ಒಂದು ಕಾಲದಲ್ಲಿ ಬೆಂಗಳೂರಿನ ಬೀದಿಯಲ್ಲಿ ಹಾಲು ಮಾರುತ್ತಿದ್ದ ದರ್ಶನ್;

 

ನಟ ದರ್ಶನ್  ಅವರಿಗೆ ಪ್ರಾಣಿಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಅವರು ಪ್ರಾಣಿಗಳ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಾರೆ. ಮೈಸೂರಿನಲ್ಲಿ ಇರುವ ಫಾರ್ಮ್​​ಹೌಸ್ ನಲ್ಲಿ  ದರ್ಶನ್  ಹಸುಗಳನ್ನು ಸಾಕಿದ್ದಾರೆ. ಅವುಗಳ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಾರೆ. ದರ್ಶನ್ ಅವರಿಗೆ ಪ್ರಾಣಿಗಳ ಬಗ್ಗೆ ಪ್ರಿತಿ ಇರೋದು ನಿನ್ನೆ ಮೊನ್ನೆಯಿಂದ ಅಲ್ಲ. ಚಿತ್ರರಂಗಕ್ಕೆ ಕಾಲಿಡುವುದಕ್ಕಿಂತ ಮೊದಲೇ ಅವರು ಹಸುಗಳನ್ನು ಸಾಕಿದ್ದರು.

ಹತ್ತನೇ ತರಗತಿ ಮುಗಿದ ಬಳಿಕ ದರ್ಶನ್ ಅವರು ಡಿಪ್ಲೋಮಾ ಸೇರಿದರು. ಅವರು ಇದನ್ನು ಓದೋಕೆ ಹೋಗಿದ್ದು ಮನೆಯವರ ಒತ್ತಾಸೆಯಿಂದ. ಅಲ್ಲಿ ಆರು ಸಬ್ಜೆಕ್ಟ್ ಇತ್ತು. ಎರಡು ತಿಂಗಳು ಕಾಲೇಜಿಗೆ ಹೋದರು. ಆ ಬಳಿಕ ದರ್ಶನ್​​ಗೆ ಓದೋಕೆ ಆಗಲೇ ಇಲ್ಲ. ಹೀಗಾಗಿ, ನಟನೆಯನ್ನು ಅವರು ಆಯ್ಕೆ ಮಾಡಿಕೊಂಡರು. ತಂದೆಗೆ ಇದು ಇಷ್ಟ ಇರಲಿಲ್ಲ. ಆದರೆ, ತಾಯಿ ದರ್ಶನ್​ನ ಬೆಂಬಲಿಸಿದರು.  <a href=https://youtube.com/embed/YVUsNoekeUg?autoplay=1&mute=1><img src=https://img.youtube.com/vi/YVUsNoekeUg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ನಂತರ ನೀನಾಸಂಗೆ ಸೇರಿದರು. ಅಲ್ಲಿ ನಟನೆ ಕಲಿತರು. ಎಲ್ಲೇ ಹೋದರೂ ಬದುಕುತ್ತೇನೆ ಎನ್ನುವ ಕಾನ್ಫಿಡೆನ್ಸ್ ಕಲಿಸಿದ್ದು ನೀನಾಸಂ ಎಂದು ದರ್ಶನ್ ಹೇಳಿಕೊಂಡಿದ್ದರು. ಬೆಳಿಗ್ಗೆ ಥಿಯರಿ ಕ್ಲಾಸ್ ಇರುತ್ತಿತ್ತು. ಮಧ್ಯಾಹ್ನ ಪ್ರ್ಯಾಕ್ಟಿಕಲ್ ಇರುತ್ತಿತ್ತು. ನೀನಾಸಂ ಮುಗಿದ ಬಳಿಕ ಚಾನ್ಸ್​​ಗಾಗಿ ಪ್ರಯತ್ನಿಸಿದೆ. ಆದರೆ ಎಲ್ಲಿಯೂ ವರ್ಕೌಟ್ ಆಗಲಿಲ್ಲ. ಮನೆಯಲ್ಲೇ ಇದ್ದೆ. ಆಗ ರ‍್ಯಾಂಪ್​ ಶೋ ಟ್ರೆಂಡ್ ಶುರುವಾಯಿತು. 

