ಕನ್ನಡದ ಧಾರಾವಾಯಿ ನಟಿ ಜೊತೆ ಬಿಗ್ ಬಾಸ್ ಪ್ರತಾಪ್ ಮದುವೆ ಫಿಕ್ಸ್, ಯಾರು ಗೊ.ತ್ತಾ ಆ ಚೆಲುವೆ
ಬಣ್ಣ ಯಾವುದಿದ್ರೂ ಪರ್ವಾಗಿಲ್ಲ ಸರ್, ಆವಾವಾಗ ಜಡೆ ಹೆಣೆದುಕೊಳ್ತಿರ್ಬೇಕು. ನೋಡಿದ ತಕ್ಷಣ ಒಳ್ಳೆಯ ಹುಡುಗಿ ಅನ್ನಿಸಬೇಕು. ಅಪ್ಪ ನೋಡಿದ ಹುಡ್ಗಿಯನ್ನೇ ಮದ್ವೆಯಾಗೋದು. ಉಳಿದವರೆಲ್ಲರೂ ನನಗೆ ದೀದೀಗಳೇ ಎನ್ನುತ್ತಲೇ ಮದ್ವೆಯಾಗುವ ಹುಡುಗಿಯ ಬಗ್ಗೆ ಮಾತನಾಡಿದ್ದಾರೆ ಬಿಗ್ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್. ಅಪ್ಪ ತುಂಬಾ ಕಷ್ಟಪಟ್ಟಿದ್ದಾರೆ. ಅದಕ್ಕಾಗಿ ಅವರ ಇಚ್ಛೆ ಮೀರಿ ನಾನು ಹೋಗಲ್ಲ.
ಅವರು ಯಾವ ಹುಡುಗಿಯನ್ನು ಮದ್ವೆಯಾಗು ಅಂತಾರೋ ಅವರನ್ನೇ ಮದ್ವೆಯಾಗೋದು ಅನ್ನುತ್ತಲೇ ವೇದಿಕೆಯ ಮೇಲಿದ್ದ ಹುಡುಗಿಯರನ್ನೆಲ್ಲಾ ದೀದೀ ಎಂದೇ ಕರೆದರು ಡ್ರೋನ್ ಪ್ರತಾಪ್. ಪ್ರತಾಪ್ರನ್ನು ಮದ್ವೆಯಾಗುವುದಾಗಿ ತಾವು ರೆಡಿ ಎಂದು ಹಲವಾರು ಯುವತಿಯರು ಕೈಎತ್ತಿದರೂ ಅವರನ್ನೆಲ್ಲಾ ದೀದಿ ಎಂದೇ ಕರೆದರು ಡ್ರೋನ್. ಇದು ನಡೆದದ್ದು ಹೊಸಪೇಟೆಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್ಬಾಸ್ನ ಕೆಲವು ಸ್ಪರ್ಧಿಗಳು ಭಾಗವಹಿಸಿದ್ದರು.
ಅದರಲ್ಲಿ ಒಬ್ಬರು ಡ್ರೋನ್ ಪ್ರತಾಪ್. ಬಿಗ್ಬಾಸ್ನ ವಿನಯ್, ಕಾರ್ತಿಕ್, ಸಂಗೀತಾ ಕೂಡ ಇದೇ ವೇದಿಕೆಯ ಮೇಲೆ ಪರ್ಫಾಮ್ ಮಾಡಿದ್ದಾರೆ. ಈ ಸಮಯದಲ್ಲಿ ಫ್ಯಾನ್ಸ್ ಇವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದು, ನೀವೆಲ್ಲಾ ತುಂಬಾ ಇಷ್ಟ ಎಂದಿದ್ದಾರೆ. ಇದರಲ್ಲಿ ಗಮನ ಸೆಳೆದಿರುವುದು ಹೊಸಪೇಟೆಯ ಯುವತಿಯರು ಡ್ರೋನ್ ಪ್ರತಾಪ್ ಅವರಿಗೆ, ನೀವು ಎಂದರೆ ತುಂಬಾ ಇಷ್ಟ. ನಿಮ್ಮನ್ನು ಮದುವೆಯಾಗಲು ಬಂದಿದ್ದೇವೆ ಎಂದಿದ್ದಾರೆ. ಇದನ್ನು ಕೇಳಿ ಡ್ರೋನ್ ಪ್ರತಾಪ್ ನಾಚಿ ನೀರಾಗಿದ್ದಾರೆ. ಯೇ ಯೇ ಎನ್ನುತ್ತಲೇ ಯುವತಿಯರಿಂದ ದೂರ ಸರಿಸಲು ನೋಡಿದ್ದು, ಸಭಿಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ.
ಈ ಸಮಯದಲ್ಲಿ ಅವರಿಗೆ ಕನಸಿನ ಕನ್ಯೆ ಅರ್ಥಾತ್ ಮದುವೆಯಾಗುವ ಹುಡುಗಿಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಅವರು ಹೀಗೆಲ್ಲಾ ಹೇಳಿದ್ದಾರೆ. ಬಿಗ್ಬಾಸ್ ಮನೆಯೊಳಕ್ಕೆ ಎಲ್ಲರನ್ನೂ ದೀದೀ ದೀದೀ ಎಂದು ಕರೆಯುವ ನಿಮ್ಮ ಬೀವಿ ಹೇಗಿರಬೇಕು ಎಂದು ಪ್ರಶ್ನಿಸಿದಾಗ ಡ್ರೋನ್ ಈ ಉತ್ತರ ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.