ಜೈಲರ್ ಸಿನಿಮಾದಲ್ಲಿ ಈ ಸ್ಟಾರ್ ನಟ ನಟಿಯರು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ, ನಿಜಕ್ಕೂ ಬೆಚ್ಚಿಬೀಳ್ತೀರಾ

 

 ನಟ ರಜನಿಕಾಂತ್ ಅವರ ಚಾರ್ಮ್ 72ರ ಹರೆಯದಲ್ಲೂ ಮುಂದುವರಿದಿದ್ದು, ಈಗಲೂ ಯಂಗ್ ಹೀರೋಗಳಿಗೆ ತಲೈವಾ ಪೈಪೋಟಿ ನೀಡುತ್ತಿದ್ದಾರೆ. ಸಾಮಾನ್ಯವಾಗಿ ನಾಯಕನ ವಯಸ್ಸು ಹೆಚ್ಚಾದಾಗ, ಅವರ ಸಂಭಾವನೆ ಕಡಿಮೆಯಾಗಲು ಪ್ರಾರಂಭಿಸುತ್ತದೆ, ಆದರೆ ರಜನಿಕಾಂತ್ ವಿಚಾರದಲ್ಲಿ ಉಲ್ಟಾ ಆಗಿದೆ.

ತಲೈವರ್ ಪ್ರತಿ ಚಿತ್ರಕ್ಕೆ 120 ಕೋಟಿ ಸಂಭಾವನೆ ಪಡೆಯುತ್ತಾರೆ. ಶೀಘ್ರದಲ್ಲೇ ನಟ ರಜನಿಕಾಂತ್ ನಟನೆಯಿಂದ ದೂರ ಸರಿಯುತ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಕೈಯಲ್ಲಿರುವ ಪ್ರಾಜೆಕ್ಟ್ ಮುಗಿಸಿ ನಟನೆಗೆ ಗುಡ್ ಬೈ ಹೇಳಲಿದ್ದಾರೆ.

ನೆಲ್ಸನ್ ಅವರ ಆಕ್ಷನ್-ಪ್ಯಾಕ್ಡ್ ಜೈಲರ್ ಸಿನಿಮಾವನ್ನು 225 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಅದರಲ್ಲಿ ಒಂದು ಭಾಗವನ್ನು ಸ್ಟಾರ್-ಸ್ಟಡ್ಡ್ ಕ್ಯಾಸ್ಟ್ಗಳು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಚಿತ್ರದ ಬಜೆಟ್ನ 48% ರಜನಿಕಾಂತ್ ಅವರೇ ತೆಗೆದುಕೊಂಡಿದ್ದಾರೆ. ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಅವರು 110 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ.

ಎರಡು ವರ್ಷಗಳ ನಂತರ 'ಜೈಲರ್' ಚಿತ್ರದ ಮೂಲಕ ರಜನಿಕಾಂತ್ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ನೆಲ್ಸನ್ ನಿರ್ದೇಶನದ ಸಾಹಸ ಪ್ರಧಾನ ಚಿತ್ರ ವಿಶ್ವದಾದ್ಯಂತ ಅದ್ಧೂರಿ ರಿಲೀಸ್ ಕಂಡಿದೆ. ಇದು ಜಗತ್ತಿನಾದ್ಯಂತದ ರಜನಿ ಅಭಿಮಾನಿಗಳಿಗೆ ಸಿನಿಮೀಯ ರಸದೌತಣವನ್ನು ನೀಡುತ್ತಿದೆ. ಈ ಚಿತ್ರದ ಬಜೆಟ್ ಎಷ್ಟು ಮತ್ತು ನಟರು ತಮ್ಮ ಪಾತ್ರಗಳಿಗೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂದು ತಿಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಿ.

ನಟ ರಜನಿಕಾಂತ್ 2 ವರ್ಷಗಳ ನಂತರ ತೆರೆಗೆ ಮರಳಿದ್ದು
ಅವರು ಮಾತ್ರವಲ್ಲದೇ ಈ ಚಿತ್ರದಲ್ಲಿ ಅನೇಕ ಸ್ಟಾರ್ ನಟರು ಇದ್ದಾರೆ. ಮತ್ತೊಂದೆಡೆ ಮೋಹನ್​ ಲಾಲ್ ತಮ್ಮ ಪಾತ್ರಕ್ಕಾಗಿ 8 ಕೋಟಿ ರೂ ಸಂಭಾವನೆಯನ್ನು ಪಡದಿದ್ದಾರೆ.
ಜೈಲರ್ ಚಿತ್ರದಲ್ಲಿ ನಟ ರಜನಿಕಾಂತ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ನಟಿಸಿದ್ದಾರೆ. ರಜನಿಕಾಂತ್ ಜೊತೆ ನಟಿ ನಟಿಸಲು ಶಿವಣ್ಣ 4 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ ವೈರಲ್ ಆಗಿದೆ.ರಜನಿಕಾಂತ್ ಎದುರು ಜಾಕಿ ಶ್ರಾಫ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿ ನಟಿಸಲು ಜಾಕಿ ಶ್ರಾಫ್ 4 ಕೋಟಿ ಸಂಭಾವನೆ ಪಡೆದಿದ್ದಾರೆ. <a href=https://youtube.com/embed/8cr7ZVDALU4?autoplay=1&mute=1><img src=https://img.youtube.com/vi/8cr7ZVDALU4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಚಿತ್ರದ ನಾಯಕಿ ತಮನ್ನಾ ಭಾಟಿಯಾ ಕೂಡ ರಜನಿಕಾಂತ್ ಜೊತೆ ಮಸ್ತ್ ಸ್ಟೆಪ್ ಹಾಕಿದ್ದಾರೆ. ಜೈಲರ್ ಸಿನಿಮಾ ಕಾವಾಲ ಸಾಂಗ ಸೂಪರ್ ಹಿಟ್ ಆಗಿದೆ. ಜೈಲರ್ ಸಿನಿಮಾದಲ್ಲಿ ನಟಿಸಲು ತಮನ್ನಾ 4 ಕೋಟಿ ಸಂಭಾವನೆ ಪಡೆದಿದ್ದಾರೆ.
ಜೈಲರ್ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಸುನಿಲ್, ರಮ್ಯಾ ಕೃಷ್ಣನ್ ಮತ್ತು ಯೋಗಿ ಬಾಬು ಅವರಂತಹ ತಾರಾ ಬಳಗವನ್ನು ಹೊಂದಿದೆ. ಇವರಲ್ಲಿ ರಮ್ಯಾ ಕೃಷ್ಣನ್ ತಲಾ 1 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.