ಜಾಹ್ನವಿ ಅವರ ಮನೆ ಎಷ್ಟು ದೊಡ್ಡದ್ದು, ಬೆಂಗಳೂರಿನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ ಬಿಗ್ ಬಾಸ್ ಜಾಹ್ನವಿ

 

ಕಿರುತೆರೆಯ ಜನಪ್ರಿಯ ಆ್ಯಂಕರ್ ಜಾಹ್ನವಿ  ಬಿಗ್ಬಾಸ್ ಮನೆಗೆ ಕಾಲಿರಿಸಿದ್ದಾರೆ. ಅಲ್ಲದೆ ಈ ಸಮಯದಲ್ಲಿ ತಮ್ಮ ಜೀವನದ ಹಲವು ಅಂಶಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ವೃತ್ತಿ ಪ್ರಾರಂಭಿಸಿದ ಅವರು, ನಂತರ ʻಗಿಚ್ಚಿ ಗಿಲಿಗಿಲಿʼ ಹಾಗೂ ʻನನ್ನಮ್ಮ ಸೂಪರ್‌ ಸ್ಟಾರ್ʼ ನಂತಹ ರಿಯಾಲಿಟಿ ಶೋಗಳಲ್ಲಿ ಮಿಂಚಿದರು. ʻಅಧಿಪತ್ರʼ ಚಿತ್ರದ ಮೂಲಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅವರು, ಈಗ ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಆ್ಯಡ್ ಶೂಟ್ಸ್ ಹಾಗೂ ಈವೆಂಟ್ಸ್‌ಗಳಲ್ಲಿ ನಿರಂತರ ಬ್ಯುಸಿಯಾಗಿದ್ದಾರೆ.

ಶಿಕ್ಷಣದಲ್ಲಿ ಜಾಹ್ನವಿ ಸದಾ ಮುಂದಿದ್ದರು. 10ನೇ ತರಗತಿಯಲ್ಲಿ 88.3% ಪರ್ಸಂಟೇಜ್ ಗಳಿಸಿದರೂ, ತಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಬರಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ. ಸಕಲೇಶಪುರದಲ್ಲಿ ಓದಿದಾಗಲೇ ಉತ್ತಮ ಫಲಿತಾಂಶ ನೀಡಿ ಕಾಲೇಜಿನಲ್ಲಿ ಗೋಲ್ಡ್ ಮೆಡಲ್‌ ಗೆದ್ದಿದ್ದಾರೆ. ಡಿಪ್ಲೋಮಾ ಓದುತ್ತಿದ್ದಾಗ ಕಾರ್ ಅಪಘಾತಕ್ಕೊಳಗಾಗಿ ಕಾಲರ್ ಬೋನ್ ಫ್ಯಾಕ್ಚರ್ ಆದರೂ ಹೋರಾಟವನ್ನು ನಿಲ್ಲಿಸದೆ ಮತ್ತೆ ಓದನ್ನು ಮುಂದುವರಿಸಿದರು. ತಮ್ಮ ಮಗನನ್ನು ಜೀವನದ ದೊಡ್ಡ ಬಲ ಎಂದು ಪರಿಗಣಿಸುವ ಜಾಹ್ನವಿ, ತಂದೆಯ ಕೊರತೆಯನ್ನು ನೆನಪಿಸಿಕೊಂಡಿದ್ದಾರೆ.

ಆರ್ಥಿಕ ಸ್ಥಿರತೆ ಬಗ್ಗೆ ಮಾತನಾಡಿದ ಜಾಹ್ನವಿ, ಇದೀಗ ನನ್ನ ಆದಾಯ ಬಹಳ ಚೆನ್ನಾಗಿದೆ. ಮುಂಚೆ ಒಂದು ಸಂಬಳದಿಂದ ಎಲ್ಲಾ ನಿರ್ವಹಿಸಬೇಕಾಗುತ್ತಿತ್ತು. ಆದರೆ ಈಗ ಆ್ಯಂಕರಿಂಗ್‌, ಈವೆಂಟ್ಸ್ ಹಾಗೂ ಆ್ಯಡ್ ಶೂಟ್ಸ್‌ನಿಂದ ಉತ್ತಮ ಇನ್‌ಕಮ್ ಬರುತ್ತಿದೆ. ನಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದಿದ್ದಾರೆ. <a style="border: 0px; overflow: hidden" href=https://youtube.com/embed/yAdDq6h8qw0?autoplay=1&mute=1><img src=https://img.youtube.com/vi/yAdDq6h8qw0/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಇದಕ್ಕೆ ಜೊತೆಗೆ, ಆಂಕರ್ ವಿದ್ಯಾ ಮಲ್ನಾಡ್ ತಮ್ಮ ಬ್ಲಾಗ್‌ನಲ್ಲಿ ಜಾಹ್ನವಿ ಅವರ ಮನೆಯ ವಿಶೇಷ ಚಿತ್ರಣವನ್ನೂ ಹಂಚಿಕೊಂಡಿದ್ದಾರೆ. ಸುಂದರವಾಗಿ ವಿನ್ಯಾಸಗೊಳಿಸಿರುವ ಆ ಮನೆ ಜಾಹ್ನವಿ ಅವರ ಪರಿಶ್ರಮ ಮತ್ತು ಸಾಧನೆಯ ಪ್ರತಿಬಿಂಬವಾಗಿದೆ. ಮನೆಯಲ್ಲಿ ಸೌಂದರ್ಯ, ಆಕರ್ಷಕ ಅಲಂಕಾರ ಮತ್ತು ಆಧುನಿಕ ಸ್ಪರ್ಶ ಎಲ್ಲರ ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಆಂಕರ್ ಜಾಹ್ನವಿ ನೋವುಗಳೆಲ್ಲಾ ಮರೆತು ಚಂದದ ಬದುಕ ಕಟ್ಟಿಕೊಂಡಿದ್ದಾರೆ.