ಯಾವುದೇ ಕಾರಣಕ್ಕೂ ಮಕ್ಕಳು ಮಾಡಲ್ಲ ಅಂತ ಹಠ ಹಿಡಿದು ಕೂತ ಕನ್ನಡದ ಮುದ್ದಾದ ಜೋಡಿಗಳು
ಸಿಹಿ ಕಹಿ ಚಂದ್ರು ಪುತ್ರಿ ಹಾಗೂ ಪ್ರತಿಭಾವಂತ ನಟಿ ಹಿತಾ ಚಂದ್ರಶೇಖರ್ ತಮ್ಮ ವಿಭಿನ್ನ ಆಲೋಚನೆ ಹಾಗೂ ನೇರ ಮಾತಿನ ಮೂಲಕ ಸದಾ ಚರ್ಚೆಯ ಕೇಂದ್ರವಾಗುತ್ತಾರೆ. ಇತ್ತೀಚೆಗೆ ನಟಿ ಹಿತಾ ಚಂದ್ರಶೇಖರ್ ಅವರು ತಮ್ಮ ಪತಿ ಕಿರಣ್ ಶ್ರೀನಿವಾಸ್ ಜೊತೆಗೆ ಮದುವೆ, ತಾಯ್ತನ ಮತ್ತು ಪೇರೆಂಟಿಂಗ್ ಬಗ್ಗೆ ಹಂಚಿಕೊಂಡ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಯುವ ರಾಜ್‌ಕುಮಾರ್ ಅಭಿನಯದ ‘ಯುವ’ ಚಿತ್ರದಲ್ಲಿ ಯುವನ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹಿತಾ, ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಆದರೆ, ಚಿತ್ರಕ್ಕಿಂತ ಹೆಚ್ಚು ಈಗ ಹಿತಾ ಅವರ ವೈಯಕ್ತಿಕ ಅಭಿಪ್ರಾಯವೇ ಚರ್ಚೆಗೆ ಕಾರಣವಾಗಿದೆ.ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಹಿತಾ ಹೇಳಿದ್ದಾರೆ ನನಗೆ ಮಕ್ಕಳ ಬೇಡ ಎನಿಸುತ್ತದೆ. ಮದುವೆಗೂ ಮುನ್ನವೇ ನಾನು ಮತ್ತು ಕಿರಣ್ ಈ ವಿಚಾರದ ಬಗ್ಗೆ ಮಾತನಾಡಿದ್ದೆವು. ನನಗೆ ತಾಯಿಯಾಗಬೇಕು ಎನ್ನುವ ಆಸೆ ಇಲ್ಲ. ಈ ಜಗತ್ತಿನಲ್ಲಿ ನಡೆಯುತ್ತಿರುವ ಅಸಮಾನತೆ, ಪರಿಸರದ ಸಮಸ್ಯೆ, ಜನರ ಒತ್ತಡ ಇವೆಲ್ಲಾ ನೋಡಿದಾಗ ಹೊಸ ಮಗು ತರುವ ಅಗತ್ಯ ಎನಿಸಲಿಲ್ಲ.
ಅವರು ಮುಂದುವರಿಸುತ್ತಾ ಪೇರೆಂಟಿಂಗ್ ಅಂದ್ರೆ ಕೇವಲ ತಮ್ಮದೇ ಮಗು ಸಾಕುವುದು ಅಷ್ಟೇ ಅಲ್ಲ. ನಾವು ನಾಯಿ ಮರಿ ಅಥವಾ ಅನಾಥ ಮಗು ನೋಡಿಕೊಳ್ಳಬಹುದು. ಅದೇ ಪೋಷಕತ್ವದ ಸಂತೋಷ.ಹಿತಾ ಅವರ ಈ ಮಾತುಗಳು ಸಮಾಜದ ಸಂಪ್ರದಾಯಬದ್ಧ ಕಲ್ಪನೆಗೆ ವಿರುದ್ಧವಾದರೂ, ಅವರು ತಮ್ಮ ಆಯ್ಕೆಯನ್ನು ನಿಭಾಯಿಸುವ ರೀತಿಯಲ್ಲಿ ತುಂಬಾ ಧೈರ್ಯಶಾಲಿಯಾಗಿ ಕಾಣುತ್ತಾರೆ. ಮಕ್ಕಳು ಇದ್ದರೆ ವೃದ್ಧಾಪ್ಯದಲ್ಲಿ ನೋಡಿಕೊಳ್ಳುತ್ತಾರೆ ಎಂಬುದು ಖಚಿತವಲ್ಲ. ಎಷ್ಟೋ ಪೋಷಕರು ಮಕ್ಕಳಿದ್ದರೂ ಒಂಟಿಯಾಗಿದ್ದಾರೆ, ಎಂಬ ಹಿತಾ ಅವರ ಹೇಳಿಕೆ ಬಹುತೇಕ ಜನರಿಗೆ ಆಲೋಚನೆ ಹುಟ್ಟಿಸುವಂತಿದೆ.
ಆಶ್ಚರ್ಯಕರ ಅಂಶವೇನೆಂದರೆ, ಹಿತಾ ಅವರ ತಾಯಿ–ತಂದೆ ಈ ವಿಚಾರದಲ್ಲಿ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಸಾಮಾನ್ಯವಾಗಿ ಪೋಷಕರು ಒತ್ತಡ ತರುತ್ತಾರೆ, ಆದರೆ ನನ್ನ ಅಮ್ಮ–ಅಪ್ಪ ನನ್ನ ನಿರ್ಧಾರವನ್ನು ಗೌರವಿಸಿದ್ದಾರೆ. ನನ್ನ ಮಾವನೂ (ಕಿರಣ್ ತಂದೆ) ಯಾವುದೇ ಪ್ರಶ್ನೆ ಕೇಳಲಿಲ್ಲ, ಎಂದು ಅವರು ಹೇಳಿದ್ದಾರೆ.ಹಿತಾ ಅವರ ಈ ನೇರವಾದ ನಿಲುವು ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲ ಮತ್ತು ವಿರೋಧದ ಪ್ರತಿಕ್ರಿಯೆಗಳನ್ನು ತರ್ತಿದೆ. ಕೆಲವರು ಅವರ ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವನ್ನು ಮೆಚ್ಚುತ್ತಿದ್ದಾರೆ, ಮತ್ತೊಬ್ಬರು ಈ ನಿಲುವಿಗೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.