. ಹಂಸಗೆ ಕಾಟ ಕೊಡ್ಬೇಕು ಅಂತಾನೆ ಜಗದೀಶ್ ಈ ರೀತಿ ಮಾಡ್ತಿದ್ದಾರೆ ಎನ್ನಲಾಗ್ತಿದೆ.
<a href=https://youtube.com/embed/HRymPZhShVc?autoplay=1&mute=1><img src=https://img.youtube.com/vi/HRymPZhShVc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನಗೆ ಗೋಬಿ ಮಂಚೂರಿ ಬೇಕು. ಗೋಬಿ ಮಂಚೂರಿ ಇಲ್ಲವೆಂದರೆ ನಿನ್ನನ್ನೇ ಮಂಚೂರಿ ಮಾಡಿಕೊಂಡು ತಿನ್ನುತ್ತೇನೆ ಅಂತ ಡೈಲಾಗ್ ಹೊಡೆದಿದ್ದಾರೆ. ಇನ್ನೊಂದೆಡೆ, ಜಗದೀಶ್ ನೆಲದ ಮೇಲೆ ಮಲಗಿದ್ದಾರೆ. ಕ್ಯಾಪ್ಟನ್ ಹಂಸ ಮುಂಗಾರು ಮಳೆ ಪೂಜಾ ಗಾಂಧಿ ತರಹ ಅವರ ಎದೆ ಮೇಲೆ ಕಾಲಿಟ್ಟು ನಡೆದುಕೊಂಡು ಹೋಗಿದ್ದಾರೆ. ಒಟ್ಟಿನಲ್ಲಿ ಅಂಕಲ್ ಆಂಟಿ ಲವ್ ಸ್ಟೋರಿ ಕರಾಬ್ ಆಗಿದೆ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.