ಕಾಟೇರ ಸಿನಿಮಾ ನೋಡಿ ಹೊರಬಂದ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ, 'ಇದು ಸಿನಿಮಾ ಅಲ್ಲ 'ಹಬ್ಬ'

 

ಕಾಟೇರ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಭರ್ತಿಯಾಗಿದೆ. ಕಳೆದ ಹದಿನಾಲ್ಕು ದಿನಗಳಲ್ಲಿ ದರ್ಶನ್‌ ಮತ್ತು ಆರಾಧನಾ ರಾಮ್‌ ಅಭಿನಯದ, ತರುಣ್‌ ಸುಧೀರ್‌ ನಿರ್ದೇಶನದ ಕಾಟೇರವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡ ನೀಡಿದ ಮಾಹಿತಿ ಪ್ರಕಾರ ಕಳೆದ ಎರಡು ವಾರಗಳಲ್ಲಿ ಕಾಟೇರ ಗಳಿಕೆ 157.42 ಕೋಟಿ ರೂಪಾಯಿ ಗಳಿಕೆ ಮಾಡಿದೆ. 

ಕಾಟೇರ ಸಿನಿಮಾ ಮೊದಲು ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಮೊದಲ ಒಂದೆರಡು ದಿನಗಳಲ್ಲಿ ಕಾಟೇರನ ಸಕ್ಸಸ್‌ ಕಾಣಿಸಿದರೂ ಚಿತ್ರತಂಡ ಪರಭಾಷೆಗಳತ್ತ ಅಷ್ಟಾಗಿ ಒಲವು ತೋರಲಿಲ್ಲ. ಆದರೆ, ಹೊರರಾಜ್ಯ ಮತ್ತು ಹೊರದೇಶಗಳಲ್ಲಿರುವ ಕನ್ನಡಿಗರ ಬೇಡಿಕೆಗೆ ತಕ್ಕಂತೆ ಹೊರರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಕಾಟೇರ ಸಿನಿಮಾ ಬಿಡುಗಡೆ ಮಾಡಲಾಗಿದೆ. ದುಬೈನಲ್ಲಿ ಕಾಟೇರ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಸ್ವತಃ ದರ್ಶನ್‌ ದುಬೈಗೆ ಹೋಗಿ ಕರುನಾಡ ಅಧಿಪತಿಯೆಂಬ ಬಿರುದು ಪಡೆದು ವಾಪಸ್‌ ಬಂದಿದ್ದರು.
ಇನ್ನು ಮಗಳು ಧೃತಿ ಜೊತೆ ಸಿನೆಮಾ ನೋಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಿನಿಮಾವನ್ನು ಬಹಳಷ್ಟು ಮೆಚ್ಚಿಕೊಂಡಿದ್ದಾರೆ ಮಾತ್ರವಲ್ಲ ಹೊಗಳಿದ್ದಾರೆ ಕೂಡ. ಕನ್ನಡ ಭಾಷೆಯಲ್ಲಿ ಇನ್ನಷ್ಟು ಒಳ್ಳೆಯ ಚಿತ್ರಗಳು ಬರಬೇಕು. ಈ ಸಿನೆಮಾದ ಕೆಲ ಸೀನ್ ಗಳು ಕಣ್ಣಿಗೆ ಕಟ್ಟುವಂತೆ ಇದೆ ನನಗೆ ನೋಡುತ್ತಾ ಕಣ್ಣೀರು ಬಂತು ಎಂದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಲೆಬ್ರಿಟಿ ಷೋ ನಡೆದಿತ್ತು ಕೆಲ ಕಾರಣಗಳಿಂದ ಅಶ್ವಿನಿ ಅವರು ಅದಕ್ಕೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಆ ಕಾರಣದಿಂದ ಈದೀಗ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರು ಇದ್ದಿದ್ದರೆ ಕೂಡ ಇಂತಹ ಒಳ್ಳೆಯ ಸಿನಿಮಾಗಳನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದರು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.