ದುಬೈನ ಕೋಟಿ ವೆಚ್ಚದ ಬಂಗಲೆಯಲ್ಲಿ ದರ್ಶನ್ ಪತ್ನಿ; 'ಈ ಜೀವನ ಅದ್ಭುತ ಎಂದ ವಿಜಯಲಕ್ಷ್ಮಿ
ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇತ್ತ ನಟ ದರ್ಶನ್ ಪತ್ನಿ ವಿದೇಶ ಪ್ರವಾಸದಲ್ಲಿದ್ದಾರೆ. ಹೌದು.. ಫಾರಿನ್‌ಗೆ ತೆರಳಿರುವ ವಿಜಯಲಕ್ಷ್ಮೀ ದರ್ಶನ್ ಅಲ್ಲಿ ಕ್ಲಿಕ್ಕಿಸಿಕೊಂಡ ತಮ್ಮ ಸುಂದರ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ವಿರಾಮ ತೆಗೆದುಕೊಂಡು ಸುತ್ತಲೂ ನೋಡಿ. ಜೀವನ ಬಹಳ ಅದ್ಭುತವಾಗಿದೆ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ವಿಜಯಲಕ್ಷ್ಮೀ ದರ್ಶನ್ ತಮ್ಮ ಫಾರಿನ್ ಟ್ರಿಪ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅಲ್ಲಿನ ದೃಶ್ಯಗಳ ಫೋಟೋ ಶೇರ್ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬರ್ತ್ ಡೇಯೊಂದರಲ್ಲಿ ದರ್ಶನ್ ಹಾಗ ಪತ್ನಿ ವಿಜಯಲಕ್ಷ್ಮಿ ಡ್ಯಾನ್ಸ್ ಮಾಡಿದ್ರು. ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಪಾರ್ಟಿಯ ಬಿಂದಾಸ್ ಲುಕ್ ಅನ್ನು ವಿಜಯಲಕ್ಷ್ಮಿ ಶೇರ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ವಿಜಯಲಕ್ಷ್ಮಿ ಪತ್ನಿ ಆಗಾಗ ಫೋಟೋಗಳನ್ನು ಕೂಡ ಶೇರ್ ಮಾಡುತ್ತಿರುತ್ತಾರೆ. ಇದೀಗ ಲೇಟೆಸ್ಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮೀ ದರ್ಶನ್ ಅವರು ಕಾಫಿ ಪ್ರಿಯೆ. ಎಲ್ಲೇ ಹೋದರೂ, ಕಾಫಿ ಸವಿಯದೆ ಬರಲ್ಲ. ಇದೀಗ ವಿದೇಶ ಪ್ರವಾಸದಲ್ಲಿರುವ ವಿಜಯಲಕ್ಷ್ಮೀ ದರ್ಶನ್, ಅಲ್ಲಿನ ಸ್ಪೆಷಲ್ ಬೃಹತ್ ಗಾತ್ರದ ಮಗ್‌ನಲ್ಲಿ ಕಾಫಿ ಕುಡಿದಿದ್ದಾರೆ. ಜೊತೆಗೆ ಬೃಹತ್ ಕ್ರೊಸೆಂಟ್‌ಅನ್ನೂ ತಿಂದಿದ್ದಾರೆ.
ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ಎಷ್ಟು ಕಾಫಿ ಟೂ ಮಚ್ ಎನಿಸುತ್ತದೆ? ಹ್ಯಾಪಿ ಸಂಡೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರಿಪ್ಲೈ ಮಾಡಿರುವ ನಟಿ ಕಾವ್ಯ ಗೌಡ, ಬೈಟು ನಂಗೆ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.