ವರದಕ್ಷಿಣೆ ಕಿ ರುಕುಳ; ಚಿನ್ನ ಬಂಗಾರ ಕಾರು ಸಿಗೋ ತನಕ ಮೊದಲ ರಾತ್ರಿ ನಡೆಯಲ್ಲ ಎಂದ ಪತಿರಾಯ
Aug 5, 2024, 21:11 IST
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಚಿನ್ನಾಭರಣ, ನಗದು ಕೊಟ್ಟು ಅದ್ದೂರಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಇದೀಗ ಮದುವೆಯಾದ ಕೇವಲ ಒಂದು ವರ್ಷದೊಳಗೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಮತ್ತೆ ಪತಿರಾಯ ವರದಕ್ಷಿಣೆ ಕಾಟ ಕೊಡಲು ಶುರುಮಾಡಿದ್ದಾನೆ.
ಈ ಹಿನ್ನಲೆ ನೊಂದ ನೆಲಮಂಗಲದ 24 ವರ್ಷದ ವಧು ಬೆಂಗಳೂರಿನ ವರ್ತೂರಿನ ಪತಿ ಕಿರಣ್ ಸೇರಿದಂತೆ ಮನೆಯವರ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾರೆ. ಕಳೆದ 2023 ಡಿಸೆಂಬರ್ 14 ರಂದು ವರ್ತೂರಿನ ಕಿರಣ್ ಜೊತೆ ಹಸೆಮಣೆ ಏರಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ವರದಕ್ಷಿಣೆ ಆಸೆ ಅತಿಯಾಗಿದೆ. ಈ ಹಿನ್ನಲೆ ಕೈ ಹಿಡಿದ ಪತ್ನಿಗೆ ಕಾರು, ಮತ್ತಷ್ಟು ಚಿನ್ನಾಭರಣ ತರೋವರೆಗೂ ಪ್ರಸ್ಥ ಶಾಸ್ತ್ರ ಮಾಡಲ್ಲವೆಂದು ಪಟ್ಟು ಹಿಡಿದಿದ್ದಾರೆ.
ಜೊತೆಗೆ ಆಕೆಯ ಮೊಬೈಲ್ ಫೋನ್ ಕಿತ್ತುಕೊಂಡು ರೂಂನಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ವರದಕ್ಷಿಣೆ ತಂದುಕೊಟ್ಟರೆ ನಾನು ಪ್ರಸ್ಥ ಕಾರ್ಯವನ್ನು ಮಾಡಿಕೊಳ್ಳುತ್ತೇನೆ, ಇಲ್ಲವಾದಲ್ಲಿ ನಾನು ಮತ್ತೊಂದು ಮದುವೆಯನ್ನು ಮಾಡಿಕೊಳ್ಳುತ್ತೆನೆ ಎಂದು ಪತಿ ಕಿರಣ್ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ, ತವರು ಮನೆಗೆ ಹೊರಟು ಹೋಗುವಂತೆ ಬೈದು ದೈಹಿಕವಾಗಿ ಹಿಂಸೆ ನೀಡಿದ್ದ. ಇನ್ನು ಇತ SSLC ಓದಿ, MBA ಓದಿದ್ದೇನೆ, ನನಗೆ MG ರೋಡ್ ನಲ್ಲಿ ದೊಡ್ಡ ಕಂಪನಿಯಲ್ಲಿ ಕೆಲಸವಿದೆ ಎಂದು ನಂಬಿಸಿದ್ದರಂತೆ.
ಇನ್ನು ನನಗೆ ಆಗಿರುವ ಅನ್ಯಾಯಕ್ಕೆ ಮಹಿಳಾ ಆಯೋಗದಲ್ಲಿ ದೂರು ಕೊಟ್ಟರೂ ಕೌನ್ಸಿಲ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆ ಪತಿ ಕಿರಣ್, ಮಾವ ಸೀನಾಪ್ಪ, ಅತ್ತೆ ಶಶಿಕಲಾ, ಸಂಬಂಧಿ ಮನೋಜೆ ವಿರುದ್ಧ ನವ ವಿವಾಹಿತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನೆಲಮಂಗಲ ಟೌನ್ ಠಾಣೆಯಲ್ಲಿ ಕಲಂ 342.498,506 ಐಪಿಸಿ,ಜೊತೆಗೆ 3 ಮತ್ತು 4 ಡಿಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ
ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.