FactCheck:ಕಮಲ್‌ ಹಾಸನ್ ಹೇಳಿಕೆಯಲ್ಲಿ ತಪ್ಪಿಲ್ಲ; ನನ್ನ ಮೊದಲ‌‌ ಭಾಷೆ ತಮಿಳು ಎಂದ ರಶ್ಮಿಕಾ ಮಂದಣ್ಣ

 
ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಅಂತ ನಟ ಕಮಲ್ ಹಾಸನ್ ಅವರು ಹೇಳಿದ್ದು. ಈ ವಿವಾದಾತ್ಮಕ ಹೇಳಿಕೆಗೆ ನಟ ಕಮಲ್ ಹಾಸನ್ ಅವರು ಇನ್ನೂ ಕ್ಷಮೆ ಕೇಳಿಲ್ಲ. ಈ ಬಗ್ಗೆ ಕನ್ನಡಿಗರಿಗೆ ಇನ್ನೂ ಕೋಪವಿದೆ. ಈ ರೀತಿ ಇರುವಾಗ ನಮ್ಮ ಮನೆಯ ಹುಡುಗಿ ಅಂತಲೇ ಗುರುತಿಸುವ ನಟಿ ರಶ್ಮಿಕಾ ಮಂದಣ್ಣ ಅವರು ಪಕ್ಕದ ಮನೆಯವರನ್ನು ಮೆಚ್ಚಿಸುವುದಕ್ಕೆ ಹೋಗಿ ಮತ್ತೆ ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ದಾರೆ.
 
ಈಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರು ನಾನು ಹೈದರಾಬಾದ್‌ನವಳು ಅಂತ ಹೇಳಿಕೊಳ್ಳುವ ಮೂಲಕ ಟ್ರೋಲ್‌ಗೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ನಾನು ಕಲಿತದ್ದು ಇದೇ ಭಾಷೆ ಅಂತ ಹೇಳುವ ಮೂಲಕ ಕನ್ನಡ - ತಮಿಳು ಭಾಷಾ ವಿವಾದದ ಸಂದರ್ಭದಲ್ಲಿಯೇ ಕನ್ನಡಿಗರಿಗೆ ಮುಜುಗರವನ್ನು ತಂದಿದ್ದಾರೆ. ನಟ ಕಮಲ್ ಹಾಸನ್ ಅವರು ಇಲ್ಲಿಯ ವರೆಗೆ ತಮಿಳು - ಕನ್ನಡ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಕ್ಷಮೆ ಕೇಳಿಲ್ಲ. ಈಗಾಗಲೇ ಈ ಪ್ರಕರಣ ನಡೆದು ಎರಡು ವಾರಗಳೇ ಆಗುತ್ತಿವೆ. ಎರಡು ವಾರಗಳಾದರೂ ಕಮಲ್‌ ಹಾಸನ್ ಇನ್ನೂ ಕ್ಷಮೆ ಕೇಳಿಲ್ಲ. ಈಗ ಅವರು ಕ್ಷಮೆ ಕೇಳಿದರೂ ಅದನ್ನು ಸ್ವೀಕರಿಸುವ ಹಂತದಲ್ಲಿ ಕನ್ನಡಿಗರು ಇಲ್ಲ.  <a href=https://youtube.com/embed/Em7QHmERH6c?autoplay=1&mute=1><img src=https://img.youtube.com/vi/Em7QHmERH6c/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕಾಡಿಬೇಡಿ ಕ್ಷಮೆ ಕೇಳಿಸಿಕೊಳ್ಳುವಂತೆ ಆಗಬಾರದು ಅವರೇ ಘನತೆಯಿಂದ ಕ್ಷಮೆ ಕೇಳಬೇಕಿತ್ತು. ಅವರು ಅದನ್ನು ಬಿಟ್ಟು ಅನ್ಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ಕನ್ನಡಿಗರು ಕೋಪಗೊಂಡಿದ್ದಾರೆ. ಈ ರೀತಿ ಇರುವಾಗಲೇ ನಟಿ ರಶ್ಮಿಕಾ ಮಂದಣ್ಣ ಅವರು ತಮಿಳುನಾಡಿನಲ್ಲಿ ಹೋಗಿ ಮಾತನಾಡಿರುವುದು ಟ್ರೋಲ್‌ಗೆ ಕಾರಣವಾಗಿದೆ. ತಮಿಳುನಾಡಿನ ರಾಜಧಾನಿ ಚೆನ್ನೈನ ಮೇಲೆ ಇರುವ ಅಭಿಮಾನವನ್ನು ರಶ್ಮಿಕಾ ಮಂದಣ್ಣ ಅವರು ತೋರಿಸಿಕೊಂಡಿದ್ದು ಇದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. 
ಇನ್ನು ರಶ್ಮಿಕಾ ಈ ರೀತಿ ಬೇರೆ ರಾಜ್ಯ ಹಾಗೂ ಸಿಟಿಗಳ ಬಗ್ಗೆ ಮಾತನಾಡಿರುವುದು ಇದೇ ಮೊದಲೇನು ಅಲ್ಲ. ಕೆಲವೇ ತಿಂಗಳುಗಳ ಹಿಂದೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಬಗ್ಗೆ ಅವರು ಕೊಟ್ಟಿದ್ದ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ನಾನು ಹೈದರಾಬಾದ್‌ನವಳು ಅಂತ ಅವರು ಹೇಳಿದ್ದರು. ಇದೀಗ ರಶ್ಮಿಕಾ ಮಂದಣ್ಣ ಅವರು ತಮಿಳಿನ ನಟ ಧನುಷ್ ಅವರೊಂದಿಗೆ ಕುಬೇರ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಸಿನಿಮಾ ಇದೇ ಜೂನ್ 20ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರ ಜೋರಾಗಿ ನಡೆದಿದ್ದು, ರಶ್ಮಿಕಾ ಅವರು ಚೆನ್ನೈ ಪ್ರೇಮವನ್ನು ಮೆರೆದಿದ್ದಾರೆ. ಅಲ್ಲದೇ ನಾನು ಮೊದಲು ಕಲಿತ ಭಾಷೆ ತಮಿಳು ಅಂತ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.