ನಟಿ ರಮ್ಯಾ ತಂದೆ ಯಾರು ಗೊತ್ತೇ, ಕರ್ನಾಟಕ ರಾಜಕೀಯದ ಪವರ್‌ ಫುಲ್‌ ಲೀಡರ್‌!

 

      ದರ್ಶನ್‌ ಮೇಲಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಪೋಸ್ಟ್‌ ಮಾಡಿ ಸುದ್ದಿಯಲ್ಲಿರುವ ನಟಿ ರಮ್ಯಾ ಅವರ ತಂದೆ ತಾಯಿಯ ಬಗ್ಗೆ ತಿಳಿದುಕೊಳ್ಳೋಣ. 

     ಸ್ಯಾಂಡಲ್‌ವುಡ್‌ ಕ್ವೀನ್‌ ಎಂದೇ ನಟಿ ರಮ್ಯಾ ಫೇಮಸ್.‌ ರಮ್ಯಾ ನಿಜವಾದ ಹೆಸರು ದಿವ್ಯ ಸ್ಪಂದನ. 29 ನವೆಂಬರ್ 1982‌ ರಂದು ಜನಿಸಿದರು. ಸಿನಿರಂಗಕ್ಕೆ ಎಂಟ್ರಿ ಕೊಡುವಾಗ ದಿವ್ಯ ಸ್ಪಂದನ ಅವರಿಗೆ ರಮ್ಯಾ ಎಂದು ರಾಜ್‌ ಕುಮಾರ್‌ ಅವರ ಪತ್ನಿ ಪಾರ್ವತಮ್ಮ ಹೆಸರನ್ನು ಬದಲಿಸಿದರಂತೆ.
     ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ. ಮಾಜಿ ಸಿಎಂ ಎಸ್ಎಂ ಕೃಷ್ಣ ಅವರಿಗೆ ರಮ್ಯಾ ತಾಯಿ ರಂಜಿತಾ ಅತ್ಯಾಪ್ತರು. ರಂಜಿತಾ ಮಂಡ್ಯ ಕಾಂಗ್ರೆಸ್ಸಿನ ಸಕ್ರಿಯ ಸದಸ್ಯೆ ಆಗಿದ್ದಾರೆ. ಸಾಕಷ್ಟು ಪ್ರಭಾವಿ ಮುಖಂಡರು. ನಟಿ ರಮ್ಯಾ ತಂದೆ ಆರ್‌ಟಿ ನಾರಾಯಣ್ ಕೂಡ ರಜಕೀಯದಲ್ಲಿ ಗುರುತಿಸಿಕೊಂಡವರು.  
     ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆರ್‌ಟಿ ನಾರಾಯಣ್ ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯರಾಗಿದ್ದರು.ಆರ್‌ಟಿ ನಾರಾಯಣ್ ಅಪ್ಪಣೆಯಿಲ್ಲದೇ ವಿಧಾನಸೌಧದಲ್ಲಿ ಹುಲ್ಲುಕಡ್ಡಿ ಸಹ ಅಲ್ಲಾಡುತ್ತಿರಲಿಲ್ಲ ಎಂಬ ಮಾತಿದೆ ಎಂಬುದು ಗಮನಾರ್ಹ.ನಟಿ ರಮ್ಯಾ ಇದುವರೆಗೂ ಎಲ್ಲಿಯೂ ತಮ್ಮ ತಂದೆಯ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಇದನು ವರದಿಗಳನ್ನು ಆಧರಿಸಿ ಬರೆಯಲಾಗಿದೆ.