ದರ್ಶನ್ ಯಾವಾತ್ತಿದ್ದರೂ ನನ್ನ ಸ್ನೇಹಿತ, ಬಿಡುಗಡೆ ಆಗಿದ್ದು ಖುಷಿ ತಂದಿದೆ ಎಂದ ಕಿಚ್ಚ ಸುದೀಪ್
Updated: Dec 21, 2024, 18:46 IST
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ದರ್ಶನ್ ಅವರು ಇತ್ತಿಚೆಗೆ ಬಿಡುಗಡೆಯಾಗಿ ಹೊರಬಂದಿದ್ದರು. ತದನಂತರ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಕೂಡ ಮಂಜೂರು ಮಾಡಿದೆ. ಆದರೆ ಇದೀಗ ಬೆನ್ನುನೋವು ವಿಚಾರಕ್ಕೆ ತನ್ನ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ.
ಇನ್ನು ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಬಹು ವರ್ಷಗಳ ಸ್ನೇಹಿತರು. ಆದರೆ ಕೆಲವೊಂದು ವಿಚಾರಕ್ಕಾಗಿ ಈ ಇಬ್ಬರ ನಡುವೆ ಬೆಂಕಿ ಹಂಚಿ ತಮಾಷೆ ನೋಡಿದವರೆ ಹೆಚ್ಚು. ಇದರ ಜೊತೆಗೆ ದರ್ಶನ್ ಅವರ ಸ್ನೇಹಿತರ ಸಹವಾಸದಿಂದ ಈ ಇಬ್ಬರು ದೂರವಾಗುವ ಸಂಧರ್ಭ ಎದುರಾಗಿತ್ತು.
<a href=https://youtube.com/embed/l9IKWZ-TYlM?autoplay=1&mute=1><img src=https://img.youtube.com/vi/l9IKWZ-TYlM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ದರ್ಶನ್ ಅವರು ಕಿಚ್ಚನ ಸ್ನೇಹಿ ಬಿಟ್ಟ ಬಳಿಕ ಮತ್ತೆ ಕಿಚ್ಚನ ಬಗ್ಗೆ ಎಲ್ಲೂ ಮಾತನಾಡಿಲ್ಲ. ಆದರೆ ಸುದೀಪ್ ಅವರು ದರ್ಶನ್ ಅವರ ಬಗ್ಗೆ ಸಾಕಷ್ಟು ಕಡೆ ಮೆಚ್ಚುಗೆಯ ಮಾತು ಹೊರಹಾಕಿದ್ದಾರೆ. ಇಷ್ಟು ಮಾತ್ರವಲ್ಲದೇ ಆತ ಯಾವಾತ್ತಿದ್ದರೂ ನನ್ನ ಸ್ನೇಹಿತನೇ ಎಂದು ಎದೆ ತಟ್ಟಿ ಹೇಳಿದ್ದಾರೆ.
ಇನ್ನು ಜೈಲಿನಿಂದ ಬಿಡುಗಡೆಯಾದ ದರ್ಶನ್ ಬಗ್ಗೆ ಮಾಧ್ಯಮಗಳು ಸುದೀಪ್ ಬಗ್ಗೆ ಕೆಲ ಪ್ರಶ್ನೆಗಳು ಕೇಳಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಸುದೀಪ್ ಅವರು ಒಂದೇ ಉತ್ತರದ ಮೂಲಕ ' ದರ್ಶನ್ ಅವರು ಹೊರ ಬಂದಿದ್ದು ಖುಷಿ ಇದೆ. ಆದರೆ ದರ್ಶನ್ ಅವರ ವಯಕ್ತಿಕ ವಿಚಾರವನ್ನು ಚಿತ್ರರಂಗಕ್ಕೆ ತರಬೇಡಿ ಎಂದಿದ್ದಾರೆ.