ದೀಪಿಕಾ ಪಡುಕೋಣೆ ಮಗುವಿಗೆ ಅನ್ಯಧರ್ಮದ ಹೆಸರಿಟ್ಟ ನಟಿ, ಹಿಂದೂಗಳಿಗೆ ಮತ್ತೊಂದು ಸಂಕಷ್ಟ

 
 ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ತಾಯ್ತನ ಎಂಜಾಯ್ ಮಾಡ್ತಿದ್ದಾರೆ. ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ದೀಪಾವಳಿ ಹಬ್ಬದಂದು ನಟಿ ದೀಪಿಕಾ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮನೆಗೆ ಮಗಳು ಬಂದ ಖುಷಿಯಲ್ಲಿದ್ದಾರೆ. 
ಇತ್ತೀಚಿಗಷ್ಟೇ ದೀಪಿಕಾ ಮಗಳ ಲಾಲನೆ-ಪಾಲನೆಗಾಗಿ ನಿದ್ದೆಗೆಡೋದು ಕಷ್ಟ ಕಷ್ಟ ಅಂತಿದ್ದಾರೆ. ತಾಯಿಯಾಗೋದು ಅಷ್ಟು ಸುಲಭವಲ್ಲ ಅನ್ನೋದು ದೀಪಿಕಾಗೆ ಅರಿವಾಗಿದೆ. ಅದಕ್ಕಿಂತ ಹೆಚ್ಚು ಸಂತೋಷವನ್ನು ಮಗಳು ತಂದು ಕೊಟ್ಟಿದ್ದಾಳೆ ಎಂದು ಈ ಬಾಲಿವುಡ್ ನಟಿ ಹೇಳಿದ್ರು.
ದೀಪಿಕಾ ಹಾಗೂ ರಣವೀರ್, ಮಗಳ ಜೊತೆ ಮೊದಲ ದೀಪಾವಳಿ ಆಚರಿಸುತ್ತಿದ್ದಾರೆ. ದೀಪಗಳ ಹಬ್ಬದ ಸಂಭ್ರಮದಲ್ಲೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.ಸೆಪ್ಟೆಂಬರ್ 9 ರಂದು ದೀಪಿಕಾ ಪಡುಕೋಣೆ ಮಗಳಿಗೆ ಜನ್ಮ ನೀಡಿದ್ರು. ಈ ಖುಷಿ ವಿಚಾರವನ್ನು ದೀಪಿಕಾ ಪಡುಕೋಣೆ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ರು. ಅಪ್ಪ-ಅಮ್ಮನಾದ ಖುಷಿಯಲ್ಲಿರುವ ದೀಪಿಕಾ-ರಣವೀರ್​ ಮಗಳಿಗೆ ಚೆಂದದ ಹೆಸರನನ್ನು ಇಟ್ಟಿದ್ದಾರೆ.
ದೀಪಿಕಾ ಅವರು ಮಗಳಿಗೆ ದುವಾ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದಾರೆ. ಮಗಳ ಪುಟಾಣಿ ಕಾಲಿನ ಫೋಟೋ ಹಂಚಿಕೊಂಡ ದೀಪಿಕಾ ಹೆಸರನ್ನು ರಿವೀಲ್ ಮಾಡಿದ್ದಾರೆ. ನಟಿ ದೀಪಿಕಾ ಮಗಳ ಹೆಸರಿನ ಅರ್ಥವನ್ನು ಕೂಡ ವಿವರಿಸಿದ್ದಾರೆ.ದುವಾ ಎಂದರೆ ಪ್ರಾರ್ಥನೆ. 
ದೀಪಿಕಾ ತನ್ನ ಮತ್ತು ರಣವೀರ್ ಮಗಳ ಮೊದಲ ಫೋಟೋವನ್ನು ಹೆಸರಿನೊಂದಿಗೆ ಹಂಚಿಕೊಂಡಿದ್ದಾರೆ. “ದುವಾ ಪಡುಕೋಣೆ ಸಿಂಗ್, 'ದುವಾ' : ಪ್ರಾರ್ಥನೆ ಎಂದರ್ಥ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾದಳು. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ ಎಂದು ದೀಪಿಕಾ ಮತ್ತು ರಣವೀರ್​ ಬರೆದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.