ಪುಟ್ಟಕ್ಕನ ‌ಮಕ್ಕಳು ಸ್ನೇಹ ಬದಲಿಗೆ ಬ್ಯುಟಿಫುಲ್ ನಟಿ ಎಂಟ್ರಿ

 
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಿಂಗಾರಮ್ಮನ ಕುತಂತ್ರಕ್ಕೆ ಸ್ನೇಹಾ ಬಲಿ ಆಗಿದ್ದಾಳೆ. ಅಂದು ಗಂಡು ಮಗು ಹುಟ್ಟಿಲ್ಲ ಅಂತ ಪತ್ನಿ, ಮೂವರು ಹೆಣ್ಣು ಮಕ್ಕಳನ್ನು ಬಿಟ್ಟು ಇನ್ನೊಂದು ಮದುವೆ ಆಗಿದ್ದ ಅಪ್ಪನ ಎದುರು ನಿಂತುಕೊಳ್ಳಬೇಕು, ಐಎಎಸ್ ಆಗಬೇಕು ಎಂದುಕೊಂಡಿದ್ದ ಸ್ನೇಹಾ ಕೊನೆಗೂ ತನ್ನ ಆಸೆ ಈಡೇರಿಸಿಕೊಂಡಿದ್ದಳು.
ಇನ್ನು ಕಂಠಿಯನ್ನು ಮದುವೆಯಾಗಿ, ಅವನನ್ನು ಕೂಡ ಬದಲಾಯಿಸಿದಳು. ಅಷ್ಟೇ ಅಲ್ಲದೆ ಬಂಗಾರಮ್ಮ ಕಾನೂನಿನ ಮೂಲಕ ಬಡ್ಡಿ ವ್ಯವಹಾರ ಮಾಡುವಂತೆ ಅನುವು ಮಾಡಿಕೊಟ್ಟಳು. ಇಷ್ಟೆಲ್ಲ ಸಾಧನೆ ಮಾಡಿದ್ದ ಸ್ನೇಹಾ ಈಗ ಸತ್ತೋಗಿದ್ದಾಳೆ. ಹೊಟ್ಟೆ ಬಟ್ಟೆ ಕಟ್ಟಿ ಸ್ನೇಹಾಳನ್ನು ಓದಿಸಿದ್ದೆ, ಬೆಳೆಸಿದ್ದೆ, ಈಗ ಹೀಗೆ ಆಗೋಯ್ತು ಅಂತ ಪುಟ್ಟಕ್ಕ ಕಣ್ಣೀರು ಹಾಕಿದ್ದಾಳೆ. ಒಟ್ಟಿನಲ್ಲಿ ಈ ಎಪಿಸೋಡ್ ಭಾರೀ ಭಾವನಾತ್ಮಕವಾಗಿದೆ. ವೀಕ್ಷಕರು ಈ ಎಪಿಸೋಡ್ ನೋಡಿ ಕಣ್ಣೀರಿಟ್ಟಿದ್ದಾರೆ.
<a href=https://youtube.com/embed/BzabbkX3kds?autoplay=1&mute=1><img src=https://img.youtube.com/vi/BzabbkX3kds/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನೊಂದು ಕಡೆ ಸ್ನೇಹಾ ಪಾತ್ರದಿಂದ ಸಂಜನಾ ಬುರ್ಲಿ ಅವರು ಹೊರನಡೆದಿದ್ದಾರೆ. ಸ್ನೇಹಾ ಪಾತ್ರವನ್ನು ಅನೇಕರು ಇಷ್ಟಪಟ್ಟಿದ್ದರು. ಈಗ ಸ್ನೇಹಾ ಪಾತ್ರದಲ್ಲಿ ಸಂಜನಾ ಬಿಟ್ಟು ಬೇರೆಯವರನ್ನು ಒಪ್ಪಿಕೊಳ್ಳಲು ವೀಕ್ಷಕರು ಕಷ್ಟಪಡಬಹುದು. ಹೀಗಾಗಿ ಈ ಪಾತ್ರವನ್ನು ಅಂತ್ಯ ಮಾಡಿದ ಹಾಗೆ ಆಗಿದೆ. ಇನ್ನು ಗಂಗಾಧರ್ ಎನ್ನುವವನ ಮಗಳಿಗೆ ಹೃದಯದ ಸಮಸ್ಯೆ ಇತ್ತು. ಅತ್ತ ಅಪಘಾತದಲ್ಲಿ ತೀರಿಕೊಂಡಿದ್ದ ಸ್ನೇಹಾ ಹೃದಯ ಇನ್ನೂ ಬದುಕಿತ್ತು. ಹೀಗಾಗಿ ಸ್ನೇಹಾ ಹೃದಯವನ್ನು ತೆಗೆದು ಗಂಗಾಧರನ ಮಗಳಿಗೆ ಹಾಕಿ ಕಸಿ ಮಾಡಿದ್ದಾರೆ. ಅಲ್ಲಿಗೆ ಇನ್ನೂ ಸ್ನೇಹಾ ಬದುಕಿದ್ದಾಳೆ ಎಂದರ್ಥ. ಇದೇ ಕಾರಣಕ್ಕೆ ಗಂಗಾಧರನ ಮಗಳು, ಕಂಠಿ ಕ್ಲೋಸ್ ಆದರೂ ಆಶ್ಚರ್ಯ ಇಲ್ಲ.
ಇನ್ನು ಹೊಸದಾಗಿ ಹಿಟ್ಲರ್ ಕಲ್ಯಾಣದ ನಟಿ ಮಲ್ಲಿಕಾ ವಸುಪಾಲ್ ಕೂಡ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಭಾಗವಾಗುತ್ತಾರೆ. ಕಂಠಿಯ ಜೊತೆ ಆಗ್ತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಅಷ್ಟಕ್ಕೂ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಎಡವಟ್ಟು ಲೀಲಾ ಆಗಿ ಜನಪ್ರಿಯತೆ ಪಡೆದ ನಟಿ ಮಲೈಕಾ ವಸುಪಾಲ್. ಮೊದಲ ಸೀರಿಯಲ್ ನಲ್ಲೇ ಸಾಕಷ್ಟು ಜನಪ್ರಿಯತೆ ಪಡೆದ ಮಲೈಕಾಗೆ ಬಿಗ್ ಸ್ಕ್ರೀನ್ ನಲ್ಲಿ ಮಿಂಚುವ ಅವಕಾಶವೂ ಒದಗಿ ಬಂದಿತ್ತು.
ಇನ್ನು ಮೊದಲ ಸೀರಿಯಲ್ ನಿಂದಾನೆ ಜನಪ್ರಿಯತೆ ಪಡೆದಿರುವ ಮಲೈಕಾಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ, ಸಿನಿಮಾ, ಪರಭಾಷಾ ಸೀರಿಯಲ್ ಗಳಿಂದಲೂ ಆಫರ್ ಸಿಕ್ಕಿವೆಯಂತೆ. ಈಕೆಗೆ ರಮೇಶ್ ಅರವಿಂದ್, ಯಶ್, ದರ್ಶನ್ ಜೊತೆ ಅಭಿನಯಿಸಬೇಕೆಂಬ ಕನಸಂತೆ. ಆದ್ರೆ ಸೀರಿಯಲ್ ನಟಿಸೋಕೆ ಇಷ್ಟ ಅಂತಿದ್ದಾರೆ.