ಈ‌ ಬಾರಿ ಬಿಗ್ ಬಾಸ್ ರನ್ನರ್ ಅಪ್ ಆದವರಿಗೆ 10 ಲಕ್ಷ ಬಹುಮಾನ ಘೋಷಣೆ ಮಾಡಿದ ವರ್ತೂರ್ ಸಂತು

 

ಪ್ರತಿ ವರ್ಷದಂತೆ ಈ ವರ್ಷ ಕೂಡ ಬಿಗ್ ಬಾಸ್ ಆರಂಭವಾಗಿ ಎರಡು ದಿನ ಕಳೆದಿದೆ. ಬಿಗ್ ಬಾಸ್ ಮನೆಯಲ್ಲಿ ಎಂದಿನಂತೆ ಸ್ಪರ್ಧಿಗಳಿಗೆ ಟಾಸ್ಕ್ ಕೂಡ ನೀಡಲಾಗುತ್ತಿದೆ. ಆದರೆ ಈ ಬಾರಿಯ ಬಿಗ್ ಬಾಸ್ ಪ್ರತಿ ವರ್ಷದಂತೆ ಕಾಣುತ್ತಿಲ್ಲ.

ಹೌದು, ಈ‌ ಬಾರಿ ಬಿಗ್ ಬಾಸ್ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಮನೆಗೆ ಬ‌ಂದ ಸ್ಪರ್ಧಿಗಳಿಗೆ ಪ್ರತಿ ಕ್ಷಣ ಆತಂಕ ಎದುರಾಗಿದೆ. ಯಾಕೆಂದರೆ ಮೊನ್ನೆಯಷ್ಟೆ ಬಿಗ್ ಬಾಸ್ ಮನೆಗೆ ಬಂದಿದ್ದ ರಕ್ಷಿತಾ ಶೆಟ್ಟಿ ಅವರನ್ನು ಏಕಾಏಕಿ ‌ಮನೆಗೆ ಕಳುಹಿಸಲಾಗಿದೆ.

ಹಾಗಾಗಿ ಈ ಬಾರಿಯ ಬಿಗ್ ಬಾಸ್ ತುಂಬಾ Different ಎನ್ನಬಹುದು. ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಯಾರು ಗೆಲ್ಲುತ್ತಾರೆ ಅಂತ ಜನ ಸಾಮಾನ್ಯರು ಈಗಾಗಲೇ ಚರ್ಚೆಗೆ ಇಳಿದಿದ್ದಾರೆ. <a style="border: 0px; overflow: hidden" href=https://youtube.com/embed/upgbjfDTKYY?autoplay=1&mute=1><img src=https://img.youtube.com/vi/upgbjfDTKYY/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಹಳ್ಳಿ ಪ್ರತಿಭೆ ಮಲ್ಲಮ್ಮ ಹಾಗೂ ಮಾಳು ಅವರು ಇರುವುದರಿಂದ ಇವರಿಬ್ಬರೂ ಗೆಲ್ಲಬಹುದು ಎಂಬ ಚರ್ಚೆ ಎದ್ದಿದೆ‌. ಇನ್ನು ಇವರಿಬ್ಬರ ನಡುವೆ ಗಿಲ್ಲಿ ಕೂಡ ಸಾಕಷ್ಟು ಪೈಪೋಟಿ ಕೊಡಲಿದ್ದಾರೆ ಎಂದು ಕೆಲ ವೀಕ್ಷಕರು ಲೆಕ್ಕ ಹಾಕಿದ್ದಾರೆ