ಗಗನಸಖಿಯ ಫಿಗರ್ ನೋಡಿ ತಡೆಯಲಾಗದೆ ರೇಟ್ ಕೇಳಿದ ವಿದೇಶಿ ಪ್ರಜೆ, ಮುಂದೇನಾಯ್ತು ಗೊತ್ತಾ

 

ವಿಮಾನದಲ್ಲಿ ವಿದೇಶಿ ಪ್ರಜೆಯು ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಾಲ್ಡೀವ್ಸ್ ನಿಂದ ಬೆಂಗಳೂರು ಬರ್ತಿದ್ದ ವಿಮಾನದಲ್ಲಿ ಗಗನ ಸಖಿಗೆ ನೀನ್ನ ರೇಟ್ ಎಷ್ಟು? ಎಷ್ಟಕ್ಕೆ ಬರ್ತಿಯಾ.? ಎಷ್ಟು ಡಾಲರ್ ಕೊಟ್ರೆ ಬರ್ತಿಯಾ? ಎಂದು ಕೇಳಿದ್ದಾನೆ. 100 ಡಾಲರ್ ಕೊಟ್ರೆ ಸಾಕಾ? ಅಥವಾ ಇನ್ನೂ ಬೇಕೆ ಎಂದೆಲ್ಲಾ ಕೇಳಿದ್ದಾನೆ, ಇಷ್ಟಕ್ಕೇ ತನ್ನ ಕಿರುಕುಳವನ್ನು ನಿಲ್ಲಿಸದೇ ಗಗನಸಖಿ ತನ್ನ ಸೀಟಿನ ಬಳಿ ಹೋಗುವಾಗ ಬ್ಯಾಡ್ ಟಚ್ ಮಾಡಿದ್ದಾನೆ. 

ವಿಮಾನದಲ್ಲಿ ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿದೇಶಿ ಪ್ರಜೆ ಅರೆಸ್ಟ್ ಆಗಿದ್ದು, ಅಕ್ರಂ ಅಹಮದ್ ಬಂಧಿತ ಆರೋಪಿಯಾಗಿದ್ದಾನೆ. ಗಗನಸಖಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಬಿಜಿನೆಸ್ ವೀಸಾದಲ್ಲಿ ಅರೋಪಿ ಅಕ್ರಂ ಮಾಲ್ಡೀವ್ಸ್‌ನಿಂದ ಭಾರತಕ್ಕೆ ಪ್ರಯಾಣ ಮಾಡುತ್ತಿದ್ದಾಗ ಹೀಗೆ ಕಿರುಕುಳ ನೀಡಿದ್ದಾನೆ. ಆರೋಪಿ ಅಕ್ರಮ್ ಗಗನಸಖಿಗೆ I have been looking for a girl like you , how much you charge for service and when will you be free ಎಂದು ಕೇಳಿದ್ದಾನೆ. ನಂತ್ರ ಕ್ರೂ ಸರ್ವಿಸ್ ಗೆ 10 ಡಾಲರ್ ಬದಲಾಗಿ 100 ಡಾಲರ್ ನೀಡ್ತಿನಿ. 

ಅದನ್ನು ನೀನೆ ಇಟ್ಟಿಕೋ ಎಂದು ಹೇಳಿದ್ದಾನೆ.. ನಂತ್ರ ಗಗನ ಸಖಿಯ ದೇಹವನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಇಷ್ಟಕ್ಕೇ ಸುಮ್ಮನಾಗದೇ, ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ಮೇಲೆ ಎದ್ದು ನಿಲ್ಲುತಿದ್ದನು. ಈ ವೇಳೆ ಕುಳಿತುಕೊಳ್ಳಿ ಎಂದು ತಿಳಿಸಿದಾಗ ಮತ್ತೊರ್ವ ಗಗನ ಸಖಿಗೆ I love rough things and you are very rough ಎಂದು ಹೇಳಿ ಮುಜುಗರ ಉಂಟು ಮಾಡಿದ್ದನು. ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ ಎನ್ನಲಾಗ್ತಿದೆ.