ಜಪಾನಿನಲ್ಲಿ ಅಲ್ಲೋಲ ಕಲ್ಲೋಲ; ಪೂರ್ತಿ ಮು ಳುಗಿದ ಜಪಾನ್?
Aug 9, 2024, 08:33 IST
ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪನವಾಗಿದೆ. ಇದರ ಬೆನ್ನಲ್ಲೇ, ಸುನಾಮಿ ಅಪ್ಪಳಿಸುವ ಕುರಿತು ಜಪಾನ್ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.ಭೂಕಂಪನ ಸಂಬಂಧಿತ ಅವಘಡಗಳಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7.1 ತೀವ್ರತೆಯ ಭೂಕಂಪನ ದಾಖಲಾಗಿದ್ದು, ದಕ್ಷಿಣಕ್ಕಿರುವ ಕ್ಯೂಶು ದ್ವೀಪದ ಪೂರ್ವ ಕರಾವಳಿಯ ಸಾಗರದ 30 ಕಿ.ಮೀ. ಆಳದಲ್ಲಿ ಕಂಪನ ಕೇಂದ್ರವಿತ್ತು ಎಂದು ಸಂಸ್ಥೆ ತಿಳಿಸಿದೆ. ನಿಚಿಯಾನ್ ನಗರ, ಸುತ್ತಲಿನ ಸ್ಥಳಗಳಾದ ಮಿಯಾಜಕಿ ಪ್ರಾಂತ್ಯದಲ್ಲಿ ಹೆಚ್ಚು ಕಂಪನದ ಅನುಭವವಾಗಿದೆ ಎಂದೂ ಹೇಳಿದೆ.
ಭೂಮಿ ಕಂಪಿಸಿದ ಅರ್ಧ ಗಂಟೆ ಬಳಿಕ, ಕ್ಯೂಶು ಮತ್ತು ಶಿಕೊಕು ದ್ವೀಪದ ಉದ್ದಕ್ಕೂ 1.6 ಅಡಿಗಳಷ್ಟು ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದ್ದುದು ಸಹ ಕಂಡುಬಂದಿದೆ.
ಭೂಕಂಪನ ಕೇಂದ್ರಕ್ಕೆ ಸಮೀಪವಿರುವ ಮಿಯಾಜಕಿ ವಿಮಾನನಿಲ್ದಾಣದ ಕಟ್ಟಡಗಳ ಕಿಟಕಿಗಳು ಒಡೆದಿವೆ ಎಂದು ಎನ್‌ಎಚ್‌ಕೆ ಟಿ.ವಿ ವರದಿ ಮಾಡಿದೆ.
<a href=https://youtube.com/embed/pHL8UBZc1o4?autoplay=1&mute=1><img src=https://img.youtube.com/vi/pHL8UBZc1o4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕ್ಯೂಶು ಮತ್ತು ಶಿಕೊಕು ದ್ವೀಪದಲ್ಲಿ ಕಾರ್ಯಾಚರಿಸುತ್ತಿರುವ ಮೂರು ಅಣುವಿದ್ಯುತ್ ಸ್ಥಾವರಗಳು ಸೇರಿದಂತೆ ಎಲ್ಲ 12 ಸ್ಥಾವರಗಳು ಸುರಕ್ಷಿತವಾಗಿವೆ ಎಂದು ಜಪಾನ್‌ನ ಅಣು ನಿಯಂತ್ರಣ ಪ್ರಾಧಿಕಾರ ತಿಳಿಸಿದೆ. ಜನವರಿ 1ರಂದು ಸಂಭವಿಸಿದ್ದ ಭೂಕಂಪದಲ್ಲಿ 240 ಮಂದಿ ಮೃತಪಟ್ಟಿದ್ದರು.
ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶುವಿನ ಪೂರ್ವ ಕರಾವಳಿಯಲ್ಲಿ ಸುಮಾರು 30 ಕಿಮೀ ಅಂದರೆ 18.6 ಮೈಲಿ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.