ಬಿಗ್ ಬಾಸ್ ಸ್ಪರ್ಧಿಯ ಬಾಳಲ್ಲಿ ಬಿರುಗಾಳಿ; ಡಿ ವೋರ್ಸ್ ಬಗ್ಗೆ ಚಿಂತನೆ
Jul 10, 2024, 13:33 IST
ಸೆಲೆಬ್ರೆಟಿಗಳು ತಮ್ಮ ವಿಚ್ಚೇದನ ಗೌಪ್ಯವಾಗಿಟ್ಟರೂ ಸೋಶಿಯಲ್ ಮೀಡಿಯಾಗಳಿಂದ ಮದುವೆ ಫೋಟೋ ವಿಡಿಯೋಗಳನ್ನು ಡಿಲೀಟ್ ಮಾಡುವ ಮೂಲಕ ಸೂಚನೆ ನೀಡುವ ಟ್ರೆಂಡ್ ಹೆಚ್ಚಾಗಿದೆ. ಬಿಗ್ ಬಾಸ್ ಮೂಲಕ ಒಂದಾಗಿ ಸಂಸಾರ ಆರಂಭಿಸಿದ ಕೆಲ ಜೋಡಿ ಈಗಾಗಲೇ ಡಿವೋರ್ಸ್ ಪಡೆದುಕೊಂಡಿದೆ. ಇದೀಗ ಬಿಗ್ ಬಾಸ್ 8ರ ಸ್ಪರ್ಧಿ ರೇನೆ ಧ್ಯಾನಿ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾ ಮೂಲಕ ರಟ್ಟು ಮಾಡಿದ್ದರು.
ಮದುವೆ ಸಂಭ್ರಮದ ವಿಡಿಯೋ ಹಂಚಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿದ್ದರು. ಆದರೆ ಮರು ದಿನವೇ ಈ ವಿಡಿಯೋ ಡಿಲೀಟ್ ಮಾಡುವ ಮೂಲಕ ಇದೀಗ ಅನುಮಾನ ಹೆಚ್ಚಿಸಿದ್ದಾರೆ.ಹಿಂದಿ ಬಿಗ್‌ಬಾಸ್ 8ರಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ರೆನೆ ಧ್ಯಾನಿ ಜುಲೈ 5ರ ರಾತ್ರಿ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ಇನ್‌ಸ್ಟಾಗ್ರಾಂ ಮೂಲಕ ಮದುವೆಯ ಸಂಭ್ರಮದ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದರು.
ಅರೇಂಜ್ ಮ್ಯಾರೇಜ್ ಇದಾಗಿದ್ದು, ಆದರೆ ಅರೇಂಜ್ ಮ್ಯಾರೇಜ್ ಲವ್ ಮ್ಯಾರೇಜ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದೇನೆ ಎಂದು ಬರೆದುಕೊಂಡಿದ್ದರು. ಪತಿಯೊಂದಿಗೆ ಕೈ ಕೈ ಹಿಡಿದು ಸಪ್ತಪದಿ ತುಳಿದ ಈ ವಿಡಿಯೋಗೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು, ಸೆಲೆಬ್ರೆಟಿಗಳು, ಆಪ್ತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದರು. ದಾಂಪತ್ಯ ಜೀವನ ಸುಖಕರವಾಗಿರಲೆಂದು ಹಾರೈಸಿದ್ದರು. ಸದ್ದಿಲ್ಲದೆ ರೇನೆ ಧ್ಯಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಈ ಕುರಿತು ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ಮದುವೆ ಬಳಿಕ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು. ಜುಲೈ5 ರ ರಾತ್ರಿ ಶುಭಾಶಗಳ ಮಹಾಪೂರವೇ ಹರಿದು ಬಂದಿತ್ತು. ಮರುದಿನ ಬೆಳಗ್ಗೆ ಎದ್ದಾಗ ರೆನೆ ಧ್ಯಾನಿ ಮದುವೆ ವಿಚಾರ ಎಲ್ಲೆಡೆ ಹರಿದಾಡಿತ್ತು. ಹೀಗಾಗಿ ಅಭಿಮಾನಿಗಳು ಶುಭಕೋರಲು ಇನ್‌ಸ್ಟಾಗ್ರಾಂ ಖಾತೆಗೆ ತೆರಳಿದರೆ ಮದುವೆ ವಿಡಿಯೋ, ಪೋಸ್ಟ್‌ಗಳು ಡೀಲೀಟ್ ಮಾಡಲಾಗಿದೆ.
ಜೊತೆಗೆ ಒಂದು ಸಂದೇಶವನ್ನು ನೀಡಿದ್ದರು. ಅನಾನುಕೂಲಕ್ಕಾಗಿ ಕ್ಷಮಿಸಿ, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ. ಆದರೆ ಸರಿಯಾದ ಸಮಯದಲ್ಲಿ ಸರಿಯಾಗಿ ಮಾಹಿತಿ ನೀಡುತ್ತೇನೆ ಎಂಬ ಸಂದೇಶ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.