ಬಿಗ್ಬಾಸ್ ಮೂರನೇ ಸ್ಫಧಿ೯ಯಾಗಿ ಚೈತ್ರಾ ಕುಂದಾಪುರ ಎಂಟ್ರಿ, ಟ್ರೋಫಿ ಪಕ್ಕಾ ಇವರಿಗೆ

 
 ಕರಾವಳಿ ಭಾಗದಲ್ಲಿ ತಮ್ಮ ಆವೇಶಭರಿತ ಭಾಷಣಗಳಿಂದ ಸದ್ದು ಮಾಡಿದವರು ಚೈತ್ರಾ ಕುಂದಾಪುರ. ಕೋಟ್ಯಂತರ ರೂಪಾಯಿ ವಂಚನೆ ಆರೋಪದಲ್ಲಿ ಹಿಂದೆ ಈಕೆ ಜೈಲು ಸೇರಿದ್ದರು. ಬಳಿಕ ಬಿಡುಗಡೆ ಆಗಿದ್ದರು. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 3ನೇ ಅಭ್ಯರ್ಥಿಯಾಗಿ ದೊಡ್ಮನೆಗೆ ಹೋಗುತ್ತಿದ್ದಾರೆ.
ವಕೀಲರಾದ ಜಗದೀಶ್ ಬಳಿಕ ಅವರಂತೆಯೇ ಬಹಳ ಜೋರಾಗಿ ಮಾತನಾಡುವ ಚೈತ್ರಾ ಬಿಗ್‌ಬಾಸ್ ಮನೆಗೆ ಹೋಗುತ್ತಿರುವುದು ಕುತೂಹಲ ಮೂಡಿಸಿದೆ. ಒಂದ್ಕಾಲದಲ್ಲಿ ತಮ್ಮ ಖಡಕ್ ಭಾಷಣದಿಂದ ಮೋಡಿ ಮಾಡಿದ ಚೈತ್ರಾ ಬಳಿಕ ವಿವಾದದಲ್ಲಿ ಸಿಲುಕಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿ ಸೈಲೆಂಟ್ ಆಗಿದ್ದರು. ಇದೀಗ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಮತ್ತೆ ಸುದ್ದಿ ಆಗುತ್ತಿದ್ದಾರೆ. <a href=https://youtube.com/embed/BT7RCmTOZIU?autoplay=1&mute=1><img src=https://img.youtube.com/vi/BT7RCmTOZIU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಚೈತ್ರಾ ಉಡುಪಿ ಜಿಲ್ಲೆಯ ಕುಂದಾಪುರದವರು. ತೆಕ್ಕಟ್ಟೆಯಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. ಕೆಲ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತದೆ. ಇನ್ನು ಕಾಲೇಜು ದಿನಗಳಲ್ಲೇ ಆಕೆ ಎಬಿವಿಪಿ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದರು. ಹಾಲು ಮಾರುವವರ ಮನೆಯಿಂದ ಬಂದವಳು ನಾನು ಎಂದು ಚೈತ್ರಾ ಹಿಂದೆ ಹೇಳಿಕೊಂಡಿದ್ದರು.
ಬಿಗ್ ಬಾಸ್‌’ ಕಡೆಯಿಂದ ನನಗೆ ಫೋನ್ ಬಂದಾಗ ನಾನು ಲೈಟ್ ಆಫ್‌ ಮಾಡುತ್ತಿದ್ದೆ. ಆಗ ಸಣ್ಣ ಬೆಳಕು ದೇವಿ ಮೇಲೆ ಬಿತ್ತು. ಹೀಗಾಗಿ ದೇವಿಯ ಸೂಚನೆ ಮೇರೆಗೆ ನಾನು ಬಿಗ್ ಬಾಸ್’ ಮನೆಗೆ ಬಂದಿದ್ದೇನೆ. ಬಿಗ್ ಬಾಸ್‌’ ಬಗ್ಗೆ ನನಗೆ ಇದ್ದ ಪರಿಕಲ್ಪನೆ ಬದಲಾಗಿದೆ ಎಂದಿದ್ದಾರೆ ಚೈತ್ರಾ ಕುಂದಾಪುರ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.