ಮೈಸೂರಿಗೆ ಹೋಗಿ ಅಲ್ಲಿ ರ‍್ಯಾಂಪ್ ವಾಕ್ ಮಾಡಿದೆ. ಅದರಿಂದ ಬಂದ ಹಣದಲ್ಲಿ ಹಸು ಸಾಕೋಣ ಎಂದು ಹಸು ತೆಗೆದುಕೊಂಡೆವು. ಒಂದು ಹಸು ಸಾಕಿದೆ. ನಂತರ ಅದು ಮೂರಾಯ್ತು. ಒಟ್ಟೂ ಎಂಟು ಹಸು ಸಾಕಿದ್ದೆ ಎಂದಿದ್ದರು ದರ್ಶನ್. ವಿಶೇಷ ಎಂದರೆ ಅವರೇ ಹಾಲು ಕರೆಯುತ್ತಿದ್ದರು.

ಸೈಕಲ್​ಗೆ ಕ್ಯಾನ್ ಹಾಕಿ ಹಾಲು ಕೊಡಲು ಮನೆ ಮನೆಗೆ ಹೋಗುತ್ತಿದ್ದೆ. ಎರಡು ವರ್ಷ ಅದರಿಂದಲೇ ಜೀವನ ಸಾಗಿತ್ತು. ಬೆಳಿಗ್ಗೆ ಜಿಮ್ ಹೋಗುತ್ತಿದ್ದೆ. ಆ ಬಳಿಕ ಹಾಲು ಕರೆದು ಮನೆಗೆ ಹಾಕಿ ಬರುತ್ತಿದ್ದೆ. ನಂತರ ಹಾಯಾಗಿ ಟಿವಿ ನೋಡುತ್ತಿದ್ದೆ. ಮಧ್ಯಾಹ್ನ ಮತ್ತೆ ಹಸುವಿನ ಕೆಲಸ ಶುರುವಾಗುತ್ತಿತ್ತು. ಎಲ್ಲಾ ಮುಗಿಸಿ ಮನೋಜ್ ಎಂಬ ಫ್ರೆಂಡ್ ಮನೆಗೆ ಹೋಗುತ್ತಿದ್ದೆ ಎಂದಿದ್ದರು ದರ್ಶನ್.

ಮೈಸೂರು ಜೀವನಕ್ಕೆ ಎಷ್ಟು ಬೇಕೋ ಅಷ್ಟು ಹಣ ಬರುತ್ತಿತ್ತು. ಮನೆಗೆ ಚಿನ್ನಪ್ಪಣ್ಣ ಬಂದಿದ್ದರು. ಅವರು ನಟನೆ ಶುರು ಮಾಡಿಸುವಂತೆ ಅಮ್ಮನಿಗೆ ಕಿವಿಮಾತು ಹೇಳಿದರು. ನಾನು ಬೆಂಗಳೂರಿಗೆ ಹೋಗಿ ಬರೋವರೆಗೆ ಹಸುಗಳನ್ನು ಮಾರಾಟ ಮಾಡಲಾಗಿತ್ತು. ಅಮ್ಮ ನಟನೆ ನೋಡು ಎಂದು ಹೇಳಿದರು. ಹಾಲು ಹಾಕಿದ್ದರಿಂದ ನಾಲ್ಕು ವರ್ಷ ಜೀವನ ನಡೆದಿದೆ. ಹೀಗಾಗಿ ಈಗಲೂ ಹಸು ಸಾಕಿದ್ದೇನೆ ಎಂದು ಹೇಳಿದ್ದರು ದರ್ಶನ್. ( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.