BMTC ಬಸ್ ಡ್ರೈವರ್ ನಿರ್ಲಕ್ಷ್ಯದಿಂದ ಮುದ್ದಾದ ‌ಯುವತಿ ಬ.ಲಿ, ಸಿಸಿಟಿವಿ ನೋಡಿ ಬೆ ಚ್ಚಿಬಿದ್ದ ಭಾರತೀಯರು

 

ಬೆಂಗಳೂರಿನ ಪ್ರಮುಖ ಸಾರಿಗೆ ಸಂಸ್ಥೆಯಾಗಿರುವ ಬಿಎಂಟಿಸಿ ದೇಶದಲ್ಲೇ ಖ್ಯಾತಿ ಪಡೆದಿದೆ. ಹಾಗೆಯೇ ತಿಂಗಳಿಗೊಬ್ಬರಂತೆ ಸಾರ್ವಜನಿಕರನ್ನು ಬಲಿ ಪಡೆಯುವ ಮೂಲಕ ಕುಖ್ಯಾತಿಯೂ ಗಳಿಸಿದೆ. ಹೌದು ತಿಂಗಳಿಗೊಮ್ಮೆಯಾದರೂ ಬಿಎಂಟಿಸಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಬಲಿಯಾದ ವರದಿ ಓದಿಯೇ ಇರುತ್ತೀರಿ. ಕಳೆದ ತಿಂಗಳು ಬಿಎಂಟಿಸಿಗೆ ಬಲಿಯಾದ ಘಟನೆ ಮಾಸುವ ಮುನ್ನವೆ ಇದೀಗ ಕಿಲ್ಲರ್ ಬಿಎಂಟಿಸಿಗೆ 22 ವರ್ಷದ ಕಾಲೇಜು ವಿದ್ಯಾರ್ಥಿನಿ ಬಲಿಯಾಗಿದ್ದಾಳೆ.

ಕಿಲ್ಲರ್ ಬಿಎಂಟಿಸಿ ಬಸ್ ಇತ್ತಿಚಿಗೆ ಇನ್ನೊಂದು ಜೀವವನ್ನು ಬಲಿ ಪಡೆದಿದೆ. ಬಿಎಂಟಿಸಿ ಬಸ್ ಸ್ಕೂಟರ್‍ಗೆ ತಾಗಿ ಎಳೆದೊಯ್ದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕುಸುಮಿತಾ ಮೃತಪಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿನಿ. ಈಕೆ ಆರ್‍ಆರ್ ನಗರದ ಜೈನ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದಳು. ಕೇವಲ 22 ವರ್ಷದ ಈ ವಿದ್ಯಾರ್ಥಿನಿ ಇನ್ನಿಲ್ಲವಾಗಿದ್ದಾಳೆ. <a href=https://youtube.com/embed/mN3wFrmcVJI?autoplay=1&mute=1><img src=https://img.youtube.com/vi/mN3wFrmcVJI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಮಲ್ಲೇಶ್ವರಂ ನಿವಾಸಿಯಾದ ಕುಸುಮಿತಾ ಅವರು ಮನೆಯಿಂದ ಕಾಲೇಜಿಗೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಬೆಳಗ್ಗೆ 8.30ರ ಸುಮಾರಿನಲ್ಲಿ ಮಹಾಕವಿ ಕುವೆಂಪು ರಸ್ತೆಯ ದೇವಯ್ಯ ಪಾರ್ಕ್ ಬಳಿ ಬಿಎಂಟಿಸಿ ಬಸ್ ಸ್ಕೂಟರ್‍ಗೆ ತಾಗಿದ ಪರಿಣಾಮ ಕೆಳಗೆ ಬಿದ್ದಿದ್ದಾರೆ.ತಾಗಿದ ರಭಸಕ್ಕೆ ಬಸ್ 10ರಿಂದ 15 ಅಡಿ ಸ್ಕೂಟರ್ ಜೊತೆ ವಿದ್ಯಾರ್ಥಿನಿಯನ್ನು ಎಳೆದೊಯ್ದ ಪರಿಣಾಮ ಮೈಯೆಲ್ಲಾ ತರಚಿ ಗಂಭೀರ ಗಾಯಗೊಂಡಿದ್ದಾರೆ.

ತಕ್ಷಣ ವಿದ್ಯಾರ್ಥಿನಿಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಸುದ್ದಿ ತಿಳಿದ ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.