'50 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ ತಂದೆ, ಮೊದಲ ರಾತ್ರಿಯಲ್ಲಿ ದೊಡ್ಡ ಎಡವಟ್ಟು;

 

ಗಂಡನ ಅಕ್ರಮ ಸಂಬಂಧದಿಂದ ಬೇಸತ್ತ 22 ವರ್ಷದ ಗೃಹಿಣಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ. ಕಾವ್ಯ ನೇಣಿಗೆ ಶರಣಾಗಿರುವ ಗೃಹಿಣಿ. ಮೂಲತಃ ತುಮಕೂರಿನ ಕುಣಿಗಲ್ ನಿವಾಸಿಯಾಗಿರುವ ಕಾವ್ಯ ಅವರಿಗೆ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಪ್ರವೀಣ್ ಎಂಬಾತನೊಂದಿಗೆ ಮದುವೆಯಾಗಿತ್ತು.

ಇನ್ನು ಮಗಳ ಸಾವಿಗೆ ಪತಿ ಪ್ರವೀಣ್​ನೇ ಕಾರಣವೆಂದು ಪ್ರವೀಣ್ ಸೇರಿ ನಾಲ್ವರ ವಿರುದ್ಧ ಮೃತಳ ಪೋಷಕರು ದೂರು ದಾಖಲಿಸಿದ್ದಾರೆ. ಅಳಿಯನ ಅಕ್ರಮ ಸಂಬಂಧಕ್ಕೆ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಎರಡು ವರ್ಷದ ಹಿಂದೆ ಅರ್ಧಕೆಜಿ ಚಿನ್ನಕೊಟ್ಟು, 50 ಲಕ್ಷ ಖರ್ಚು ಮಾಡಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದೆವು. ಇತ್ತಿಚೇಗೆ ಮೊಮ್ಮಗನ ಹುಟ್ಟುಹಬ್ಬ ನಡೆದಿತ್ತು.ಮೃತ ಕಾವ್ಯಳ ಪತಿ ಪ್ರವೀಣ್, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ. ಆದರೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ ಅಳಿಯನ ಜೊತೆ ಹುಡುಗಿಯೊಬ್ಬಳ ಅಕ್ರಮ ಸಂಬಂಧವಿತ್ತು. ಹೆಂಡತಿ, ಮಗುವಿಗಿಂತ ಅವಳೇ ಅಳಿಯನಿಗೆ ಹೆಚ್ಚಾಗಿದ್ದಳು. ಈ ಬಗ್ಗೆ ಪ್ರಶ್ನೆ ಮಾಡಿದರೆ ತಂಗಿ ಎಂದು ಹೇಳಿದ್ದ. ಕುಟುಂಬಸ್ಥರೇ ಮೃತದೇಹವನ್ನು ಕೆಳಗಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾವ್ಯ ನೇಣು ಹಾಕಿಕೊಂಡಿದ್ದು ಆದರೆ ಅವರ ಕುಟುಂಬಸ್ಥರೇ ಮೃತದೇಹವನ್ನು ಕೆಳಕ್ಕೆ ಇಳಿಸಿದ್ದಾರೆ. ದೇಹದ ಮೇಲೆ ಹಲವು ಗಾಯಗಳಿದ್ದು ಇದನ್ನು ಮುಚ್ಚಿಡಲಾಗಿದೆ. ನಮಗೆ ಫೋನ್ ಮಾಡಿ ಸಂಜೆ 5ಕ್ಕೆ ಮಾಹಿತಿ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಪ್ರವೀಣ್ ಎಂಜಿನಿಯರ್ ಆಗಿದ್ದರೂ ಕೆಲಸ ಮಾಡುತ್ತಿರಲಿಲ್ಲ. ಆತನಿಗೆ ಬೇರೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಇತ್ತು ಎಂದು ಮೃತ ಗೃಹಿಣಿ ಪೋಷಕರು ಆರೋಪಿಸಿದ್ದಾರೆ. 

ಸಂತ್ರಸ್ತೆಯ ಸಂಬಂಧಿಕರು ಹಲ್ಲೆಗೆ ಯತ್ನಿಸಿದ್ದರಿಂದ ಆರೋಪಿಗಳನ್ನು ಬಂಧಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.