ಇನ್ನುಮುಂದೆ ನನ್ನ ಕುಟುಂಬ‌ ಬಿಟ್ಟು ಎಲ್ಲೂ ಹೋಗಲ್ಲ, ಪತ್ನಿಗೆ ದರ್ಶನ್ ಭರವಸೆ

 
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮನೆ ಮಗನಂತೆ ಇದ್ದವರು ದರ್ಶನ್. ಆದರೆ ಈಗ ಅಮ್ಮ ಮತ್ತು ಮಗನ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಹಿರಿಯ ಮಗನ ಅನುಪಸ್ಥಿತಿಯಲ್ಲಿಯೇ ಸುಮಲತಾ ಅಂಬರೀಶ್ ಮನೆಯಲ್ಲಿ ಕಾರ್ಯಕ್ರಮ ನಡೆದಿದೆ. ಮರಿ ಅಂಬರೀಶ್ ಅಭಿಷೇಕ್ ಅವರ ಮುದ್ದಾದ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ.
ಇನ್ನು ದರ್ಶನ್ ಈ ಹಿಂದೆ ತಮ್ಮ ಮದರ್ ಇಂಡಿಯಾಗೋಸ್ಕರ ಹಾಳು ಬಾವಿಗೆ ಬೀಳಲು ಕೂಡ ರೆಡಿ ಇದ್ದರು, ದರ್ಶನ್ ಇಲ್ಲದೆ ನಮ್ಮ ಮನೆಯ ಕಾರ್ಯಕ್ರಮ ನಡೆಯಲ್ಲ ಎಂದು ಸುಮಲತಾ ಹೇಳಿದ್ದರು. ಆದರೂ ಕೂಡ ಕಾರ್ಯಕ್ರಮ ನಡೆದಿದೆ. ಹೀಗಾಗಿಯೇ ಹರಿದಾಡುತ್ತಿರುವ ಸುದ್ದಿಗಳಿಗೆ ಈಗ ರೆಕ್ಕೆ ಪುಕ್ಕಗಳು ಅಂಟಿಕೊಂಡಿವೆ. ಆದರೆ, ಕೆಲವರು ಈ ಮಾತುಗಳನ್ನು ಒಪ್ಪಲು ತಯಾರಿಲ್ಲ. ಸುಮಲತಾ ಮತ್ತು ದರ್ಶನ್ ನಡುವೆ ಸಂಬಂಧ ಹಳಿಸಿದೆ ಎಂದು ನಂಬಲು ರೆಡಿ ಇಲ್ಲ.
ಬದಲಿಗೆ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಬ್ಯುಸಿ ಇದ್ದಾರೆ ಈ ಹಿನ್ನೆಲೆ ನಾಮಕರಣ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನುವ ವಾದ ಮಾಡುತ್ತಿದ್ದಾರೆ. ಆದರೆ, ಮತ್ತೊಂದೆಡೆ ದರ್ಶನ್ ಬರದೇ ಇದ್ದರೇನಂತೆ ಕೊನೆ ಪಕ್ಷ ದರ್ಶನ್ ಅವರ ಮಡದಿ ವಿಜಯಲಕ್ಷ್ಮಿ ಆದರೂ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಿತ್ತಲ್ವಾ ಎಂಬ ಪ್ರತಿವಾದವನ್ನು ಮತ್ತೊಂದು ವರ್ಗ ಮಾಡುತ್ತಿದೆ. ಈ ಪ್ರತಿವಾದಕ್ಕೆ ಈಗ ಬಲ ಸಿಕ್ಕಂತಾಗಿದೆ. <a href=https://youtube.com/embed/9h8-IXl-3FQ?autoplay=1&mute=1><img src=https://img.youtube.com/vi/9h8-IXl-3FQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆ ಕಡೆ ನಾಮಕರಣ ನಡೆಯುತ್ತಿದ್ದ ಸಮಯದಲ್ಲಿ ಈ ಕಡೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಐಷಾರಾಮಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಫೋಟೋಗಳು ಈಗ ವೈರಲ್ ಆಗಿವೆ. ದರ್ಶನ್ ಮತ್ತು ಸುಮಲತಾ ನಡುವಿನ ಸಂಬಂಧ ಮುರಿದು ಬಿದ್ದಿದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂಬ ಮಾತು ಕೇಳಿ ಬರುತ್ತಿವೆ. ಅಂದ್ಹಾಗೇ ವಿಜಯಲಕ್ಷ್ಮಿ ದರ್ಶನ್ ಹೋದ ಈ ರೆಸ್ಟೋರೆಂಟ್‌ನ ಹೆಸರು ಬಾಸ್ಟಿಯನ್ ಗಾರ್ಡನ್ ಸಿಟಿ. 
ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಈ ರೆಸ್ಟೋರೆಂಟ್‌ ಬೆಂಗಳೂರಿನ ದುಬಾರಿ ರೆಸ್ಟೋರೆಂಟ್‌ ಗಳಲ್ಲಿ ಒಂದು. ಇನ್ನು ನಟ ದರ್ಶನ್ ಕೂಡ ಇನ್ನು ಹೆಂಡತಿ ಮಕ್ಕಳ ಜೊತೆ ಅನ್ಯೋನ್ಯವಾಗಿ ಜೀವನ ಮಾಡ್ತೇನೆ ಎನ್ನುವ ರೀತಿಯಲ್ಲಿ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.