ಪಾಕ್ ಬೆಂಬಲಿದ ಫೋಸ್ಟ್ ಹಾಕಿದ ಕರಾವಳಿ ಯುವತಿ, ಇದೆಂತಹ ಹುಚ್ಚುತನ ಎಂದ ನೆಟ್ಟಿಗರು

 
ಉಗ್ರರ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್ ಸಿಂದೂರ್ ಬಗ್ಗೆ ದೇಶ ಹೆಮ್ಮೆ ಪಡುತ್ತಿರುವಾಗ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಬೆಳಾಲಿನ ವಿದ್ಯಾರ್ಥಿನಿಯ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿದ್ಯಾರ್ಥಿನಿ ರೇಷ್ಮಾ ಅವರು ಇನ್ಸ್ಟಾಗ್ರಾಂನಲ್ಲಿ ಹಾಕಿದ ಆಪರೇಷನ್ ಸಿಂದೂರ್ ಕುರಿತ ಪೋಸ್ಟ್ ವೈರಲ್ ಆಗಿದೆ. ಪೋಸ್ಟ್ನಲ್ಲಿ ಬಳಸಿದ ಭಾಷೆ ಮತ್ತು ಹ್ಯಾಶ್ಟ್ಯಾಗ್ಗಳು ವಿವಾದಕ್ಕೆ ಕಾರಣವಾಗಿವೆ.
ರೇಷ್ಮಾ ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. “ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕು” “ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದು ಕತಲು… ಎಲ್ಲೆಲ್ಲೂ ಕತ್ತಲು…!” #dikkaraoperationsindura ಹ್ಯಾಷ್ ಟ್ಯಾಗ್ ನಡಿ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೇಷ್ಮಾ ಪೋಸ್ಟ್ ಡಿಲೀಟ್​ ಮಾಡಿದ್ದಾರೆ. <a href=https://youtube.com/embed/ROoBNvDoj8E?autoplay=1&mute=1><img src=https://img.youtube.com/vi/ROoBNvDoj8E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಪರೇಷನ್ ಸಿಂದೂರ್ಗೆ ಧಿಕ್ಕಾರ ಎಂಬ ಹ್ಯಾಶ್ ಟ್ಯಾಗ್ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೋಸ್ಟ್ಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ರೇಷ್ಮಾ ತಮ್ಮ ಪೋಸ್ಟ್ ಡಿಲೀಟ್ ಮಾಡಿರುವುದಾಗಿ ತಿಳಿದುಬಂದಿದೆ. ಮಂಗಳೂರು ವಿವಿಯ ಕನ್ನಡ ವಿಭಾಗದ ವಿದ್ಯಾರ್ಥಿನಿ ರೇಷ್ಮಾಳನ್ನು ಅಮಾನುತುಗೊಳಿಸುವಂತೆ ಮಂಗಳೂರು ವಿವಿಯನ್ನು ಎಬಿವಿಪಿ ಒತ್ತಾಯ ಮಾಡಿದ್ದು ಮನವಿ ಸಲ್ಲಿಸಿದೆ. 
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬ ವಿದ್ಯಾರ್ಥಿನಿ ತನ್ನ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಹ್ಯಾಷ್​ ಟ್ಯಾಗ್​ ದಿಕ್ಕಾರ ಆಪರೇಷನ್​ ಸಿಂದೂರ್ ಎಂದು ಗುರುವಾರ ದಂದು ಪೋಸ್ಟ್ ಹಾಕಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೇಷ್ಮಾ ಪೋಸ್ಟ್ ಡಿಲೀಟ್​ ಮಾಡಿದ್ದಾರೆ. 
ಇಂತಹ ದೇಶದ್ರೋಹದ ಮನಸ್ಥಿತಿಯನ್ನು ಪ್ರಾರಂಭಿಕ ಹಂತದಲ್ಲೇ ಹೊಸಕಿ ಹಾಕುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಆದರೆ ಇದುವರೆಗೆ ಪೋಲಿಸ್ ಠಾಣೆಯಲ್ಲಿ ಇದುವರೆಗೆ ಪ್ರಕರಣ ದಾಖಲಾಗಿರುವುದಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.