ಮದುವೆಗೆ ಬರೋಕ್ಕೆ ಆಗಲ್ಲ ಎಂದ ದ ರ್ಶನ್; ' ಬಾಸ್ ಬರಲೇಬೇಕು ಎಂದು ಪಟ್ಟು ಹಿಡಿದ ತರುಣ್
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಟ ತರುಣ್ ಸುಧೀರ್ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಈ ಸುದ್ದಿ ಖಚಿತವಾಗಿದ್ದು, ತರುಣ್ ಸುಧೀರ್ ನಟಿ ಸೋನಲ್ ಮೊಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ವಿವಾಹದ ಬಗ್ಗೆ ಈ ಹಿಂದೆಯೇ ತರುಣ್ ಸುಧೀರ್ ಅವರ ತಾಯಿ ಮಾಲತಿ ಖಚಿತ ಪಡಿಸಿದ್ದರು.
ತರುಣ್ ಸುಧೀರ್ ಹಾಗೂ ಸೊಲಾನ್ ಅವರ ಮದುವೆ ಆಗುತ್ತದೆ. ಆದರೆ ದಿನಾಂಕ ಎಲ್ಲಾ ನಿಗದಿಯಾಗಿಲ್ಲ. ಸೊನಲ್ ಅವರ ಸಂಬಂಧಿಕರೆಲ್ಲಾ ದುಬೈನಿಂದ ಬರಬೇಕು. ಅವರೆಲ್ಲಾ ಮಾತನಾಡಬೇಕು. ಅದೆಲ್ಲಾ ಆದ ಮೇಲೆ ಅಂತಿಮ ನಿರ್ಧಾರವಾಗುತ್ತದೆ. ನಮ್ಮ ಮನೆಗೆ ಸೊಸೆಯಾಗಿ ಯಾರು ಬಂದರೂ ನನಗೆ ಖುಷಿ. ನನ್ನ ಮಗನಿಗೆ ಹೆಂಡತಿಯಾಗಿ ಯಾರು ಬಂದರೂ ನನಗೆ ಸಂತೋಷ ಎಂದಿದ್ದರು.
ಇನ್ನು ತರುಣ್ ಮತ್ತು ಸೋನಲ್ ಅವರ ಮದುವೆಗೆ ಮುನ್ನುಡಿ ಬರೆದಿದ್ದೇ ನಟ ದರ್ಶನ್ ಅಂತೆ. ಹೀಗಾಗಿ ಸದ್ಯ ದರ್ಶನ್ ಜೈಲಿನಲ್ಲಿರುವ ಕಾರಣ ತರುಣ್ ಮದುವೆ ದಿನಾಂಕ ಮುಂದಕ್ಕೆ ಹಾಕಲು ಮುಂದಾಗಿದ್ದರಂತೆ. ಆದರೆ ತನ್ನ ಕಾರಣಕ್ಕೆ ತರುಣ್ ಮದುವೆ ದಿನಾಂಕ ಮುಂದೂಡಬಾರದು ಎಂದು ಪತ್ನಿ ವಿಜಯಲಕ್ಷ್ಮಿ ಕಡೆಯಿಂದ ದರ್ಶನ್ ಹೇಳಿ ಕಳುಹಿಸಿದ್ದರು. ತರುಣ್ ಸುಧೀರ್ ಜೈಲಿಗೆ ಭೇಟಿ ಕೊಟ್ಟ ವೇಳೆ ಕೂಡ ದರ್ಶನ್ ಇದನ್ನೇ ಹೇಳಿ ಕಳುಹಿಸಿದ್ದಂತೆ. ಹೀಗಾಗಿ ಕುಟುಂಬಸ್ಥರು ಹಾಗೂ ದರ್ಶನ್ ಒತ್ತಾಯ ಮೇರೆಗೆ ಆಗಸ್ಟ್ 10,11ರಂದೇ ತರುಣ್-ಸೋನಲ್ ಮದುವೆ ನಡೆಯಲಿದೆ.
ತರುಣ್ ನಿರ್ದೇಶನದ 'ರಾಬರ್ಟ್' ಚಿತ್ರದಲ್ಲಿ ಸೋನಲ್ ನಟಿಸಿದ್ದರು. 'ರಾಬರ್ಟ್' ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೋಡಿ ತನು ಆಗಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಆಪ್ತರು ಹೇಳುತ್ತಿದ್ದಾರೆ. ನಟ ದರ್ಶನ್ ತರುಣ್ ಸುಧೀರ್‌ಗೆ ಮದುವೆ ಮಾಡಿಸಬೇಕು ಎಂದು ಹೇಳುತ್ತಿದ್ದರು. ಹಾಗಾಗಿ ಶೂಟಿಂಗ್ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನಲಾಗಿದೆ. ಇದೀಗ ಸಪ್ತಪದಿ ತುಳಿಯಲಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.