ಕಾಂ.ಗ್ರೆಸ್ ಸಂಸದನ ಮನೆಯಲ್ಲಿ ರಾಶಿ ರಾ.ಶಿ ಹಣ, ಹಣ ಎನಿಸಿದ ಮಿಷನ್ ಕೂಡ ಸುಸ್ತು

 

ಒಡಿಶಾದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ದಾಳಿಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗುತ್ತಿದೆ. ಬೋಲಂಗಿರ್ ಜಿಲ್ಲೆಯ ಸುದಾಪಾರಾ ಪ್ರದೇಶದಲ್ಲಿ ಡಿಸ್ಟಿಲರಿ ಸಮೂಹ ಕಚೇರಿ, ಮನೆಯಿಂದ ಐಟಿ ಅಧಿಕಾರಿಗಳು ಶನಿವಾರವೂ 20 ಬ್ಯಾಗ್ ನಗದನ್ನು ವಶಪಡಿಸಿಕೊಂಡಿದ್ದಾರೆ. ವಸೂಲಿಯಾಗಿರುವ ಹಣದ ಲೆಕ್ಕಾಚಾರ ನಡೆಯುತ್ತಿದ್ದು, ಇದರ ಮೊತ್ತವೂ 50 ಕೋಟಿಗೂ ಹೆಚ್ಚಿರಬಹುದು ಎನ್ನಲಾಗುತ್ತಿದೆ. 

ಡಿಸೆಂಬರ್​ 6ರಿಂದ ಶುರುವಾದ ಈ ದಾಳಿಯಲ್ಲಿ ಸುಮಾರು 300 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಏಣಿಕೆ ಕಾರ್ಯ ಮುಂದುವರಿದಿದೆ. ಇದು ಒಂದು ಐಟಿ ದಾಳಿಯಲ್ಲಿ ಸಿಕ್ಕ ಅತ್ಯಂತ ಹೆಚ್ಚು ಕಪ್ಪು ಹಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಂಪನಿ ಕಾಂಗ್ರೆಸ್​ ರಾಜ್ಯಸಭಾ ಸಂಸದ ಧೀರಜ್​ ಸಾಹು, ಕುಟುಂಬ ಸದಸ್ಯರಾದ ಬಲದೇವ್ ಸಾಹು ಧೀರಜ್ ಸಾಹು, ಸ್ವರಾಜ್ ಸಾಹು, ರಾಜ್‌ಕಿಶೋರ್ ಸಾಹು ಮತ್ತು ಇತರ ಕುಟುಂಬ ಸದಸ್ಯರನ್ನು ಒಳಗೊಂಡಿದೆ. <a href=https://youtube.com/embed/PiWPURVOcOc?autoplay=1&mute=1><img src=https://img.youtube.com/vi/PiWPURVOcOc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇಲ್ಲಿಯವರೆಗೆ, ಭುವನೇಶ್ವರ, ಬೋಲಂಗೀರ್, ಒಡಿಶಾದ ಸಂಬಲ್ಪುರ, ಜಾರ್ಖಂಡ್‌ನ ರಾಂಚಿ ಮತ್ತು ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಶೋಧ ನಡೆಸಲಾಗಿದೆ. ಇದುವರೆಗೆ ಐಟಿ ಅಧಿಕಾರಿಗಳು300 ಕೋಟಿ ರೂಪಾಯಿ ಅಕ್ರಮ ಹಣ ವಶಪಡಿಸಿಕೊಂಡಿದ್ದು, ಗುಪ್ತಚರ ಮಾಹಿತಿಯೊಂದಿಗೆ ಮತ್ತೆ ಶೋಧ ಮುಂದುವರಿಸಲಾಗಿದೆ.

150 ಆದಾಯ ತೆರಿಗೆ ಅಧಿಕಾರಿಗಳು ಸುಮಾರು 40 ಸಣ್ಣ ಮತ್ತು ದೊಡ್ಡ ಮಷಿನ್​ಗಳಿಂದ ಸಿಕ್ಕಿರುವ 500 ರೂಪಾಯಿ ನೋಟಿಗಳನ್ನು ಎಣಿಕೆ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಎಣಿಸಲಾಗದೇ ಅಧಿಕಾರಿಗಳು ಸುಸ್ತುಬಿದ್ದಿದ್ದಾರೆ. ಹೆಚ್ಚುವರಿಯಾಗಿ ಹೈದರಾಬಾದ್​ನಿಂದ 20 ಅಧಿಕಾರಿಗಳ ತಂಡವನ್ನು ಕರೆಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.