'ದಶ೯ನ್ ಸರ್ ಬಗ್ಗೆ ಮಾತಾಡಿದ್ದು ತಪ್ಪಾಯ್ತು' ದಿವ್ಯಾ ವಸಂತ ಮೊಸಳೆ ಕಣ್ಣೀರಿಗೆ ನೆಟ್ಟಿಗರು ಗರಂ
Sep 24, 2024, 20:55 IST
ನಟ ದರ್ಶನ್ ಪಾಲಿಗೆ ಕೆಟ್ಟವಳಾದ ಕಾರಣ ಈಗಲೂ ಆಂಕರ್ ದಿವ್ಯಾ ವಸಂತ್ ಅವರನ್ನು ಅಭಿಮಾನಿಗಳು ಕೆಟ್ಟ ಭಾಷೆ ಕಾಮೆಂಟ್ ಹಾಕಿ ನೋಯಿಸುತ್ತಿದ್ದಾರಂತೆ . ಹಾಗಂತ ಅವರೋ ಈವರೋ ಹೇಳಿದ್ದಲ್ಲ ಬದಲಾಗಿ ದಿವ್ಯಾ ವಸಂತ್ ಅವರೇ ಕಣ್ಣೀರಿಟ್ಟು ಹೇಳಿಕೊಂಡಿದ್ದಾರೆ.ದಿವ್ಯಾ ವಸಂತ ಮೂಲತಃ ಹಾಸನದವರು.
ಶ್ರವಣಬೆಳಗೊಳದ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ದಿವ್ಯಾ ಅವರು ಚಿಕ್ಕ ವಯಸ್ಸಿನಲ್ಲಿರುವಾಗಲೇ ತಂದೆ ಬೇರ್ಪಟ್ಟರಂತೆ. ಬಳಿಕ ದಿವ್ಯಾ ಅವರ ಅಮ್ಮ ವಸಂತ ಅವರು ಗಾರ್ಮೆಂಟ್ ಕೆಲಸ ಮಾಡಿ, ಮಗ ಮತ್ತು ಮಗಳನ್ನು ಓದಿಸಿ ಬೆಳೆಸಿದರು. ಹೀಗಾಗಿ ದಿವ್ಯಾ ಅವರು ತಮ್ಮ ಹೆಸರಿನ ಮುಂದೆ ಅಮ್ಮನ ಹೆಸರು ಇಟ್ಟುಕೊಂಡಿದ್ದಾರೆ.
<a href=https://youtube.com/embed/kvEdLLpm3lg?autoplay=1&mute=1><img src=https://img.youtube.com/vi/kvEdLLpm3lg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸೆಕೆಂಡ್ ಪಿಯುಸಿ ಮುಗಿದ ಬಳಿಕ ದಿವ್ಯಾ ಕೆಲಸ ಮಾಡಲು ಶುರು ಮಾಡುತ್ತಾರೆ. ರಸ್ತೆ ಬದಿ ಸಿಮ್ ಮಾರಾಟ ಮಾಡಿ ಜೀವನ ನಡೆಸುತ್ತಾರೆ. ಈ ವಿಚಾರವನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದರು ದಿವ್ಯಾ. ಆದರೆ ದಿವ್ಯಾ ಅವರಿಗೆ ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹುಚ್ಚು ಇತ್ತಂತೆ. ಹೀಗಾಗಿ ಮಾಧ್ಯಮಗಳಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಅಷ್ಟಾಗಿ ಅವರಿಗೆ ಸಂಬಳ ಸಿಗುವುದಿಲ್ಲ.
ಈ ಬಗ್ಗೆಯೂ ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಬಳಿಕ ದಿವ್ಯಾಗೆ ಬ್ರೇಕ್ ಕೊಟ್ಟಿದ್ದು, ಗಿಚ್ಚ ಗಿಲಿಗಿಲಿ ಶೋ. ನಂತರ ಅವರಿಗೆ ಬ್ರೇಕ್ ನೀಡಿದ್ದು ಬಿ ಟಿವಿ.. ದರ್ಶನ್ ರೇಣುಕಾ ಸ್ವಾಮಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ದರ್ಶನ್ ವಿರೋಧವಾಗಿ ನಿಂತು ರೇಣುಕಾ ಸ್ವಾಮಿ ಮನೆಯ ಪರಿಸ್ಥಿತಿ ತೆರೆಯ ಮೇಲೆ ತಂದಿದ್ದರು. ಅದೇ ಕಾರಣಕ್ಕೆ ಇವರನ್ನು ಅತಿ ಹೆಚ್ಚು ದರ್ಶನ್ ಅಭಿಮಾನಿಗಳು ಟ್ರೊಲ್ ಮಾಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.