FackCheck:ನನ್ನ ಮಗಳನ್ನು ಬೇರೆ ಅವರಿಗೆ ಮದುವೆ ಮಾಡಲು ಇಷ್ಟ ವಿಲ್ಲ, ಹಾಗಾಗಿ ನಾನೇ ಆದೆ ಎಂದ ಅಪ್ಪ
Mar 26, 2025, 12:51 IST
ಇದು ತಂದೆ ಮತ್ತು ಮಗಳ ಲವ್ಸ್ಟೋರಿ. ಇಬ್ಬರೂ ಪ್ರೀತಿಸಿ ಮದುವೆಯಾಗುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ ವಿಚಿತ್ರ ಎಂದರೆ, ಮಗಳು ಕೂಡ ತುಂಬು ಮನಸ್ಸಿನಿಂದ ಅಪ್ಪನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾಳೆ! ತಾನು ಅಪ್ಪನನ್ನು ಪ್ರೀತಿಸುತ್ತಿರುವುದಾಗಿ ಅವಳು ಹೇಳಿದ್ದಾಳೆ. ಕೆಲ ಕಡೆಗಳಲ್ಲಿ ಹೀಗೆ ಎನ್ನುತ್ತಾ ಧರ್ಮದ ಕುರಿತಾಗಿ ಅವಹೇಳನ ನಡೆಸುವ ವಿಡಿಯೋ ಕೆಲ ದಿನಗಳಿಂದ ವೈರಲ್ ಆಗ್ತಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪ ಮಗಳಂತೆ ಕಾಣುವ ಇಬ್ಬರು ಜತೆಯಲ್ಲಿ ಕುಳಿತಿರುವ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಪಾಕಿಸ್ತಾನದ ಇವರಿಬ್ಬರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, ಅಪ್ಪ ಮಗಳನ್ನೇ ಮದುವೆ ಆಗಿದ್ದಾನೆ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದರ ಕೀಫ್ರೇಮ್‌ಗಳು ರಾಜ್ ಠಾಕೂರ್ ಎನ್ನುವವರ ಇನ್ಸ್‌ಟಾಗ್ರಾಂ ಖಾತೆಯ 2025 ಮಾ. 6ರ ಪೋಸ್ಟ್‌ಗೆ ಸಂಪರ್ಕ ನೀಡಿದವು. ಅವರ ಪೋಸ್ಟ್‌ನಲ್ಲಿ ಈ ವಿಡಿಯೊ ಇದೆ. ಇದು ಪಾತ್ರಧಾರಿಗಳನ್ನು ಬಳಸಿಕೊಂಡು ಸೃಷ್ಟಿ ಮಾಡಲಾದ ವಿಡಿಯೊ ಎಂದು ಅವರೇ ಹೇಳಿಕೊಂಡಿರುವುದು ಕಂಡುಬಂದಿದೆ.
ಪೂರ್ಣ ವಿಡಿಯೊ ಅನ್ನು ಅವರ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವುದು ಕಂಡಿತು. ರಾಜ್ ಠಾಕೂರ್ ದೆಹಲಿಯ ಒಬ್ಬ ವಿಡಿಯೊ ಕ್ರಿಯೇಟರ್ ಆಗಿದ್ದು, ಅವರೇ ನಟನಟಿಯರನ್ನು ಬಳಸಿಕೊಂಡು ಇಂಥ ವಿಡಿಯೊಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಾರೆ ಎನ್ನುವುದು ಅವರ ಖಾತೆಯಿಂದ ತಿಳಿಯುತ್ತದೆ. ಹೀಗೆ ಸೃಷ್ಟಿ ಮಾಡಲಾದ ವಿಡಿಯೊ ಅನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಫ್ಯಾಕ್ಟ್ ಚೆಕ್ ನಲ್ಲಿ ಗೊತ್ತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.