ದಶ೯ನ್ ಗೆ ಈ ದಿನಾಂಕದಂದು ಜಾಮೀನು ಪಕ್ಕಾ, ಓಪನ್ ಚಾಲೆಂಜ್ ಹಾಕಿದ ಜ್ಯೋತಿಷಿ

 
 ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯಿದ್ದು ಅಭಿಮಾನಿಗಳು ಮತ್ತು ಕುಟುಂಬಸ್ಥರು ಆತಂಕದಲ್ಲೇ ಕಾಯುತ್ತಿದ್ದಾರೆ. ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿದ್ದು ಅವರಿಗೆ ಚಿಕಿತ್ಸೆ ಪಡೆಯಲು ಜಾಮೀನು ಕೊಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ದರ್ಶನ್‌ರ ವೈದ್ಯಕೀಯ ವರದಿ ಕೊಡುವಂತೆ ಜೈಲಾಧೀಕಾರಿಗಳಿಗೆ ಕೋರ್ಟ್ ಸೂಚನೆ ಕೊಟ್ಟಿದ್ದು, ಸೋಮವಾರ ವೈದ್ಯಕೀಯ ವರದಿ ಪರಿಶೀಲನೆ ಮಾಡಿ ಜಾಮೀನು ಕೊಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.
ಈ ಬೆನ್ನಲ್ಲೇ ನಟ ದರ್ಶನ್‌ಗೆ ಜಾಮೀನು ಸಿಗುವ ಬಗ್ಗೆ ಸ್ವಾಮೀಜಿಯೊಬ್ಬರು ಮೂರು ತಿಂಗಳ ಹಿಂದೆ ನುಡಿದಿದ್ದ ಭವಿಷ್ಯ ನಿಜವಾಗಿದೆ. ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ದರ್ಶನ್‌ ಹುಟ್ಟಿದ ದಿನವನ್ನು ಆಧರಿಸಿ ಅವರು ಭವಿಷ್ಯ ಹೇಳಿದ್ದು, ದರ್ಶನ್‌ಗೆ ಅಕ್ಟೋಬರ್ 28ರವರೆಗೂ ಜಾಮೀನು ಸಿಗುವುದಿಲ್ಲ, ಅವರು ಏನೇ ಪ್ರಯತ್ನ ಪಟ್ಟರೂ ಜಾಮೀನು ಸಿಗಲ್ಲ, ಅವರಿಗೆ ಈಗ ಸಮಯ ಸರಿಯಾಗಿಲ್ಲ ಎಂದು ವಿದ್ಯಾ ಶಂಕರನಾಂದ ಸರಸ್ವತಿ ಸ್ವಾಮೀಜಿ ಮೂರು ತಿಂಗಳ ಹಿಂದೆಯೇ ಹೇಳಿದ್ದರು. <a href=https://youtube.com/embed/b940VHw0L5E?autoplay=1&mute=1><img src=https://img.youtube.com/vi/b940VHw0L5E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
 ಅವರು ಹೇಳಿದ್ದು ನಿಜವಾಗಿದ್ದು ದರ್ಶನ್ ಪರ ವಕೀಲರು ಏನೇ ವಾದ ಮಾಡಿದರೂ ಅವರಿಗೆ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಸಿಗಲಿಲ್ಲ.ದರ್ಶನ್ ಬಂಧನವಾಗಿದ್ದ ಸಂದರ್ಭದಲ್ಲಿ ದರ್ಶನ್ ಜಾತಕ ನೋಡಿ ಭವಿಷ್ಯ ಹೇಳಿದ್ದ ವಿದ್ಯಾ ಶಂಕರನಾಂದ ಸರಸ್ವತಿ ಸ್ವಾಮೀಜಿ, ರಾಹು ಮತ್ತು ಕೇತುಗಳು 4ನೇ ಮನೆಯಲ್ಲಿ ಇದ್ದು ಅನಿಷ್ಠ ಸೂಚನೆಗಳನ್ನು ಕೊಡುತ್ತದೆ. 2024ರ ಅಕ್ಟೋಬರ್ ತಿಂಗಳವರೆಗೂ ದರ್ಶನ್‌ಗೆ ಕಷ್ಟದ ಸಮಯ ಇರುತ್ತದೆ. ಅಕ್ಟೋಬರ್ ಬಳಿಕ ಅವರಿಗೆ ರಾಹು ಭುಕ್ತಿ ಶುರುವಾಗಲಿದ್ದು ಅವರ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಸಂಭವಿಸಲಿವೆ.
ದರ್ಶನ್‌ ಫೀನಿಕ್ಸ್‌ನಂತೆ ಮತ್ತೊಮ್ಮೆ ಎದ್ದು ಬರುತ್ತಾರೆ. ಜಾತಕದ ಪ್ರಕಾರ ಅಕ್ಟೋಬರ್ 28ರವರೆಗೂ ಅವರಿಗೆ ಜಾಮೀನು ಸಿಗುವುದು ಅಸಾಧ್ಯ. ಅವರು ಅಕ್ಟೋಬರ್ ತಿಂಗಳವರೆಗೂ ಜೈಲಿನಲ್ಲಿ ಇರಲೇಬೇಕಾಗುತ್ತದೆ. ನವೆಂಬರ್ ಮೊದಲ ವಾರದಲ್ಲಿ ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆ ಇದೆ. ಅವರಿಗೆ ಜಾಮೀನು ಸಿಕ್ಕ ಬಳಿಕ ಅವರ ಸಿನಿಮಾ ವೃತ್ತಿಜೀವನ ಕೂಡ ಮತ್ತೊಂದು ಹಂತಕ್ಕೆ ತಲುಪುತ್ತದೆ ಎಂದು ಹೇಳಿದ್ದಾರೆ.ಒಂದು ವೇಳೆ ಅವರು ಬಿಡುಗಡೆ ಆಗಿಲ್ಲ ಅಂದ್ರೆ ತಾನು ಜ್ಯೋತಿಷ್ಯ ಹೇಳೋದನ್ನೇ ಬೀಡ್ತೇನೆ ಅಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.