ದರ್ಶನ್ ವಿರುದ್ಧ ಪಿತೂರಿ ಮಾಡಿದವರು ಯಾರು ಗೊತ್ತಾ, ಪಬ್ಲಿಕ್ ಮುಂದೆ ಓಪನ್ ಹೇಳಿಕೆ ಕೊಟ್ಟ ರಾಕ್ ಲೈನ್ ವೆಂಕಟೇಶ್

 

ಕಾಟೇರ ಸಿನಿಮಾ ಸಕ್ಸಸ್ ಹಿನ್ನೆಲೆ ಸೆಲೆಬ್ರಿಟಿ ಶೋ ನಡೆದ ಬಳಿಕ ಚಿತ್ರತಂಡದವರು ಬೆಂಗಳೂರಿನ ಖಾಸಗಿ ಪಬ್​ನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ನಿಯಮ ಮೀರಿ ಪಾರ್ಟಿ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ನಗರ ಪೊಲೀಸರು ಚಿತ್ರತಂಡ ಮತ್ತು ನಟರಿಗೆ​ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿದ್ದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಾಟೇರ ಸಿನಿಮಾದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್, ನಟ ದರ್ಶನ್​ , ತರುಣ್ ಸುಧೀರ್, ಡಾಲಿ ಧನಂಜಯ್, ಚಿಕ್ಕಣ್ಣ ಸೇರಿದಂತೆ ಇತರೆ ಸೆಲೆಬ್ರಿಟಿಗಳು ಜನವರಿ 12 ರಂದು ಸುಬ್ರಹ್ಮಣ್ಯ ನಗರ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ಬಳಿಕ ರಾಕ್​ಲೈನ್​ ವೆಂಕಟೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಾವು ತಡರಾತ್ರಿ ಪಾರ್ಟಿ ಮಾಡಲಿಲ್ಲ. ಊಟಕ್ಕೆ ಕುಳಿತಿದ್ದೆವು, ಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ಕೆಲವರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿದ ರಾಕ್​ಲೈನ್​ ವೆಂಕಟೇಶ್, ಇದರ ಹಿಂದೆ ಯಾರು ಇದ್ದಾರೆ ಎಂದು ನನಗೆ ಗೊತ್ತು. ಒಬ್ಬ ದರ್ಶನ್ ಅವರನ್ನು ಅವರ ಒಂದು ಸಿನಿಮಾ ಕಾಟೇರ ದೊಡ್ಡ ಸಕ್ಸಸ್ ಆಗಿರುವುದಕ್ಕೆ, ಅವರ ಹೆಸರಿಗೆ ಮಸಿ ಬಳಿಯೋಕೆ ಯಾರ್ಯಾರು ಏನ್ ಏನು ಮಾಡುತ್ತಿದ್ದಾರೆ ಅಂತ ನಂಗೆ ಗೊತ್ತು. ಕನ್ನಡ ಸಿನಿಮಾ ಈ ಸಂದರ್ಭದಲ್ಲಿ ಯಶಸ್ವಿಯಾಗೋದು ತುಂಬಾ ಮುಖ್ಯ. ಹೀಗಿರುವಾಗ ಒಬ್ಬ ದರ್ಶನ್ ಮೇಲೆ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ. <a href=https://youtube.com/embed/sgm8gkMUgs8?autoplay=1&mute=1><img src=https://img.youtube.com/vi/sgm8gkMUgs8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದರ ಹಿಂದೆ ಯಾರಿದ್ದಾರೆ ಎಂದ ಗೊತ್ತಿದ್ದರು ನಾನು ಹೇಳುವುದಿಲ್ಲ, ಆದರೆ, ಅದನ್ನು ಇಲ್ಲಿಗೆ ನಿಲ್ಲಿಸಿ. ಯಾರು ಏನು ಮಾಡ್ತರಿದ್ದಾರೆ ಅಂತ ಇಡೀ ರಾಜ್ಯದ ಜನರಿಗೆ ಗೊತ್ತು. ದಯವಿಟ್ಟು ಕನ್ನಡ ಚಿತ್ರರಂಗದಲ್ಲಿ ನಮ್ಮದೆ ಸಿನಿಮಾವಲ್ಲ... ಯಾವುದೇ ಸಿನಿಮಾ ಇದ್ದರೂ ಚೆನ್ನಾಗಿ ಓಡಬೇಕು. ಡಾಲಿ ಧನಂಜಯ್, ಚಿಕ್ಕಣ್ಣ, ಅಭಿಷೇಕ್ ಎಲ್ಲರ ಸಿನಿಮಾ ಗೆಲ್ಲಬೇಕು. ದರ್ಶನ್ ಅವರು ಮತ್ತಷ್ಟು ಜನ ಬೆಳೆಯಬೇಕು ಅಂತ ಬಯಸುವವರು. ಅವರನ್ನು ಟಾರ್ಗೆಟ್ ಮಾಡುವುದನ್ನು ನಾನು ಮಾತ್ರವಲ್ಲ ಇಡೀ ಡಿ ಬಾಸ್ ಫ್ಯಾನ್ಸ್ ಖಂಡಿಸುತ್ತಾರೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.