ಒಂದು ವರ್ಷದ ಬಳಿಕ ಕಾರು ಗಿಫ್ಟ್ ಕೊಟ್ಟ ಬಿಗ್ ಬಾಸ್; ಇದು ದೊಡ್ಡ ಮೋಸ ಎಂದ ಕಾರ್ತಿಕ್

 
ಬಿಗ್ ಬಾಸ್ ಕನ್ನಡ ಸೀಸನ್ 10’ ಅಂತ್ಯವಾಗಿ 7 ತಿಂಗಳುಗಳು ಕಳೆದಿವೆ. ಈ ಶೋ ವಿಜೇತ ಕಾರ್ತಿಕ್ ಮಹೇಶ್ ಅವರಿಗೆ 50 ಲಕ್ಷ ರೂಪಾಯಿ ಹಣ, ಕಾರ್ ಕೂಡ ಬಹುಮಾನವಾಗಿ ಸಿಗಲಿದೆ ಎಂದು ಘೋಷಣೆ ಆಗಿತ್ತು. ಹಣ ಸಿಕ್ಕಿತ್ತಾದರೂ ಕೂಡ ಕಾರ್ ಸಿಕ್ಕಿರಲಿಲ್ಲ. ಈಗ ಅವರಿಗೆ ಕಾರ್ ಸಿಕ್ಕಿದೆಯಂತೆ.
ಹೌದು, ಬಿಗ್ ಬಾಸ್’ ಕಾರ್ ಅಂತೂ ಬಂತು ಎಂದು ಕಾರ್ತಿಕ್ ಮಹೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರ ತಾಯಿ ಜೊತೆಗೆ ಹೋಗಿ ಆ ಕಾರ್ ಪಡೆದಿದ್ದಾರೆ. ಇದರ ಜೊತೆಗೆ ಒಂದು ರೈಡ್ ಕೂಡ ಹೋಗಿ ಬಂದಿದ್ದಾರೆ. ಒಂದಷ್ಟು ಪ್ರಕ್ರಿಯೆಗಳು ಇರೋದಿಕ್ಕೆ ಈ ಕಾರ್ ಸಿಗೋದು ತಡ ಆಗುವುದು. ಈ ಹಿಂದಿನ ಸೀಸನ್‌ಗಳ ವಿಜೇತರಿಗೂ ಕೂಡ ತಡವಾಗಿ ಕಾರ್ ಸಿಕ್ಕಿತ್ತು. ಅಂದಹಾಗೆ ಮಾರುತಿ ಬ್ರೀಜಾ ಕಾರ್ ಇದಾಗಿದ್ದು, ಇದಕ್ಕೆ 10 ರಿಂದ 17 ಲಕ್ಷ ರೂಪಾಯಿ ಎನ್ನಲಾಗಿದೆ.
ಬಿಗ್ ಬಾಸ್’ ಶೋನಲ್ಲಿ ಕಾರ್ತಿಕ್ ಮಹೇಶ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿತ್ತು. ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್ ಮಧ್ಯೆ ಯಾರು ವಿಜೇತರಾಗ್ತಾರೆ ಎಂಬ ಕುತೂಹಲ ಜೋರಾಗಿತ್ತು. ಕೊನೆಗೂ ಕಾರ್ತಿಕ್ ಮಹೇಶ್ ಅವರು ಶೋ ಗೆದ್ದರು. ಇನ್ನು ಶೋನಿಂದ ಸಿಕ್ಕ ಹಣದಿಂದ ಏನು ಮಾಡ್ತೀರಿ ಎನ್ನುವ ಪ್ರಶ್ನೆ ಬಂದಾಗಲೂ ಅವರು ಸ್ವಂತ ಮನೆ ಇಲ್ಲ. ಮನೆ ಖರೀದಿ ಮಾಡುವೆ ಎಂದು ಕಾರ್ತಿಕ್ ಮಹೇಶ್ ಅವರು ಹೇಳಿದ್ದರು. <a href=https://youtube.com/embed/-MH9d1ckB8o?autoplay=1&mute=1><img src=https://img.youtube.com/vi/-MH9d1ckB8o/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
 ಬಿಗ್ ಬಾಸ್’ ಶೋ ಮುಕ್ತಾಯವಾಗಿ ಕೆಲ ತಿಂಗಳುಗಳ ಬಳಿಕ ಈ ಬಗ್ಗೆ ಪ್ರಶ್ನೆ ಮಾಡಿದಾಗ ಅವರು ಬಿಗ್ ಬಾಸ್ ಶೋನಿಂದ ಸಿಕ್ಕ ಹಣದಿಂದ ಮಾತ್ರ ಬೆಂಗಳೂರಿನಲ್ಲಿ ಮನೆ ಬರೋದಿಲ್ಲ. ಅದಕ್ಕೆ ನಾನು ಇನ್ನೊಂದಿಷ್ಟು ಹಣ ಸೇರಿಸಬೇಕು. ಆ ಸಮಯ ಬಂದಾಗ ಮನೆ ತಗೊಳ್ಳುವೆ ಎಂದು ಹೇಳಿದ್ದರು. 
ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್’ ಶೋ ನಂತರದಲ್ಲಿ ಸಹಸ್ಪರ್ಧಿಗಳ ಬರ್ತ್‌ಡೇ ಪಾರ್ಟಿ, ಹೋಟೆಲ್ ಅಥವಾ ಇನ್ನಿತರ ಉದ್ಯಮದ ಉದ್ಘಾಟನೆ, ಸಿನಿಮಾ ಪ್ರೀಮಿಯರ್ ಶೋಗಳಲ್ಲಿ ಭಾಗಿ ಆಗೋದರಲ್ಲಿ ಬ್ಯುಸಿ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.