ಬಿಗ್ ಬಾಸ್ ಅಶ್ವಿನಿ ಬಳಿ ಇದೆ ಕೋಟ್ಯಾಂತರ ರೂಪಾಯಿ ಆಸ್ತಿ, ಆದರೆ ಗಂಡ ಇಲ್ಲ ಮಕ್ಕಳಿಲ್ಲ

 

ಬಿಗ್‌ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಆರಂಭಗೊಂಡಿದ್ದು, ಈ ಬಾರಿ ಮನೆಗೆ ಕಾಲಿಟ್ಟವರು ನಟಿ ಹಾಗೂ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ. ಈಗಾಗಲೇ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಗೂ 25 ಧಾರಾವಾಹಿಗಳಲ್ಲಿ ನಟಿಸಿರುವ ಅಶ್ವಿನಿ, ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ರಾಜಕೀಯ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಅಶ್ವಿನಿ, ಶ್ರೀಮಂತ ಮನೆಯ ಮಗಳು. ತಮ್ಮ ತಾತ-ತಂದೆಯವರು ನಿರ್ಮಿಸಿದ ಆಸ್ತಿ, ರಿಯಲ್ ಎಸ್ಟೇಟ್ ವ್ಯವಹಾರಗಳ ಬಗ್ಗೆ ಅವರು ಹಲವು ಬಾರಿ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ. 150ಕ್ಕೂ ಹೆಚ್ಚು ಮನೆಗಳನ್ನು ಬಾಡಿಗೆಗೆ ನೀಡಿರುವುದಾಗಿ, ಜೊತೆಗೆ 20ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.

ಪ್ರಾಪರ್ಟಿ ಇದ್ದರೆ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಇರುತ್ತವೆ. ಅದನ್ನೇ ಬಗೆಹರಿಸಬೇಕಾಗುತ್ತದೆ ಎಂದು ಅಶ್ವಿನಿ ಹೇಳಿದ್ದಾರೆ.ಅವರ ತಂದೆ ಮುನಿಬಚ್ಚಪ್ಪ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಆದರೂ ಅಶ್ವಿನಿ ತಮ್ಮನ್ನು ಯಾವುದೇ ರಾಜಕೀಯ ಪಕ್ಷದೊಂದಿಗೆ ಜೋಡಿಸಿಕೊಳ್ಳದೆ, ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. <a style="border: 0px; overflow: hidden" href=https://youtube.com/embed/phrlGg9G1Z4?autoplay=1&mute=1><img src=https://img.youtube.com/vi/phrlGg9G1Z4/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಕಲಾವಿದೆಯ ಜೊತೆಗೆ ಹೋರಾಟಗಾರ್ತಿಯಾಗಿ ಜನರಿಗೆ ಪರಿಚಿತರಾಗಿರುವ ಅಶ್ವಿನಿ, ಕುಟುಂಬದ ವಿಚಾರಕ್ಕೆ ಸೋಲಬಹುದು, ಆದರೆ ಬೇರೇನೂ ನನಗೆ ಅಡ್ಡಿ ಆಗುವುದಿಲ್ಲ. ನಿಜವಾದ ಅಶ್ವಿನಿ ಯಾರು ಎಂಬುದನ್ನು ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ತೋರಿಸುತ್ತೇನೆ ಎಂದು ತಮ್ಮ ವಿಟಿಯಲ್ಲಿ ಹೇಳಿದ್ದಾರೆ.ಬಿಗ್‌ಬಾಸ್ ವೇದಿಕೆಯಲ್ಲಿ ಸುದೀಪ್ ಎದುರು ಮಾತನಾಡಿದಾಗ, ತಾನು ಕೆಚ್ಚೆದೆಯ ಹೋರಾಟಗಾರ್ತಿಯಾಗಿ ಮನೆ ಒಳಗೆ ಆಡಲು ಬಂದಿದ್ದೇನೆ ಎಂದು ಅಶ್ವಿನಿ ಸ್ಪಷ್ಟಪಡಿಸಿದ್ದಾರೆ.