ಡ್ರೋನ್ ಪ್ರತಾಪ್ ಆಟಕ್ಕೆ ಪ್ರತಿಸ್ಪರ್ಧಿಗಳು ಕಂಗಾಲು, ಏನಾಯಿತು ಗೊತ್ತಾ

 

ಬಿಗ್​ ಬಾಸ್​ ಕನ್ನಡ ಸೀಸನ್​ 10 ಶುರುವಾದ ಮೊದಲ ದಿನದಿಂದಲೂ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮನೆಯ ಸದಸ್ಯರು ಇದೀಗ ಐದನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆ ಎರಡು ತಂಡಗಳಾಗಿ ಆಟ ಆಡುತ್ತಿರುವ ಸ್ಪರ್ಧಿಗಳಲ್ಲಿ ಕೊಂಚ ವ್ಯತ್ಯಾಸಗಳು ಕಂಡುಬಂದಿರುವುದು ಇದೀಗ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಈ ಹಿಂದೆ ವಿನಯ್​ ಹಾಗೂ ಸಂಗೀತಾ ನೇತೃತ್ವದಲ್ಲಿ ಮನೆಯ ಸದಸ್ಯರು ಆಟವಾಡಿದ್ದರು. ಆದ್ರೆ, ಈ ಬಾರಿ ಅದೇ ತಂಡಗಳಿಗೆ ನಾಯಕರು ಬದಲಾಗಿದ್ದು, ವಿನಯ್​ ಜಾಗಕ್ಕೆ ಸಿರಿ ಅವರು ಕ್ಯಾಪ್ಟನ್​ ಆಗಿದ್ದಾರೆ. ತಮ್ಮ ತಂಡಕ್ಕೆ ವಜ್ರಕಾಯ ಎಂದು ಹೆಸರಿಟ್ಟಿದ್ದಾರೆ. ಅವರ ನಂತರ ಸಂಗೀತಾ ಬದಲಿಗೆ ಪ್ರತಾಪ್​ ತಮ್ಮ ತಂಡ ಗಂಧದಗುಡಿಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. 

ಈ ಎರಡು ಟೀಮ್​ನ ಸದಸ್ಯರು ಇದೀಗ ಮುಂದಿನ ಸ್ಪರ್ಧೆಗಳಲ್ಲಿ ಜಿದ್ದಾಜಿದ್ದಿಯಾಗಿ ಆಡಿದ್ದಾರೆ. ಎರಡು ತಂಡಗಳು ಹೊಸ ಹೆಸರು ಪಡೆದುಕೊಳ್ಳುವುದರ ಜತೆಗೆ ಹೊಸ ನಾಯಕರನ್ನು ಪಡೆದುಕೊಂಡಿದೆ. ಈ ಮಧ್ಯೆ ಸದಾ ಮನೆಯಲ್ಲಿ ಪ್ರೀತಿಯಿಂದ ಮಾತನಾಡುತ್ತ, ಆತ್ಮೀಯತೆಯಿಂದ ಇದ್ದ ಕಾರ್ತಿಕ್​ ಹಾಗೂ ಸಂಗೀತಾ ಜೋಡಿ ಸದ್ಯ ಪರಸ್ಪರ ಕೋಪದಿಂದ ಮಾತನಾಡಿಕೊಳ್ಳುತ್ತಿದ್ದಾರೆ.  <a href=https://youtube.com/embed/ZHsekUWaM-8?autoplay=1&mute=1><img src=https://img.youtube.com/vi/ZHsekUWaM-8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇಬ್ಬರ ನಡುವೆ ಕೊಂಚ ಬಿರುಕು ಮೂಡಿದ್ದು, ಒಬ್ಬರ ಮಾತನ್ನು ಮತ್ತೊಬ್ಬರು ಕೇಳುವ ಪರಿಸ್ಥಿತಿಯಲಿಲ್ಲ ಎನ್ನುವಂತೆ ಇದ್ದಾರೆ. ಆಟದ ಕೊನೆಯಲ್ಲಿ ಗಂಧದಗುಡಿ ತಂಡಕ್ಕೆ ಕ್ಯಾಪ್ಟನ್​ ಆದ ಪ್ರತಾಪ್​ಗೆ​ ಮನೆಯವರ ಚಪ್ಪಾಳೆ ಸಿಕ್ಕಿದ್ದು, ಮೊದಲ ಟಾಸ್ಕ್​ನಲ್ಲಿ ಗೆಲುವು ಪಡೆದಿದ್ದಾರೆ. ಮುಂಬರುವ ಚಟುವಟಿಕೆಗಳಲ್ಲಿ ನಾಯಕನಾಗಿ ಪ್ರತಾಪ್​ ನಿಲುವುಗಳು ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.